Site icon Vistara News

jyothi Yarraji : ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಇತಿಹಾಸ ಬರೆದ ಜ್ಯೋತಿ ಯರ್ರಾಜಿ

jyothi yarraji

ಮುಂಬೈ, : ಇರಾನ್ ರಾಜಧಾನಿ ಟೆಹರಾನ್ ನಲ್ಲಿ ನಡೆಯುತ್ತಿರುವ ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ರಿಲಯನ್ಸ್ ಫೌಂಡೇಷನ್ ನ ಜ್ಯೋತಿ ಯರ್ರಾಜಿ ಅವರು ಭಾರತಕ್ಕೆ ಮೊದಲ ಪದಕವನ್ನು ಗೆದ್ದಿದ್ದಾರೆ. 60 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ 8.12 ಸೆಕೆಂಡುಗಳ ಹೊಸ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದರು. ಜ್ಯೋತಿಯವರಿಗೆ ಈ ಪ್ರದರ್ಶನವು 2024ರ ಋತುವಿಗೆ ಅತ್ಯುತ್ತಮ ಆರಂಭವಾಗಿದೆ. ಕಳೆದ ವರ್ಷ ಕಝಕಸ್ತಾನ್‌ನಲ್ಲಿ ನಡೆದ ಆವೃತ್ತಿಯಲ್ಲಿ ತಾವೇ ಮಾಡಿದ್ದ ರಾಷ್ಟ್ರೀಯ ದಾಖಲೆಯನ್ನು ಉತ್ತಮಗೊಳಿಸಿದರು. ಅಂದ ಹಾಗೆ ಅಲ್ಲಿ ಅವರು ಬೆಳ್ಳಿ ಗೆದ್ದಿದ್ದರು.

ಈ ಸಾಧನೆ ಕುರಿತು ಮಾತನಾಡಿದ ಜ್ಯೋತಿ ಯರ್ರಾಜಿ, ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಉತ್ತಮ ಅನುಭವ ನೀಡಿತು. ಇದು ಋತುವಿನ ಆರಂಭ ಮತ್ತು ಋತುವಿನ ಮೊದಲ ಅಂತಾರಾಷ್ಟ್ರೀಯ ಸ್ಪರ್ಧೆಯಾಗಿದೆ. ಆದ್ದರಿಂದ ನಾನು ಈ ಪ್ರದರ್ಶನದಿಂದ ತುಂಬ ಸಂತೋಷಗೊಂಡಿದ್ದೇನೆ. ಈ ಚಿನ್ನದ ಪದಕ ವಿಶೇಷವಾಗಿದೆ. ಏಕೆಂದರೆ ಕಳೆದ ವಾರ ತೊಡೆಯ ಹಿಂಭಾಗದ ಮಾಂಸಖಂಡದ ನೋವಿನಿಂದ ಬಳಲುತ್ತಿದ್ದುದರಿಂದ ಆ. ಬಗ್ಗೆ ನಾನು ಸ್ವಲ್ಪ ಚಿಂತೆಗೊಳಗಾಗಿದ್ದೆ. ಆದರೆ ರಿಲಯನ್ಸ್ ಫೌಂಡೇಷನ್‌ನ ನನ್ನ ತಂಡ ಮತ್ತು ಫಿಸಿಯೋಥೆರಪಿಸ್ಟ್‌ಗಳು ನನ್ನನ್ನು ಸ್ಪರ್ಧೆಗೆ ಸಿದ್ಧಗೊಳಿಸಲು ಶ್ರಮಿಸಿದರು. ಸ್ಪರ್ಧೆಗೆ ತಯಾರಾಗಲು ನನಗೆ ಸಹಾಯ ಮಾಡಿದ ಒಡಿಶಾ ಸರ್ಕಾರ ಮತ್ತು ರಿಲಯನ್ಸ್ ಫೌಂಡೇಷನ್‌ಗೆ ನಾನು ಕೃತಜ್ಞಳಾಗಿದ್ದೇನೆ. ಈ ಋತುವನ್ನು ಪ್ರಾರಂಭಿಸಿದ ರೀತಿಯಿಂದ ನನಗೆ ಸಂತೋಷವಾಗಿದೆ,” ಎಂದಿದ್ದಾರೆ.

ಈ ಸ್ಪರ್ಧೆಗಾಗಿ ಜ್ಯೋತಿ ಅವರು ಕಳಿಂಗ ಒಳಾಂಗಣ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ತರಬೇತಿ ಪಡೆದಿದ್ದರು. ಒಡಿಶಾ ರಿಲಯನ್ಸ್ ಫೌಂಡೇಷನ್ ಅಥ್ಲೆಟಿಕ್ಸ್ ಹೈ ಪರ್ಫಾರ್ಮೆನ್ಸ್ ಸೆಂಟರ್ ಆಯೋಜಿಸಿದ್ದ ಮೊದಲ ಒಳಾಂಗಣ ಅಥ್ಲೆಟಿಕ್ಸ್ ಟೆಸ್ಟ್ ಸ್ಪರ್ಧೆಗಳಲ್ಲಿಯೂ ಅವರು ಭಾಗವಹಿಸಿದ್ದರು. ಜ್ಯೋತಿ ಅವರು 2023ರಿಂದ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಅಲ್ಲಿ ಅವರು ಏಷ್ಯನ್ ಗೇಮ್ಸ್‌ನಲ್ಲಿ 100 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದರು ಮತ್ತು ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಪದಕಗಳನ್ನು ಗೆದ್ದರು.

ಜ್ಯೋತಿ ಅವರ ಸಾಧನೆ ಬಗ್ಗೆ ರಿಲಯನ್ಸ್ ಫೌಂಡೇಷನ್‌ನ ಅಥ್ಲೆಟಿಕ್ಸ್ ನಿರ್ದೇಶಕ ಜೇಮ್ಸ್ ಹಿಲ್ಲಿಯರ್ ಮಾತನಾಡಿ, “ಜ್ಯೋತಿಗೆ ಇದು ನಿಜವಾಗಿಯೂ ಉತ್ತಮ ಫಲಿತಾಂಶವಾಗಿದೆ, ನಾವು ಭುವನೇಶ್ವರದಲ್ಲಿ 3 ವಾರಗಳ ತರಬೇತಿ ಶಿಬಿರವನ್ನು ನಡೆಸಿದ್ದೆವು. ಅದು ತುಂಬಾ ಸಹಾಯಕವಾಗಿದೆ. ಋತುವನ್ನು ಒಳ್ಳೆಯ ರೀತಿಯಲ್ಲಿ ಪ್ರಾರಂಭಿಸಲು ಬಯಸಿದ್ದರು. ಅವರು ತರಬೇತಿಯ ಸಮಯದಲ್ಲಿ ಸಣ್ಣ ಗಾಯಕ್ಕೆ ಒಳಗಾಗಿದ್ದರು. ಅದು ಗಂಭೀರ ಸ್ವರೂಪದ್ದೇನೂ ಆಗಿರಲಿಲ್ಲ. ಆದರೆ ಅವರಿಗೆ ಒಂದು ವಾರದವರೆಗೆ ತರಬೇತಿ ನೀಡಲು ಸಾಧ್ಯವಾಗಲಿಲ್ಲ. ಈಗ ಅವರು ಫಾರ್ಮ್‌ಗೆ ಮರಳಿದ್ದಾರೆ. ಇದು ಅವರ ಉತ್ತಮ ಓಟವಾಗಿತ್ತು,” ಎಂದಿದ್ದಾರೆ.

ಇದನ್ನೂ ಓದಿ : Dhawal Kulkarni : ಭಾರತ ತಂಡದ ಮಾಜಿ ವೇಗದ ಬೌಲರ್​ ಕ್ರಿಕೆಟ್​ನಿಂದ ನಿವೃತ್ತಿ

ಜ್ಯೋತಿ ಅವರನ್ನು 2021ರಲ್ಲಿ ರಿಲಯನ್ಸ್ ಫೌಂಡೇಷನ್ ಅಥ್ಲೆಟಿಕ್ಸ್ ಕಾರ್ಯಕ್ರಮಕ್ಕೆ ಗುರುತಿಸಲಾಯಿತು ಮತ್ತು ಒಡಿಶಾದ ನಮ್ಮ ಹೈ ಪರ್ಫಾರ್ಮೆನ್ಸ್ ಸೆಂಟರ್‌ಗಳಲ್ಲಿ ರೆಸಿಡೆನ್ಷಿಯಲ್ ಅಥ್ಲೀಟ್ ಆಗಿದ್ದರು ಮತ್ತು ಇತ್ತೀಚೆಗೆ ಉಲ್ವೆಯ ಜಿಯೋ ಇನ್‌ಸ್ಟಿಟ್ಯೂಟ್‌ನಲ್ಲಿರುವ ರಿಲಯನ್ಸ್ ಫೌಂಡೇಷನ್ ರಾಷ್ಟ್ರೀಯ ಅಥ್ಲೆಟಿಕ್ಸ್ ಸೆಂಟರ್‌ನಲ್ಲಿ ಸಹ ಇದ್ದರು.

ಒಟ್ಟು 15 ಅಥ್ಲೀಟ್‌ಗಳ ಪೈಕಿ, ಏಷ್ಯನ್ ಒಳಾಂಗಣ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ 7 ಅಥ್ಲೀಟ್‌ಗಳು ಉಲ್ವೆ (ಸ್ಪ್ರಿಂಟ್ಸ್ ಮತ್ತು ಥ್ರೋಸ್), ಕೂನೂರ್ (ಎಂಡ್ಯುರೆನ್ಸ್) ಮತ್ತು ಭುವನೇಶ್ವರ್ (ಜಂಪ್ಸ್) ನಲ್ಲಿರುವ ರಿಲಯನ್ಸ್ ಫೌಂಡೇಷನ್ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿದ್ದರು.

ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿರುವ ರಿಲಯನ್ಸ್ ಫೌಂಡೇಷನ್ ಅಥ್ಲೀಟ್‌ಗಳು:

Exit mobile version