Site icon Vistara News

CCL 2023 : ಬೆಂಗಾಲ್​ ಟೈಗರ್ಸ್​ ವಿರುದ್ಧ ಕರ್ನಾಟಕ ಬುಲ್ಡೋಜರ್ ಜಯಭೇರಿ

Karnataka Bulldozer win against Bengal Tigers

Karnataka Bulldozer win against Bengal Tigers

ರಾಯ್​ಪುರ: ಇಲ್ಲಿನ ಶಹೀದ್​ ವೀರ್​ ನಾರಾಯಣ್​ ಸಿಂಗ್ ಸ್ಟೇಡಿಯಮ್​ನಲ್ಲಿ ಶನಿವಾರ ನಡೆದ ಸೆಲೆಬ್ರಿಟಿ ಕ್ರಿಕೆಟ್​ ಲೀಗ್​ನ ಪಂದ್ಯದಲ್ಲಿ (CCL 2023) ಕರ್ನಾಟಕ ಬುಲ್ಡೋಜರ್ಸ್ ತಂಡ ಬೆಂಗಾಲ್​ ವಿರುದ್ಧ 8 ವಿಕೆಟ್​ಗಳ ಭರ್ಜರಿ ವಿಜಯ ಸಾಧಿಸಿತು. ಈ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಬುಲ್ಡೋಜರ್​ ತಂಡದ ಪರವಾಗಿ ರಾಜೀವ್​, ಸುದೀಪ್​ ಬ್ಯಾಟಿಂಗ್​ನಲ್ಲಿ ಮಿಂಚಿದರು.

ತಲಾ 10 ಓವರ್​ಗಳ ಎರಡು ಇನಿಂಗ್ಸ್​ನಂತೆ ಪಂದ್ಯ ನಡೆಯಿತು. ಅಂತೆಯೇ ಮೊದಲ ಇನಿಂಗ್ಸ್​ನಲ್ಲಿ ಬ್ಯಾಟ್​ ಮಾಡಿದ ಬೆಂಗಾಲ್​ ಟೈಗರ್ಸ್​ ತಂಡ 10 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 73 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಕರ್ನಾಟಕ ಬಲ್ಡೋಜರ್​ ತಂಡ 10 ಓವರ್​ಗಳಲ್ಲಿ ಐದು ವಿಕೆಟ್​ ನಷ್ಟ ಮಾಡಿಕೊಂಡು 93 ರನ್​ ಪೇರಿಸಿತು.

ಇದನ್ನೂ ಓದಿ : Kiccha sudeep : ಕಿಚ್ಚ ಸುದೀಪ್‌ ಮನೆಗೆ ತೆರಳಿದ ಡಿ.ಕೆ. ಶಿವಕುಮಾರ್‌, ರಾಜಕೀಯದಲ್ಲಿ ಭಾರಿ ಕುತೂಹಲ ಸೃಷ್ಟಿಸಿದ ಭೇಟಿ

20 ರನ್​ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್​ ಆಡಿದ ಬೆಂಗಾಲ್​​ ತಂಡ ನಿಗದಿತ 10 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 76 ರನ್​ ಕಲೆ ಹಾಕಿತು. ಹೀಗಾಗಿ ಕರ್ನಾಟಕ ತಂಡದ ಗೆಲುವಿಗೆ 57 ರನ್​ ಬೇಕಾಯಿತು. ಕರ್ನಾಟಕ ತಂಡದ ರಾಜೀವ್​ 11 ಎಸೆತಗಳಲ್ಲಿ 23 ರನ್​ ಬಾರಿಸಿದರೆ ಕಿಚ್ಚ ಸುದೀಪ್​ 11 ಎಸೆತಗಳಲ್ಲಿ 15 ರನ್ ಗಳಿಸಿದರು. ಗೋಲ್ಡನ್ ಸ್ಟಾರ್ ಗಣೇಶ್​ 10 ರನ್​ ಪೇರಿಸಿದರು. ಇವರೆಲ್ಲರ ನೆರವಿನಿಂದ ಕರ್ನಾಟಕ ತಂಡ 6.4 ಓವರ್​ಗಳಲ್ಲಿ 57 ರನ್​ ಬಾರಿಸಿ ವಿಜಯ ಸಾಧಿಸಿತು.

ಸೆಲೆಬ್ರಿಟಿ ಕ್ರಿಕೆಟ್ ಲೀಗ್​ ಯೂಟ್ಯೂಬ್ ಚಾನೆಲ್​ನಲ್ಲೂ ನೇರ ಪ್ರಸಾರವಾಗುತ್ತಿದೆ.

Exit mobile version