ಕೊಡಗು: ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ ಅಖಾಡಕ್ಕೆ ಹೆಸರಾಗಿರುವ ಮಂಜಿನ ನಗರಿ ಕೊಡಗು ಜಿಲ್ಲೆಯಲ್ಲಿ ಕಬಡ್ಡಿ ಫೀವರ್ ಶುರುವಾಗಿದೆ. ‘ಒಕ್ಕಲಿಗರ ಯುವ ವೇದಿಕೆ ಸೋಮವಾರ ಪೇಟೆ’ ವತಿಯಿಂದ ಕರ್ನಾಟಕ ರಾಜ್ಯ ಹಾಗೂ ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ‘ವಿಸ್ತಾರ ನ್ಯೂಸ್’ ಮಾಧ್ಯಮ ಸಹಯೋಗದೊಂದಿಗೆ ಆಲ್ ಇಂಡಿಯಾ ‘ಎ’ ಗ್ರೇಡ್ ಪುರುಷರ ಕಬಡ್ಡಿ ಟೂರ್ನಮೆಂಟ್ ಆಯೋಜಿಸಲಾಗಿದೆ.
ಸತತ 4ನೇ ಬಾರಿಗೆ ಕೊಡಗು ಜಿಲ್ಲೆಯಲ್ಲಿ ‘ಒಕ್ಕಲಿಗರ ಯುವ ವೇದಿಕೆ’ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. 4.3.2023ರ ಶನಿವಾರ ಹಾಗೂ 5.3.2023ರ ಭಾನುವಾರ ಕಬಡ್ಡಿ ಪಂದ್ಯಗಳು ಸೋಮವಾರಪೇಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ನಡೆಯಲಿವೆ. 3 ಬಾರಿ ಕಬಡ್ಡಿ ಕ್ರೀಡಾಕೂಟ ಆಯೋಜಿಸಿ ಯಶಸ್ವಿಯಾಗಿರುವ ‘ಒಕ್ಕಲಿಗರ ಯುವ ವೇದಿಕೆ’ ಈಗ ಮಂಜಿನ ನಗರಿಯಲ್ಲಿ ಮತ್ತೆ ಕಬಡ್ಡಿ ಕಲರವ ಮೇಳೈಸುವಂತೆ ಮಾಡಲು ಸಜ್ಜಾಗಿದೆ.
ಇದನ್ನೂ ಓದಿ : Kabaddi Tournament: ಯಲವಳ್ಳಿ ಗ್ರಾಮದಲ್ಲಿ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ
ಕಬಡ್ಡಿ ಪಂದ್ಯಾವಳಿಯಲ್ಲಿ ಕಬಡ್ಡಿ ಪ್ರೀಮಿಯರ್ ಲೀಗ್ ನ ಅಂತಾರಾಷ್ಟ್ರೀಯ ಆಟಗಾರರು ಕೂಡ ಭಾವಹಿಸಲಿದ್ದಾರೆ. ಅದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಶ್ರೀಗಳು ಹಾಗೂ ಅದಿಚುಂಚನಗಿರಿ ಹಾಸನ ಶಾಖಮಠದ ಶಂಭುನಾಥ ಶ್ರೀಗಳು ಸಾನಿಧ್ಯ ವಹಿಸಲಿದ್ದಾರೆ. ಒಟ್ಟಾರೆ ಹೇಳೋದಾದರೆ ಕೊಡಗು ಜಿಲ್ಲೆಯಲ್ಲಿ ಕಬಡ್ಡಿ ಫೀವರ್ ಶುರುವಾಗಿದ್ದು, ಅಖಾಡದಲ್ಲಿ ಆಟಗಾರರ ಪಟ್ಟನ್ನು ಎಂಜಾಯ್ ಮಾಡೋಕೆ ಕಬಡ್ಡಿ ಅಭಿಮಾನಿ ಬಳಗ ಕಾತುರದಿಂದ ಕಾಯುತ್ತಿದೆ.