ಮುಂಬಯಿ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ಫಿಟ್‌ನೆಸ್ ಬಗ್ಗೆ ಅನುಮಾನವಿದೆ ಎಂದು ಮಾಜಿ ಟೀಮ್ ಇಂಡಿಯಾ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅಚ್ಚರಿಕೆ ಹೇಳಿಕೆ ನೀಡಿದ್ದಾರೆ.
ಶನಿವಾರ ಸಂದರ್ಶನವೊಂದರಲ್ಲಿ ಮಾತನಾಡಿದ ಕಪಿಲ್ ದೇವ್, ರೋಹಿತ್ ಶರ್ಮಾ ಅವರ ಕ್ರಿಕೆಟ್ ಕೌಶಲ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಕಳೆದ ಕೆಲ ವರ್ಷಗಳಿಂದ ವಿರಾಟ್ ಕೊಹ್ಲಿ ಜತೆಗೆ ಭಾರತ ತಂಡದ ಬ್ಯಾಟಿಂಗ್ ಆಧಾರ ಸ್ತಂಭಗಳಲ್ಲಿ ಒಬ್ಬರಾದ ರೋಹಿತ್ ಶರ್ಮಾ ಫಿಟ್‌ನೆಸ್ ಬಗ್ಗೆ ನನಗೆ ಅನುಮಾನವಿದೆ ಎಂದು ಅವರು ಹೇಳಿದ್ದಾರೆ.
“ರೋಹಿತ್ ಶರ್ಮಾ ಅವರಲ್ಲಿ ಯಾವುದೇ ಕೊರತೆಯಿಲ್ಲ. ಅವರಲ್ಲಿ ಎಲ್ಲ ಸಾಮರ್ಥ್ಯವೂ ಇದೆ. ಆದರೆ ವೈಯಕ್ತಿಕವಾಗಿ ನನ್ನ ಪ್ರಕಾರ, ಅವರ ಫಿಟ್‌ನೆಸ್ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಇದೆ. ಅವರು ನಿಜಕ್ಕೂ ಫಿಟ್ ಆಗಿದ್ದಾರೆಯೇ? ಎಂದು ಅನುಮಾನ ಮೂಡಿದೆ. ಏಕೆಂದರೆ, ನಾಯಕನಾಗಿದ್ದರೂ ಭಾರತ ಆಡಿದ ಹಲವು ಸರಣಿಯಿಂದ ಅವರು ತಂಡದಿಂದ ಹೊರಗುಳಿದಿದ್ದಾರೆ. ಜತೆಗೆ ಹಲವು ಬಾರಿ ಗಾಯಕ್ಕೂ ಈಡಾಗುತ್ತಿದ್ದಾರೆ. ಇದನ್ನು ಗಮನಿಸುವಾಗ ಅವರ ಫಿಟ್‌ನೆಸ್ ಮೇಲೆ ಅನುಮಾನ ಮೂಡಲಾರಂಭಿಸಿದೆ ಎಂದು ಕಪಿಲ್ ಹೇಳಿದ್ದಾರೆ.
ಇದನ್ನೂ ಓದಿ | Rishabh Pant | ನೀವೊಬ್ಬ ಫೈಟರ್; ರಿಷಭ್ ಪಂತ್ ಚೇತರಿಕೆಗೆ ಟೀಮ್ ಇಂಡಿಯಾ ಆಟಗಾರರ ಹಾರೈಕೆ