ಬೆಂಗಳೂರು: ಮುಂಬರುವ ಏಷ್ಯಾ ಕಪ್ ಹಾಗೂ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವ ಕಪ್ಗೆ (Prasidh Krishna) ಸದೃಢ ತಂಡವನ್ನು ರಚಿಸಲು ಬಿಸಿಸಿಐ ಯೋಜನೆ ರೂಪಿಸಿಕೊಂಡಿದೆ. ಆದರೆ, ಇಬ್ಬರು ಯುವ ಕ್ರಿಕೆಟಿಗರ ಅನುಪಸ್ಥಿತಿ ಭಾರತ ತಂಡಕ್ಕೆ ಕಾಡಲಿದೆ ಎನ್ನಲಾಗುತ್ತಿದೆ. ಅವರೇ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣ. ಅದರಲ್ಲೂ ಪ್ರಸಿದ್ಧ್ ಕೃಷ್ಣ ಅವರು ಸುಧಾರಿಸಿಕೊಳ್ಳುವುದಕ್ಕೆ ಇನ್ನೂ ಆರು ತಿಂಗಳು ಬೇಕು ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರ ಅಲಭ್ಯತೆ ಅನುಮಾನ ಎನ್ನಲಾಗಿದೆ.
ಪ್ರಸಿದ್ಧ್ ಕೃಷ್ಣ ಕಳೆದ ಆರು ತಿಂಗಳಿಂದ ಟೀಮ್ ಇಂಡಿಯಾದ ಪರವಾಗಿ ಆಡುತ್ತಿಲ್ಲ. ಅವರು ಬೆನ್ನು ಒತ್ತಡ ಗಾಯದ ಸಮಸ್ಯೆಯಿಂದಾಗಿ ಅವರು ಆಡುತ್ತಿಲ್ಲ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನಕ್ಕೆ ಒಳಗಾಗುತ್ತಿದ್ದಾರೆ. ಆದರೆ ವರದಿಯ ಪ್ರಕಾರ ಇನ್ನೂ ಆರು ತಿಂಗಳು ಅವರು ಆಡುವುದಕ್ಕೆ ಸಾಧ್ಯವಿಲ್ಲ. ಇನ್ನಷ್ಟು ದಿನಗಳ ಕಾಲ ಪುನಶ್ಚೇತನಕ್ಕೆ ಒಳಗಾಗುತ್ತಿದ್ದಾರೆ.
ಪ್ರಸಿದ್ಧ್ ಕೃಷ್ಣ 2022ರಲ್ಲಿ ಜಿಂಬಾಬ್ವೆ ವಿರುದ್ಧ ಏಕ ದಿನ ಸರಣಿಯಲ್ಲಿ ಆಡಿದ್ದರು. ಅಲ್ಲಿಯವರೆಗೆ 14 ಪಂದ್ಯಗಳಲ್ಲಿ 25 ವಿಕೆಟ್ಗಳನ್ನು ಕಬಳಿಸಿದ್ದಾರೆ. 5.32 ಎಕಾನಮಿ ರೇಟ್ ಹಾಗೂ 23.92 ಸರಾಸರಿ ಹೊಂದಿದ್ದಾರೆ.
ಇದನ್ನೂ ಓದಿ : Indian Cricket Team | ರಾಹುಲ್ಗೆ ಒಡಿಐ ವಿಶ್ವ ಕಪ್ನಲ್ಲಿ ಅವಕಾಶ ಸಿಗದು ಎಂದು ಭವಿಷ್ಯ ನುಡಿದ ಮಾಜಿ ಕೋಚ್
ಪ್ರಸಿದ್ಧ್ ಕೃಷ್ಣಗೆ ಅಗಿರುವ ಒತ್ತಡ ಗಾಯದ ಸಮಸ್ಯೆಯಿಂದ ಹೊರ ಬರಲು ಎಷ್ಟು ದಿನ ಬೇಕಾಗಬಹುದು ಎಂದು ಹೇಳಲಾಗುವುದಿಲ್ಲ. ಪ್ರತಿಯೊಬ್ಬ ಆಟಗಾರನೂ ವಿಭಿನ್ನ ದೇಹ ಲಕ್ಷಣ ಹೊಂದಿರುತ್ತಾರೆ. ಗಾಯದಿಂದ ಗುಣಮುಖರಾಗುವ ಸಮಯವೂ ಭಿನ್ನವಾಗಿರುತ್ತದೆ. ಪ್ರಸಿದ್ಧ್ ಕೃಷ್ಣ ಇನ್ನೂ ಫಿಟ್ ಆಗಿಲ್ಲ ಹಾಗೂ ಇನ್ನೂ ಆರು ತಿಂಗಳು ಬೇಕಾಗಬಹುದು ಎಂದು ಬಿಸಿಸಿಯ ಮೂಲಗಳು ತಿಳಿಸಿವೆ.