ಮುಂಬಯಿ: ಭಾರತ ಕ್ರಿಕೆಟ್ ತಂಡದ ಆಟಗಾರರಿಗೂ ಬಾಲಿವುಡ್ ನಟಿಯರಿಗೂ ಅವಿನಾಭಾವ ಸಂಬಂಧವಿದೆ. ಇದಕ್ಕೆ ಪೂರಕವೆಂಬಂತೆ ಹಲವು ಟೀಮ್ ಇಂಡಿಯಾದ ಆಟಗಾರರು ಸಿನಿಮಾ ನಟಿಯರನ್ನು ಮದುವೆಯಾಗಿದ್ದಾರೆ. ಇದೀಗ ಯಾವ ಕ್ರಿಕೆಟಿಗರು ನಟಿಯರನ್ನು ವಿವಾಹವಾಗಿದ್ದಾರೆ ಎಂಬ ಮಾಹಿತಿ ಈ ಕೆಳಗಿನಂತಿದೆ.
ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ: ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ನಟಿ ಅನುಷ್ಕಾ ಶರ್ಮಾ ಅವರನ್ನು 2017 ರಲ್ಲಿ ಇಟಲಿಯಲ್ಲಿ ವಿವಾಹವಾದರು. 2013 ರಲ್ಲಿ ಜಾಹೀರಾತಿನ ಚಿತ್ರೀಕರಣದ ವೇಳೆ ಇಬ್ಬರು ಭೇಟಿಯಾಗಿ ಬಳಿಕ ಪ್ರೀತಿಗೆ ಮಾರ್ಪಾಡಾಯಿತು. ಇದೀಗ ವಿರುಷ್ಕಾ ಜೋಡಿಗೆ ವಾಮಿಕಾ ಎಂಬ ಮುದ್ದು ಮಗಳಿದ್ದಾಳೆ.
ಯುವರಾಜ್ ಸಿಂಗ್-ಹೇಜೆಲ್ ಕೀಚ್: ಟೀಮ್ ಇಂಡಿಯಾದ ಮಾಜಿ ಸ್ಟಾರ್ ಆಲ್ರೌಂಡರ್ ಯುವರಾಜ್ ಸಿಂಗ್ ಅವರು ನಟಿ ಹೇಜಲ್ ಕೀಚ್ ಅವರೊಂದಿಗೆ 2015 ರಲ್ಲಿ ಬಾಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಬಳಿಕ 2016 ರಲ್ಲಿ ಕೀಚ್ ಅವರನ್ನು ವಿವಾಹವಾದರು. ಈ ಜೋಡಿ ಓರಿಯನ್ ಕೀಚ್ ಸಿಂಗ್ ಎಂಬ ಮುದ್ದಾದ ಮಗನಿದ್ದಾನೆ.
ಹರ್ಭಜನ್ ಸಿಂಗ್-ಗೀತಾ ಬಸ್ರಾ: ಟರ್ಬನೇಟರ್ ಖ್ಯಾತಿಯ ಹರ್ಭಜನ್ ಸಿಂಗ್ ಅವರು ಬಾಲಿವುಡ್ ನಟಿ ಗೀತಾ ಬಾಸ್ರಾ ಜತೆಗಿನ ದೀರ್ಘಕಾಲದ ಗೆಳೆತನದ ಬಳಿಕ 2015 ರಲ್ಲಿ ವಿವಾಹವಾದರು.
ಜಹೀರ್ ಖಾನ್-ಸಾಗರಿಕಾ ಘಾಟ್ಗೆ: ಎಡಗೈ ವೇಗಿ ಜಹೀರ್ ಖಾನ್ ಮತ್ತು ಸಾಗರಿಕಾ ಘಾಟ್ಗೆ 2017 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಚಕ್ ದೇ ಇಂಡಿಯಾದ ನಟಿಯೆಂದೇ ಸಾಗರಿಕಾ ಘಾಟ್ಗೆ ಎಲ್ಲಡೆ ಗುರುತಿಸಿಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯ-ನತಾಶಾ ಸ್ಟಾಂಕೋವಿಕ್: ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ 2020 ರಲ್ಲಿ ವಿವಾಹವಾದರು. ಆದರೆ ವಿಶೇಷವೆಂದರೆ ಇಬ್ಬರೂ ಮದುವೆಗೂ ಮುನ್ನವೇ ಪೋಷಕರಾಗಿದ್ದರು.
ಮೊಹಮ್ಮದ್ ಅಜರುದ್ದೀನ್-ಸಂಗೀತಾ ಬಿಜಲಾನಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ 1985ರಲ್ಲಿ ಜಾಹೀರಾತಿನ ಚಿತ್ರೀಕರಣದ ವೇಳೆ ಸಂಗೀತಾ ಬಿಜಲಾನಿ ಅವರನ್ನು ನೋಡಿ ಪ್ರೀತಿಯಲ್ಲಿ ಬಿದ್ದಿದ್ದರು. ಮೊದಲ ಪತ್ನಿಗೆ ವಿಚ್ಛೇದನ ನೀಡಿ ಇಬ್ಬರೂ 1996 ರಲ್ಲಿ ವಿವಾಹವಾದರು. ಆದರೆ 2010ರಲ್ಲಿ ಈ ಜೋಡಿ ವಿಚ್ಛೇದನ ಪಡೆಯಿತು.