Site icon Vistara News

ಇಂಗ್ಲೆಂಡ್‌ ಕ್ರಿಕೆಟ್‌ ಟೀಮ್‌ಗೆ ನೂತನ ನಾಯಕನನ್ನು ಆಯ್ಕೆ ಮಾಡಿದ ECB, ಯಾರವರು?

Buttler doubt for match against Delhi, Mitchell Marsh who went to town for marriage

ಲಂಡನ್‌: ಅತ್ತ ಇಂಗ್ಲೆಂಡ್‌ ಟೆಸ್ಟ್‌ ತಂಡ ಬೆನ್‌ ಸ್ಟೋಕ್ಸ್‌ ನೇತೃತ್ವದಲ್ಲಿ ಭಾರತದ ವಿರುದ್ಧ ಆಡಲು ಸಜ್ಜಾಗುತ್ತಿರುವ ನಡುವೆ ಆಂಗ್ಲರ ಸೀಮಿತ ಓವರ್‌ಗಳ ತಂಡಕ್ಕೆ ಹೊಸ ನಾಯಕನನ್ನು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ (ECB) ಆಯ್ಕೆ ಮಾಡಿದೆ. ಅವರೇ ಐಪಿಎಲ್‌ ೧೫ನೇ ಆವೃತ್ತಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ಪರ ನಾಲ್ಕು ಶತಕಗಳ ಸಮೇತ ಒಟ್ಟಾರೆ ೮೬೩ ರನ್‌ ಬಾರಿಸಿ ಮಿಂಚಿದ ಜೋಸ್‌ ಬಟ್ಲರ್‌.

ಇಂಗ್ಲೆಂಡ್‌ ಸೀಮಿತ ಓವರ್‌ಗಳ ತಂಡ ನಾಯಕರಾಗಿದ್ದ ಇಯಾನ್‌ ಮಾರ್ಗನ್‌ ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಗೆ ಹೊಸ ನಾಯಕನ ಹುಡುಕಾಟ ಅನಿವಾರ್ಯವಾಗಿತ್ತು. ಈ ವೇಳೆ ಆಯ್ಕೆ ಮಂಡಳಿಯ ಕಣ್ಣಿಗೆ ಬಿದ್ದಿರುವುದು ಹೊಡೆಬಡಿಯ ದಾಂಡಿಗ ಜೋಸ್‌ ಬಟ್ಲರ್‌.

ಇಯಾನ್‌ ಮಾರ್ಗನ್‌ ನಾಯಕರಾಗಿದ್ದಾಗ ಬಟ್ಲರ್‌ ಉಪನಾಯಕನ ಹೊಣೆ ಹೊತ್ತುಕೊಂಡಿದ್ದರು. ಅಲ್ಲದೆ, ೯ ಏಕದಿನ ಹಾಗೂ ೫ ಟಿ೨೦ ಪಂದ್ಯಗಳಿಗೆ ನಾಯಕರಾಗಿಯೂ ಅನುಭವವಿದೆ . ಜತೆಗೆ ಇತ್ತೀಚಿನ ದಿನಗಳಲ್ಲಿ ಅವರು ಬ್ಯಾಟಿಂಗ್‌ ವೈವಭವನ್ನೇ ಸೃಷ್ಟಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಮುಕ್ತಾಯಗೊಂಡ ನೆದರ್ಲೆಂಡ್ಸ್‌ ಪ್ರವಾಸ ಸರಣಿಯಲ್ಲಿ ಇಂಗ್ಲೆಂಡ್‌ ತಂಡ ಏಕದಿನ ಮಾದರಿಯಲ್ಲಿ ದಾಖಲೆಯ ೪೯೮ ರನ್‌ ಬಾರಿಸಿದ್ದ ವೇಳೆ ಬಟ್ಲರ್‌ ೭೦ ಎಸೆತಗಳಲ್ಲಿ ೧೬೨ ರನ್‌ ಗಳಿಸಿದ್ದರು. ಅವರ ಈ ಎಲ್ಲ ಪರಾಕ್ರಮದ ಹಿನ್ನೆಲೆಯಲ್ಲಿ ಬಟ್ಲರ್‌ಗೆ ನಾಯಕತ್ವ ವಹಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: Eng vs Ned | 50 ಓವರ್‌ಗಳಲ್ಲಿ 498 ರನ್!ಇಂಗ್ಲೆಂಡ್‌ ತಂಡದ ವಿಶ್ವ ದಾಖಲೆ!

Exit mobile version