Site icon Vistara News

Kapil Dev: ಸೂರ್ಯಕುಮಾರ್​ ಜತೆ ಸಂಜು ಸ್ಯಾಮ್ಸನ್​ ಹೋಲಿಕೆ ಬೇಡ; ಕಪಿಲ್​ ದೇವ್​

Kapil Dev: Don't compare Sanju Samson with Suryakumar; Kapil Dev

Kapil Dev: Don't compare Sanju Samson with Suryakumar; Kapil Dev

ಮುಂಬಯಿ: ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಹ್ಯಾಟ್ರಿಕ್​ ಗೋಲ್ಡನ್​ ಡಕ್ ಸಂಕಟಕ್ಕೆ ಸಿಲುಕಿ ಭಾರಿ ಟೀಕೆಗೆ ಒಳಗಾಗದ ಸೂರ್ಯಕುಮಾರ್​ ಯಾದವ್​ಗೆ(suryakumar yadav) ಟೀಮ್​ ಇಂಡಿಯಾದ ವಿಶ್ವ ಕಪ್​ ವಿಜೇತ ತಂಡದ ನಾಯಕ ಕಪಿಲ್‌ ದೇವ್‌(Kapil Dev) ಬೆಂಬಲ ಸೂಚಿಸಿದ್ದಾರೆ. ಸಂಜು ಸ್ಯಾಮ್ಸನ್​(sanju samson) ಜತೆ ಸೂರ್ಯ ಅವರನ್ನು ಹೋಲಿಕೆ ಮಾಡುವುದು ತಪ್ಪು ಎಂದು ಹೇಳಿದ್ದಾರೆ.

ಆಸೀಸ್​ ವಿರುದ್ಧದ ಏಕದಿನ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲ ಕಂಡ ಸೂರ್ಯಕುಮಾರ್​ ಯಾದವ್​ ಬದಲಿಗೆ ಟೀಮ್​ ಇಂಡಿಯಾದಲ್ಲಿ ಕೇರಳದ ಸಂಜು ಸ್ಯಾಮ್ಸನ್​ಗೆ ಅವಕಾಶ ನೀಡಿದರೆ ಉತ್ತಮ ಎಂದು ಹಲವು ಮಾಜಿ ಕ್ರಿಕೆಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಕಪಿಲ್​ ದೇವ್​ ತಮ್ಮ ಅಭಿಪ್ರಾಯವೊಂದನ್ನು ವ್ಯಕ್ತಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಕಪಿಲ್​ ದೇವ್​, “ಯಾವ ಕ್ರಿಕೆಟಿಗ ಉತ್ತಮವಾಗಿ ಆಡುತ್ತಾರೋ ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕು. ಹಾಗಾಗಿ ಸೂರ್ಯಕುಮಾರ್‌ ಯಾದವ್ ಅವರ ಜತೆ ಸಂಜು ಸ್ಯಾಮ್ಸನ್ ಅವರನ್ನು ಹೋಲಿಕೆ ಮಾಡುವುದು ಸರಿಯಲ್ಲ. ಒಂದು ವೇಳೆ ಸಂಜು ಸ್ಯಾಮ್ಸನ್‌ಗೂ ಇದೇ ಪರಿಸ್ಥಿತಿ ಎದುರಾಗಿದ್ದರೆ, ಸಂಜು ಜತೆ ಬೇರೆ ಆಟಗಾರನನ್ನು ಹೋಲಿಕೆ ಮಾಡಲಾಗುತ್ತಿತ್ತು” ಎಂದು ಅವರು ಹೇಳಿದರು.

“ಕ್ರಿಕೆಟ್​ನಲ್ಲಿ ಇಂತಹ ಹೋಲಿಕೆ ನಡೆಯಬಾರದು. ಒಂದು ವೇಳೆ ಟೀಮ್ ಮ್ಯಾನೇಜ್‌ಮೆಂಟ್‌ ಸೂರ್ಯುಕುಮಾರ್‌ ಯಾದವ್‌ ಅವರನ್ನು ಬೆಂಬಲಿಸಲು ಬಯಸಿದರೆ, ಖಂಡಿತಾ ಅವರಿಗೆ ಇನ್ನಷ್ಟು ಹೆಚ್ಚಿನ ಅವಕಾಶಗಳನ್ನು ನೀಡಲಿ. ಓರ್ವ ಆಟಗಾರ ಒಂದು ಪಂದ್ಯ ಆಡದಿದ್ದರೆ ಜನರು ತಮ್ಮದೇ ಆದ ಅಭಿಪ್ರಾಯಗಳನ್ನು ಹೊರಹಾಕುವುದು ಸಾಮಾನ್ಯ. ಇದೇ ಆಟಗಾರ ಉತ್ತಮವಾಗಿ ಆಡಿದರೆ, ಇದಕ್ಕೂ ಮುನ್ನ ಟೀಕಿಸಿದ ಜನರು ಆತನನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸುತ್ತಾರೆ. ಈ ಬಗ್ಗೆ ಆಟಗಾರರು ಯಾವುದೇ ಚಿಂತೆ ಪಡಬೇಕಿಲ್ಲ” ಎಂದು ಕಪಿಲ್​ ದೇವ್​ ಹೇಳಿದರು.

Exit mobile version