ಬಾರ್ಬಡಾಸ್: ಟೀಮ್ ಇಂಡಿಯಾದ ಪ್ರಸ್ತುತ ಆಟಗಾರರ ವರ್ತನೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ಗೆ(Kapil Dev) ಆಲ್ರೌಂಡರ್ ರವೀಂದ್ರ ಜಡೇಜಾ(Ravindra Jadeja) ತಿರುಗೇಟು ನೀಡಿದ್ದಾರೆ.Kapil Dev vs Jadeja) ಇಂಥಾ ಅಂಶಗಳು ಭಾರತ ತಂಡ ಸೋತಾಗ ಮಾತ್ರ ಮುನ್ನಲೆಗೆ ಬರುತ್ತದೆ. ಯಾರೂ ಕೂಡ ಇಲ್ಲಿ ಅಹಂಕಾರಿಗಳಲ್ಲ. ಎಲ್ಲರೂ ಕೂಡ ಭಾರತ ತಂಡವನ್ನು ಪ್ರತಿನಿಧಿಸಲು ಶೇ.100 ಪ್ರತಿಶತ ಪರಿಶ್ರಮ ಪಡುತ್ತಾರೆ ಎಂದು ಜಡೇಜಾ(Ravindra Jadeja hits back at Kapil Dev) ಹೇಳಿದ್ದಾರೆ.
ದಿ ವೀಕ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಪಿಲ್ ಅವರು, ಕೆಲವೊಮ್ಮೆ ಹೆಚ್ಚು ಹಣ ಬಂದರೆ ದುರಹಂಕಾರವೂ ಬರುತ್ತದೆ. ಈ ಕ್ರಿಕೆಟಿಗರು ತಮಗೆ ಎಲ್ಲವೂ ತಿಳಿದಿದೆ ಎಂದು ಭಾವಿಸುತ್ತಾರೆ. ಸಹಾಯದ ಅಗತ್ಯವಿರುವ ಅನೇಕ ಕ್ರಿಕೆಟಿಗರು ಇದ್ದಾರೆ ಎಂದು ಪ್ರಸ್ತುತ ಆಟಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
“ವರ್ಷಗಳು ಕಳೆದಂತೆ ಭಾರತೀಯ ಕ್ರಿಕೆಟ್(team India) ಹಲವಾರು ಬದಲಾವಣೆಯನ್ನು ಕಂಡಿದೆ. 70 ರ ದಶಕದಲ್ಲಿ ಏನೂ ಇಲ್ಲವಾಗಿದ್ದ ಭಾರತೀಯ ಕ್ರಿಕೆಟ್ ಬಹಳ ದೂರ ಸಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶ್ವದ ಅತ್ಯಂತ ದುಬಾರಿ ಕ್ರಿಕೆಟ್ ಪಂದ್ಯಾವಳಿ ಐಪಿಎಲ್ ಆಯೋಜಿಸುತ್ತಿದೆ. ಆಟಗಾರರೂ ಶ್ರೀಮಂತರಾಗಿದ್ದಾರೆ. ಆಟಗಾರರು ತುಂಬಾ ಆತ್ಮವಿಶ್ವಾಸ ಹೊಂದಿದ್ದಾರೆ ಎಂಬುದು ನನ್ನ ಅನಿಸಿಕೆ. ಆದರೆ ಅವರಲ್ಲಿ ನಕಾರಾತ್ಮಕ ಅಂಶವೂ ಇದೆ. ನಮಗೆ ಎಲ್ಲವೂ ತಿಳಿದಿದೆ. ನಾವು ಯಾರಿಂದಲೂ ಸಲಹೆ ಪಡೆಯಬೇಕಾಗಿಲ್ಲ ಎಂಬುದು ಈಗಿನ ಕ್ರಿಕೆಟಿಗರ ನಿಲುವಾಗಿದೆ” ಕಪಿಲ್ ದೇವ್ ಹೇಳಿದ್ದರು.
ಕಪಿಲ್ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜಡೇಜಾ, “ತಂಡದ ಎಲ್ಲ ಆಟಗಾರರು ಕೂಡ ಕಠಿಣ ಪರಿಶ್ರಮಪಡುತ್ತಿದ್ದು ದೇಶಕ್ಕಾಗಿ ಆಡುತ್ತಿದ್ದೇವೆ. ಇಲ್ಲಿ ವೈಯಕ್ತಿಕ ನಿಲುವು ಯಾವುದೂ ಇರುವುದಿಲ್ಲ. ಇಂಥಾ ಮಾತುಗಳು ಭಾರತ ತಂಡ ಸೋತಾಗ ಬರುತ್ತದೆ. ಯಾರೂ ಕೂಡ ಇಲ್ಲಿ ಅಹಂಕಾರಿಗಳಲ್ಲ. ಎಲ್ಲರೂ ಕೂಡ ಭಾರತ ತಂಡವನ್ನು ಪ್ರತಿನಿಧಿಸುತ್ತಾರೆ. ಇದರಲ್ಲಿ ಯಾವುದೇ ಅನುಮಾನವೂ ಬೇಡ” ಎಂದು ಹೇಳುವ ಮೂಲಕ ಕಪಿಲ್ ಹೇಳಿಕೆಗೆ ಜಡ್ಡು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ Team India : ಗಾಯದ ನಡುವೆ ಐಪಿಎಲ್ ಆಡುವವರು ಭಾರತ ತಂಡಕ್ಕೆ ಯಾಕೆ ಆಡುವುದಿಲ್ಲ; ಕಪಿಲ್ದೇವ್ ಪ್ರಶ್ನೆ
“ಎಲ್ಲರಿಗೂ ಕೂಡ ಅವರದ್ದೇ ಆದ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಸ್ವಾತಂತ್ರ್ಯ ಇರುತ್ತವೆ. ಆದರೆ ನಮ್ಮ ತಂಡದ ಡಲ್ಲ ಆಟಗಾರರು ಕೂಡ ಆಟವನ್ನು ಆನಂದಿಸುತ್ತಿದ್ದು ಕಠಿಣ ಪರಿಶ್ರಮಪಡುತ್ತಿದ್ದಾರೆ. ಯಾವುದೇ ಆಟಗಾರನೂ ತಂಡದಲ್ಲಿ ತಮಗೆ ಸಿಕ್ಕ ಸ್ಥಾನಕ್ಕೆ ನ್ಯಾಯ ಒದಗಿಸಲೇ ಹೋರಾಟ ನಡೆಸುತ್ತಾನೆ. ಆತ ತನ್ನಗೆ ಸಿಕ್ಕ ಅವಕಾಶವನ್ನು ಲಘುವಾಗಿ ತೆಗೆದುಕೊಳ್ಳುವದಿಲ್ಲ. ತಂಡದ ಗೆಲುವಿಗೆ ಶೇ.100 ಪ್ರತಿಶತ ಪಯತ್ನ ಪಡುತ್ತಾರೆ” ಎಂದು ಜಡೇಜಾ ಹೇಳಿದರು.