Site icon Vistara News

Kamaran Akmal : ಪಾಕಿಸ್ತಾನ ತಂಡದ ಮಾಜಿ ವಿಕೆಟ್​ಕೀಪರ್​ ಕಮ್ರಾನ್ ಅಕ್ಮಲ್​ ಎಲ್ಲ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ

kamran akmal

#image_title

ಕರಾಚಿ: ಪಾಕಿಸ್ತಾನ ತಂಡದ ಮಾಜಿ ವಿಕೆಟ್​ಕೀಪರ್​ ಬ್ಯಾಟರ್​ ಕಮ್ರಾನ್ ಅಕ್ಮಲ್ (kamran akmal)​ ಎಲ್ಲ ಮಾದರಿಯ ಕ್ರಿಕೆಟ್​ಗೆ ಮಂಗಳವಾರ (ಫೆಬ್ರವರಿ 7) ವಿದಾಯ ಹೇಳಿದ್ದಾರೆ. ಅವರು ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ ತಂಡ ಆಯ್ಕೆ ಪ್ಯಾನೆಲ್​ನಲ್ಲಿ ಅವಕಾಶ ಪಡೆದಿದ್ದು, ಹೊಸ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದಾರೆ.

ಪಾಕಿಸ್ತಾನ ತಂಡದ ಪರವಾಗಿ 2017ರವರೆಗೆ ಅಕ್ಮಲ್​ ಆಡಿದ್ದರು. ಅಲ್ಲದೆ, ಪಾಕಿಸ್ತಾನ ಸೂಪರ್​ ಲೀಗ್​ ಕ್ರಿಕೆಟ್​ನಲ್ಲಿ ಪೆಶಾವರ್​ ಝಲ್ಮಿ ತಂಡದ ಪರವಾಗಿಯೂ ಆಡಿದ್ದರು.

ತಮ್ಮ ನಿವೃತ್ತಿಯ ವಿಚಾರವನ್ನು ಅವರು ಮಾಧ್ಯಮದ ಮುಂದೆ ಪ್ರಕಟಿಸಿದ್ದು, ಪಾಕಿಸ್ತಾನ ಕ್ರಿಕೆಟ್​ ತಂಡದ ಆಯ್ಕೆಗಾರ ಹುದ್ದೆ ದೊರಕಿರುವ ಕಾರಣ ಇನ್ನು ಮುಂದೆ ಸ್ಪರ್ಧಾತ್ಮಕ ಕ್ರಿಕೆಟ್​ನಲ್ಲಿ ಆಡುವುದು ಸಾಧ್ಯವಿಲ್ಲ. ಹೀಗಾಗಿ ವಿದಾಯ ಹೇಳುತ್ತಿದ್ದೇನೆ ಎಂದು ಹೇಳಿದ್ದಾರೆ.

ಇದನ್ನು ಓದಿ : Shaheen Afridi : ಶಾಹಿದ್ ಅಫ್ರಿದಿಯ ಪುತ್ರಿಯನ್ನು ವಿವಾಹವಾದ ಶಹೀನ್ ಅಫ್ರಿದಿ; ಗಣ್ಯರ ಉಪಸ್ಥಿತಿ

ಕಮ್ರಾನ್ ಅಕ್ಮಲ್​ ಹಾಗೂ ಉಮ್ರಾನ್ ಅಕ್ಮಲ್​ ಪಾಕಿಸ್ತಾನ ತಂಡದ ಪರವಾಗಿ ಅಡಿದ ಸಹೋದರರು. ಇವರಿಬ್ಬರು ಪಾಕಿಸ್ತಾನದ ತಂಡದ ಪರ ಹಲವಾರು ಉತ್ತಮ ಇನಿಂಗ್ಸ್​ಗಳಲ್ಲಿ ಪಾಲ್ಗೊಂಡಿದ್ದಾರೆ.

Exit mobile version