Site icon Vistara News

Kamindu Mendis: 147 ವರ್ಷಗಳಲ್ಲೇ ಮೊದಲ ಬಾರಿಗೆ ಟೆಸ್ಟ್​ನಲ್ಲಿ ಐತಿಹಾಸಿಕ ದಾಖಲೆ ಬರೆದ ಲಂಕಾ ಕ್ರಿಕೆಟಿಗ

Kamindu Mendis

ಸಿಲ್ಹೆಟ್: ಬಾಂಗ್ಲಾದೇಶ(Bangladesh ) ವಿರುದ್ಧ ಸಾಗುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಶ್ರೀಲಂಕಾ(Sri Lanka) ಕ್ರಿಕೆಟ್ ತಂಡದ ಆಲ್ ರೌಂಡರ್ ಕಮಿಂದು ಮೆಂಡಿಸ್(Kamindu Mendis) ಅವರು ಅಪರೂಪದ ಸಾಧನೆಯೊಂದನ್ನು ಮಾಡಿದ್ದಾರೆ. 7 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಆಡಿ ಒಂದೇ ಪಂದ್ಯದಲ್ಲಿ 2 ಸೆಂಚುರಿ ದಾಖಲಿಸಿರುವ ಮೈಲಿಗಲ್ಲು ನಿರ್ಮಿಸಿ, 147 ವರ್ಷಗಳ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಐತಿಹಾಸಿಕ ಸಾಧನೆ ಮಾಡಿದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಸಿಲ್ಹೆಟ್​ನಲ್ಲಿ ನಡೆಯುತ್ತಿರುವ ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್​ನ(Bangladesh vs Sri Lanka 1st Test) 3 ನೇ ದಿನದಲ್ಲಿ ಮೆಂಡಿಸ್ ಈ ಸಾಧನೆ ಮಾಡಿದರು. ಮೊದಲ ಇನ್ನಿಂಗ್ಸ್​ನಲ್ಲಿ 102 ರನ್ ಗಳಿಸಿ ಈ ಬಳಿಕ ಎರಡನೇ ಇನ್ನಿಂಗ್ಸ್ ನಲ್ಲಿ 164 ರನ್ ಬಾರಿಸಿದರು. ನಾತಕ ಧನಂಜಯ ಡಿ ಸಿಲ್ವ ಕೂಡ ಈ ಪಂದ್ಯದ ಎರಡೂ ಇನಿಂಗ್ಸ್​ನಲ್ಲಿ ಶತಕ ಬಾರಿಸಿದರು. ಉಭಯ ಆಟಗಾರರ ಈ ಬ್ಯಾಟಿಂಗ್​ ಸಾಹಸದಿಂದ ಲಂಕಾ ಬೃಹತ್​ ಮೊತ್ತವೊವನ್ನು ದಾಖಲಿಸಿ ಬಾಂಗ್ಲಾಗೆ ಸವಾಲೊಡ್ಡಿದೆ.

ಧನಂಜಯ ಡಿ ಸಿಲ್ವ ಮತ್ತು ಕಮಿಂದು ಮೆಂಡಿಸ್ ಟೆಸ್ಟ್​ನ 2 ಇನಿಂಗ್ಸ್​ನಲ್ಲಿ ಶತಕ ಬಾರಿಸುವ ಮೂಲಕ ಈ ಸಾಧನೆ ಮಾಡಿದ ವಿಶ್ವದ 3 ನೇ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಗ್ರೆಗ್ ಚಾಪಲ್- ಇಯಾನ್ ಚಾಪೆಲ್ (ಆಸ್ಟ್ರೇಲಿಯಾ) ಹಾಗೂ ಮಿಸ್ಬಾ-ಉಲ್-ಹಕ್-ಅಜರ್ ಅಲಿ (ಪಾಕಿಸ್ತಾನ) ಜೋಡಿ ಈ ಐತಿಹಾಸಿಕ ಸಾಧನೆ ಮಾಡಿತ್ತು.

ಇದನ್ನೂ ಓದಿ IPL 2024: ಪಂದ್ಯ ಸೋತರೂ ದಾಖಲೆ ಬರೆದ ​ಜಸ್​ಪ್ರೀತ್​ ಬುಮ್ರಾ

ಮೊದಲ ಇನಿಂಗ್ಸ್​ನಲ್ಲಿ 280 ರನ್​ ಗಳಿಸಿದ ಶ್ರೀಲಂಕಾ, ದ್ವಿತೀಯ ಇನಿಂಗ್ಸ್​ನಲ್ಲಿ 418 ರನ್​ ಬಾರಿಸಿತು. ಬಾಂಗ್ಲಾದೇಶ ಮೊದಲ ಇನಿಂಗ್ಸ್​ನಲ್ಲಿ 188 ರನ್​ಗೆ ಸರ್ವಪತನ ಕಂಡಿತು. ಇದೀಗ ದ್ವಿತೀಯ ಇನಿಂಗ್ಸ್​ನಲ್ಲಿ 511 ರನ್​ಗಳ ಗುರಿ ಪಡೆದಿರುವ ಬಾಂಗ್ಲಾ 86 ರನ್​ಗೆ 6 ವಿಕೆಟ್​ ಕಳೆದುಕೊಂಡು ಸೋಲಿನತ್ತ ಮುಖ ಮಾಡಿದೆ. ಇನ್ನೂ ಒಂದು ದಿನದ ಆಟ ಬಾಕಿ ಇದೆ. ಹೀಗಾಗಿ ಲಂಕಾ ಗೆಲುವು ಖಚಿತವಾದಂತಿದೆ. ಬಾಂಗ್ಲಾ ಗೆಲುವಿಗೆ ಇನ್ನೂ 425 ರನ್​ ಬಾರಿಸಬೇಕಿದೆ.

Exit mobile version