Site icon Vistara News

ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿದ ಡು ಪ್ಲೆಸಿಸ್; ಈ ಸಲ ಕಪ್‌ ನಮ್ದೇ ಎಂದ ಆರ್​ಸಿಬಿ ಅಭಿಮಾನಿಗಳು

Faf du Plessis

ಜೊಹಾರ್ನ್​ಬರ್ಗ್​: ಆರ್​ಸಿಬಿ ತಂಡದ ನಾಯಕ ಫಾಪ್ ಡು ಪ್ಲೆಸಿಸ್(Faf du Plessis) ಅವರು ಸೌತ್​ ಆಫ್ರಿಕಾ ಟಿ20 ಲೀಗ್​ನಲ್ಲಿ(SA20) ಸ್ಫೋಟಕ ಬ್ಯಾಟಿಂಗ್​ ನಡೆಸಿ ಗಮನಸೆಳೆದಿದ್ದಾರೆ. ಇವರ ಬ್ಯಾಟಿಂಗ್​ ಕಂಡ ಆರ್​ಸಿಬಿ(RCB) ಅಭಿಮಾನಿಗಳು ಈ ಸಲ ಖಚಿತವಾಗಿ ಕಪ್​ ನಮ್ದೇ ಎಂದು ಹೇಳಿದ್ದಾರೆ.

ಸೋಮವಾರ ರಾತ್ರಿ ಕೇಪ್​ಟೌನ್​ ನ್ಯೂಲಾಂಡ್ಸ್​ ಮೈದಾನದಲ್ಲಿ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಎಂಐ ಕೇಪ್​ಟೌನ್(MI Cape Town) ತಂಡವು 3 ವಿಕೆಟ್​ನಷ್ಟಕ್ಕೆ 80 ರನ್​ ಕಲೆ ಹಾಕಿತು. ವಿಚಿತ್ರ ಎಂದರೆ ಡಕ್​ವರ್ತ್ ಲೂಯಿಸ್​ ನಿಯಮದ ಪ್ರಕಾರ ಎದುರಾಳಿ ಜೋಬರ್ಗ್ ಸೂಪರ್ ಕಿಂಗ್ಸ್(Joburg Super Kings) ತಂಡಕ್ಕೆ 8 ಓವರ್​ಗಳಲ್ಲಿ 98 ರನ್​ಗಳ ಟಾರ್ಗೆಟ್ ನೀಡಲಾಯಿತು.

ಈ ಮೊತ್ತವನ್ನು ದಿಟ್ಟ ರೀತಿಯಿಂದ ಬೆನ್ನಟ್ಟಿದ ಜೋಬರ್ಗ್ ತಂಡದ ನಾಯಕ ಹಾಗೂ ಆರಂಭಿಕ ಆಟಗಾರ ಫಾಫ್ ಡುಪ್ಲೆಸಿಸ್ ಮತ್ತು ಲೆಯುಸ್ ಡು ಪ್ಲೂಯ್ ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿ ಕೇವಲ 5.4 ಓವರ್​ಗಳಲ್ಲಿ ವಿಕೆಟ್​ ನಷ್ಟವಿಲ್ಲದೆ 98 ರನ್​ ಬಾರಿಸಿ 10 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತು.

ಲೆಯುಸ್ ಡು ಪ್ಲೂಯ್ 14 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ 41 ರನ್ ಬಾರಿಸಿದರೆ, ಫಾಫ್ ಡು ಪ್ಲೆಸಿಸ್ 20 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 4 ಬೌಂಡರಿಯೊಂದಿಗೆ ಅಜೇಯ 50 ರನ್​ ಬಾರಿಸಿ ಅರ್ಧಶತಕ ಪೂರ್ತಿಗೊಳಿಸಿದರು. 39ನೇ ವಯಸ್ಸಲ್ಲೂ ಡು ಪ್ಲೆಸಿಸ್​ ಈ ಸೊಗಸಾದ ಬ್ಯಾಟಿಂಗ್​ ನಡೆಸಿದ್ದನ್ನು ಕಂಡು ಆರ್​ಸಿಬಿ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಜತೆಗೆ ಈ ಬಾರಿ ನಿಮ್ಮ ನಾಯಕತ್ವದಲ್ಲಿ ತಂಡ ಕಪ್​ ಗೆಲ್ಲಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ Trent Boult: ಟ್ರೆಂಡ್​ ಆದ ಟ್ರೆಂಟ್ ಬೌಲ್ಟ್ ಫ್ಲೈಯಿಂಗ್‌ ಕ್ಯಾಚ್​; ವಿಡಿಯೊ ವೈರಲ್​

ಆರ್​ಸಿಬಿ ನಾಯಕತ್ವ ಕೈ ತಪ್ಪುವ ಸಾಧ್ಯತೆ


ಕಳೆದ ಎರಡು ಸೀಸನ್​ನಲ್ಲಿ ಡು ಪ್ಲೆಸಿಸ್ ಆರ್​ಸಿಬಿ ತಂಡವನ್ನು ಮುನ್ನಡೆಸಿದರೂ ತಂಡದ ಭವಿಷ್ಯ ಮಾತ್ರ ಬದಲಾಗಲಿಲ್ಲ. ಕಳೆದ ಬಾರಿಯಂತೂ ಲೀಗ್​ನಿಂದಲೇ ಹೊರಬಿದ್ದಿತ್ತು. ಈ ಬಾರಿ ಅವರನ್ನು ನಾಯಕ್ವದಿಂದ ಕೆಳಗಿಳಿಸಲಾಗುವುದು ಎನ್ನುವ ಮಾತುಗಳು ಕೇಳಿ ಬಂದಿವೆ. ಅವರ ಸ್ಥಾನಕ್ಕೆ ಈ ಹಿಂದೆ ನಾಯಕನಾಗಿದ್ದ ವಿರಾಟ್​ ಕೊಹ್ಲಿಯನ್ನು ಮತ್ತೆ ನಾಯಕನಾಗಿ ನೇಮಕ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಕೊಹ್ಲಿ ಭಾರತ ತಂಡದ ನಾಯಕನಾಗಿದ್ದಾಗ ಐಪಿಎಲ್​ನಲ್ಲಿಯೂ ತಂಡವನ್ನು ಮುನ್ನಡೆಸುವುದು ಕಷ್ಟವಾಗುತ್ತದೆ ಕೆಲಸದ ಒತ್ತಡ ಹೆಚ್ಚಾಗಿದೆ ಎಂದು ನಾಯಕತ್ವದಿಂದ ಕೆಳಗಿಳಿದಿದ್ದರು. ಹೀಗಾಗಿ ಡು ಪ್ಲಸಿಸ್​ ಅವರನ್ನು ನಾಯಕನಾಗಿ ನೇಮಕ ಮಾಡಲಾಗಿತ್ತು.

Exit mobile version