Site icon Vistara News

Kane Williamson: ಬ್ರಾಡ್ಮನ್, ಕೊಹ್ಲಿಯ ಶತಕದ ದಾಖಲೆ ಹಿಂದಿಕ್ಕಿದ ಕೇನ್ ವಿಲಿಯಮ್ಸನ್

Kane Williamson

ಮೌಂಟ್ ಮೌಂಗನಿ: ದಕ್ಷಿಣ ಆಫ್ರಿಕಾ(New Zealand vs South Africa 1st Test) ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ನ ಅನುಭವಿ ಬ್ಯಾಟರ್​ ಕೇನ್​ ಮಿಲಿಯಮ್ಸನ್(Kane Williamson) ಶತಕ ಬಾರಿಸುವ ಮೂಲಕ​ ಟೆಸ್ಟ್ ವೃತ್ತಿ ಬದುಕಿನಲ್ಲಿ 30ನೇ ಶತಕ ಪೂರ್ತಿಗೊಳಿಸಿದರು. ಇದೇ ವೇಳೆ ವಿರಾಟ್​ ಕೊಹ್ಲಿ(Virat Kohli) ಮತ್ತು ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್(Don Bradman) ದಾಖಲೆಯನ್ನು ಹಿಂದಿಕ್ಕಿದರು.

ಮೌಂಟ್ ಮೌಂಗನಿಯಲ್ಲಿ ಇಂದು(ಭಾನುವಾರ) ಆರಂಭಗೊಂಡ ಈ ಟೆಸ್ಟ್ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ನ್ಯೂಜಿಲ್ಯಾಂಡ್​ ನಾಯಕ ಕೇನ್​ ವಿಲಿಯಮ್ಸನ್​(112) ಮತ್ತು ಭಾರತದ ಮೂಲದ ರಚಿನ್​ ರವೀಂದ್ರ(118) ಅವರ ಅಜೇಯ ಶತಕದಾಟದ ನೆರವಿನಿಂದ 2 ವಿಕೆಟ್​ಗೆ 258 ರನ್​ ಗಳಿಸಿ ದ್ವಿತೀಯ ದಿನದಾಟಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದೆ.

240ನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಶತಕ ಪೂರ್ತಿಗೊಳಿಸಿದ ವಿಲಿಯಮ್ಸನ್ ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಮತ್ತು ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿಯ ಟೆಸ್ಟ್​ ಶತಕದ ದಾಖಲೆಯನ್ನು ಹಿಂದಿಕ್ಕಿದರು. ಇದು ವಿಲಿಯಮ್ಸನ್ ಅವರ 97ನೇ ಟೆಸ್ಟ್ ಪಂದ್ಯದಲ್ಲಿ ದಾಖಲಾದ ಶತಕವಾಗಿದೆ. ಕೊಹ್ಲಿ ಇದುವರೆಗೆ 113 ಟೆಸ್ಟ್ ಇನ್ನಿಂಗ್ಸ್​ನಲ್ಲಿ 29 ಶತಕ ಸಿಡಿಸಿದ್ದಾರೆ. ಬ್ರಾಡ್ಮನ್ ಕೂಡ 29 ಶತಕ ಬಾರಿಸಿದ್ದರು.

ಇದನ್ನೂ ಓದಿ IND vs ENG 2nd Test: ತಿರುಗೇಟು ನೀಡುತ್ತಿರುವ ಇಂಗ್ಲೆಂಡ್​; ಗೆಲುವಿಗೆ ಬೇಕು 332 ರನ್​

​ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆ ಸಚಿನ್​ ತೆಂಡೂಲ್ಕರ್​ ಹೆಸರಿನಲ್ಲಿದೆ. ಸಚಿನ್​ 51 ಟೆಸ್ಟ್​ ಶತಕ ಬಾರಿಸಿದ್ದಾರೆ. ಪ್ರಸಕ್ತ ಸಾಲಿನ ಕ್ರಿಕೆಟಿಗರಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆ ಆಸ್ಟ್ರೇಲಿಯಾದ ಸ್ಟೀವನ್​ ಸ್ಮಿತ್​ ಹೆಸರಿನಲ್ಲಿದೆ ಅವರು 32* ಶತಕ ಬಾರಿಸಿದ್ದಾರೆ. ದ್ವಿತೀಯ ಸ್ಥಾನವನ್ನು ಜೋ ರೂಟ್​ ಮತ್ತು ವಿಲಿಯಮ್ಸನ್ ಜಂಟಿಯಾಗಿ ಹಂಚಿಕೊಂಡಿದ್ದಾರೆ. ಉಭಯ ಆಟಗಾರರು ಕೂಡ 30 ಶತಕ ಬಾರಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟರ್‌ಗಳ ಪಟ್ಟಿ

ಆಟಗಾರದೇಶಶತಕ
ಸಚಿನ್​ ತೆಂಡೂಲ್ಕರ್​ಭಾರತ51
ಜಾಕ್ ಕಾಲಿಸ್ದಕ್ಷಿಣ ಆಫ್ರಿಕಾ45
ರಿಕಿ ಪಾಂಟಿಂಗ್​ಆಸ್ಟ್ರೇಲಿಯಾ41
ಕುಮಾರ ಸಂಗಕ್ಕಾರಶ್ರೀಲಂಕಾ38
ರಾಹುಲ್ ದ್ರಾವಿಡ್ಭಾರತ36
ಸುನಿಲ್ ಗವಾಸ್ಕರ್ಭಾರತ34
ಬ್ರಿಯಾನ್ ಲಾರಾವೆಸ್ಟ್‌ ಇಂಡೀಸ್34
ಮಹೇಲಾ ಜಯವರ್ಧನೆಶ್ರೀಲಂಕಾ34
ಅಲೆಸ್ಟರ್ ಕುಕ್ಇಂಗ್ಲೆಂಡ್​33
ಸ್ಟೀವನ್​ ಸ್ಮಿತ್​ಆಸ್ಟ್ರೇಲಿಯಾ32*
ಮಾರ್ಕ್​ ವಾಆಸ್ಟ್ರೇಲಿಯಾ32
ಕೇನ್ ವಿಲಿಯಮ್ಸನ್ನ್ಯೂಜಿಲ್ಯಾಂಡ್​30*
ಮ್ಯಾಥ್ಯೂ ಹೇಡನ್ಆಸ್ಟ್ರೇಲಿಯಾ30
ಜೋ ರೂಟ್ಇಂಗ್ಲೆಂಡ್30*
ಶಿವನಾರಾಯಣ್ ಚಂದ್ರಪಾಲ್ವೆಸ್ಟ್‌ ಇಂಡೀಸ್30
ಡಾನ್ ಬ್ರಾಡ್ಮನ್ಆಸ್ಟ್ರೇಲಿಯಾ30
ವಿರಾಟ್ ಕೊಹ್ಲಿಭಾರತ29*
Exit mobile version