Site icon Vistara News

ಬಟ್ಲರ್ ವಿಧ್ವಂಸಕ ಆಟ, ಹಲವು ದಾಖಲೆ ಧೂಳೀಪಟ!

jos buttler

ಬೆಂಗಳೂರು: 16 ಇನ್ನಿಂಗ್ಸ್‌, 824 ರನ್ಸ್‌, ಅತ್ಯಧಿಕ ಸ್ಕೋರ್‌ 116, ನಾಲ್ಕು ಶತಕ, ನಾಲ್ಕು ಅರ್ಧ ಶತಕಗಳು, 78 ಫೋರ್‌, 45 ಸಿಕ್ಸ್‌ಗಳು… ಇವು ಐಪಿಎಲ್‌-2022ರಲ್ಲಿ ರಾಜಸ್ಥಾನ್‌ ಆಟಗಾರ ಜೋಸ್‌ ಬಟ್ಲರ್ ಅಂಕಿ ಅಂಶಗಳು. ಯಾವುದೇ ನಿರೀಕ್ಷೆಗಳಿಲ್ಲದೆ ಬಂದು ವಿಧ್ವಂಸಕ ಬ್ಯಾಟಿಂಗ್‌ ಮೂಲಕ ಹಲವು ದಾಖಲೆಗಳನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಅದ್ಭುತ ಪ್ರದರ್ಶನದೊಂದಿಗೆ ಬಟ್ಲರ್ ಈ ಸೀಸನ್‌ನಲ್ಲಿ 16 ಪಂದ್ಯಗಳಲ್ಲಿ 824 ರನ್‌ ಬಾರಿಸುವ ಮೂಲಕ ಆರೆಂಜ್‌ ಕ್ಯಾಪ್‌ ಪಡೆಯುವ ಜತೆಗೆ ರಾಜಸ್ಥಾನ್‌ ರಾಯಲ್ಸ್‌ ತಂಡ ಪೈನಲ್‌ಗೇರುವಲ್ಲಿ ಪ್ರಮಖ ಪಾತ್ರ ವಹಿಸಿದ್ದಾರೆ. ಆರ್‌ಸಿಬಿ ವಿರುದ್ಧದ ಕ್ವಾಲಿಫೈಯರ್‌-2 ಮ್ಯಾಚ್‌ನಲ್ಲಿ ಅದ್ಭುತ ಬ್ಯಾಟಿಂಗ್‌ನಿಂದ 14 ವರ್ಷಗಳ ನಂತರ ಆರ್‌ಆರ್‌ ತಂಡ ಫೈನಲ್‌ಗೇರಲು ಕಾರಣರಾಗಿದ್ದಾರೆ.

ಐಪಿಲ್‌ ಚುಟುಕು ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಪ್ಲೇಆಫ್‌ ಮ್ಯಾಚ್‌ನಲ್ಲಿ ಸೆಂಚುರಿ ಸಾಧಿಸಿದ ಹೆಗ್ಗಳಿಕೆ ಪಡೆದ ಇವರು, ಕ್ವಾಲಿಫೈಯರ್‌-2ರಲ್ಲಿ ಈ ದಾಖಲೆ ಮಾಡಿದ 3ನೇ ಬ್ಯಾಟರ್‌ ಆಗಿದ್ದಾರೆ. ಇದಕ್ಕೂ ಮೊದಲು ವೀರೇಂದ್ರ ಸೆಹ್ವಾಗ್‌, ಮುರಳಿ ವಿಜಯ್‌ ಈ ಸಾಧನೆ ಮಾಡಿದ್ದರು.

ಇವರು ಒಂದು ಐಪಿಎಲ್‌ ಆವೃತ್ತಿಯಲ್ಲಿ 4 ಶತಕ ಗಳಿಸಿ, 2016ರಲ್ಲಿ ಆರ್ ಸಿ‌ ಬಿ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರ 4 ಶತಕಗಳ (973 ರನ್) ಸಾಧನೆ ಸರಿಗಟ್ಟಿದ್ದಾರೆ.‌ ಒಟ್ಟಾರೆಯಾಗಿ 2021ರಲ್ಲಿ ಸನ್‌ ರೈಸರ್ಸ್‌ ಎದುರು 1 ಶತಕ ಹಾಗೂ ಈ ಬಾರಿಯ 4 ಶತಕ ಸೇರಿ ಒಟ್ಟು ಐದು ಶತಕ ದಾಖಲಿಸಿದ್ದಾರೆ. ಈ ಮೂಲಕ ಐಪಿಎಲ್‌ ಇತಿಹಾಸದಲ್ಲಿ ವಿರಾಟ್‌ ಕೊಹ್ಲಿ ಅವರ ಒಟ್ಟು 5 ಶತಕಗಳ ದಾಖಲೆಯನ್ನೂ ಸರಿಗಟ್ಟಿದ್ದಾರೆ. ಈ ಪಟ್ಟಿಯಲ್ಲಿ ಕ್ರಿಸ್‌ ಗೇಲ್‌ 6 ಶತಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

ಐಪಿಎಲ್‌ ಪ್ಲೇಆಫ್‌ ಮ್ಯಾಚ್‌ಗಳಲ್ಲಿ ಶತಕ ಗಳಿಸಿದವರು

1. ವೀರೇಂದ್ರ ಸೆಹ್ವಾಗ್‌(ಪಂಜಾಬ್): 122 ರನ್‌, 2014ರಲ್ಲಿ ಸಿಎಸ್‌ಕೆ ವಿರುದ್ಧ.
2. ಷೇನ್‌ ವಾಟ್ಸನ್(ಸಿಎಸ್‌ಕೆ): 177 ರನ್ ನಾಟೌಟ್‌, 2018ರಲ್ಲಿ ಎಸ್‌ಆರ್‌ಎಚ್‌ ವಿರುದ್ಧ.
3. ವೃದ್ಧಿಮಾನ್‌ ಸಹ(ಪಂಜಾಬ್‌ ಕಿಂಗ್ಸ್): 115‌ ರನ್‌ ನಾಟೌಟ್, 2014ರಲ್ಲಿ ಕೆಕೆಆರ್‌ ವಿರುದ್ಧ.
4. ರಜತ್‌ ಪಾಟಿದಾರ್‌ (ಆರ್‌ಸಿಬಿ): 112 ನಾಟೌಟ್‌, ಎಲಿಮಿನೇಟರ್‌ ಪಂದ್ಯ 2022, ಲಖನೌ ಸೂಪರ್‌ಜೈಂಟ್ಸ್‌ ವಿರುದ್ಧ.
5. ಜೋಸ್‌ ಬಟ್ಲರ್ (ರಾಜಸ್ಥಾನ್‌ ರಾಯಲ್ಸ್): 106‌ ರನ್‌ ನಾಟೌಟ್‌, ಆರ್ ಸಿ ಬಿ ಜತೆಗಿನ 2022ರ ಕ್ವಾಲಿಫೈಯರ್-2‌ ಪಂದ್ಯ.

Exit mobile version