ಬೆಂಗಳೂರು: ಮುಂಬರುವ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್(Karnataka Ranji) ಋತುವಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ 32 ಸದಸ್ಯರ ಸಂಭಾವ್ಯ ತಂಡವನ್ನು ಪ್ರಕಟಿಸಿದೆ. ಹಿರಿಯ ಆಟಗಾರ ಕರುಣ್ ನಾಯರ್ ಮತ್ತು ಹೊಸ ಪ್ರತಿಭೆ ನಿಕಿನ್ ಜೋಸ್ ಅವರಿಗೆ ಸಂಭವನೀಯರ ತಂಡದಲ್ಲಿ ಸ್ಥಾನ ನೀಡಲಾಗಿದೆ. ಜತೆಗೆ ಟೀಮ್ ಇಂಡಿಯಾದ ಉಪನಾಯಕ ಕೆ.ಎಲ್. ರಾಹುಲ್ ಕೂಡ ತಂಡದಲ್ಲಿದ್ದಾರೆ.
ಕಳೆದ ವಿಜಯ್ ಹಜಾರೆ ಏಕ ದಿನ ಹಾಗೂ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಿಂದ ತಂಡದಿಂದ ಕೈಬಿಟ್ಟಿದ್ದ ಕರುಣ್ ನಾಯರ್ಗೆ ಈ ಬಾರಿ ರಣಜಿ ತಂಡದಲ್ಲಿ ಅವಕಾಶ ನೀಡಲಾಗಿದೆ. ಉಳಿದಂತೆ ಮಧ್ಯಮವೇಗಿ ವಿದ್ಯಾಧರ ಪಾಟೀಲ, ಎಂ. ವೆಂಕಟೇಶ್ ಹಾಗೂ ವಿದ್ವತ್ ಕಾವೇರಪ್ಪ ಅವರಿಗೆ ಅವಕಾಶ ನೀಡಲಾಗಿದೆ.
ಕರ್ನಾಟಕ ತಂಡವು ಸರ್ವಿಸಸ್ (ಡಿ.13-16. ಬೆಂಗಳೂರು), ಪುದುಚೇರಿ (ಡಿ. 20-23. ಬೆಂಗಳೂರು), ಗೋವಾ (ಡಿ 27-30; ಪೊರ್ವರಿಮ್), ಛತ್ತೀಸ್ಗಢ (ಜ.3-6, ರಾಯಪುರ್), ರಾಜಸ್ಥಾನ (ಜ.10ರಿಂದ 13; ಬೆಂಗಳೂರು), ಕೇರಳ (ಜ. 17-20; ತಿರುವನಂತಪುರ) ಮತ್ತು ಜಾರ್ಖಂಡ್ (ಜ. 24-27; ರಾಂಚಿ) ತಂಡಗಳನ್ನು ಎದುರಿಸಲಿದೆ.
ಕರ್ನಾಟಕ ಸಂಭಾವ್ಯ ತಂಡ
ಕೆ.ಎಲ್. ರಾಹುಲ್, ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆ, ಕರುಣ್ ನಾಯರ್, ದೇವದತ್ತ ಪಡಿಕ್ಕಲ್, ಆರ್. ಸಮರ್ಥ್, ಡಿ ನಿಶ್ಚಲ್, ಅಭಿನವ್ ಮನೋಹರ್, ಕೆ.ವಿ. ಸಿದ್ಧಾರ್ಥ್, ಕೆ.ವಿ. ಅನೀಶ್, ಎಸ್.ಜೆ. ನಿಕಿನ್ ಜೋಸ್, ವಿಶಾಲ್, ಓನತ್, ಕೆ. ಗೌತಮ್, ಶ್ರೇಯಸ್ ಗೋಪಾಲ್, ಜೆ. ಸುಚಿತ್, ಪಾರಸ್ ಗುರುಭಕ್ಷ್ ಆರ್ಯ, ಮೊಹಸಿನ್ ಖಾನ್, ರಿತೇಶ್ ಭಟ್ಕಳ್, ಶುಭಾಂಗ್ ಹೆಗ್ಡೆ, ಎ.ಸಿ. ರೋಹಿತ್ ಕುಮಾರ್, ಎಸ್.ಎ. ರಿಷಿ ಬೋಪಣ್ಣ, ಕೆ. ಶಶಿಕುಮಾರ್, ಶರತ್ ಶ್ರೀನಿವಾಸ್, ಬಿ.ಆರ್. ಶರತ್, ನಿಹಾಲ್ ಉಲ್ಲಾಳ, ಪ್ರಸಿದ್ಧ ಕೃಷ್ಣ, ರೋನಿತ್ ಮೋರೆ, ವಿ. ವೈಶಾಖ, ಎಂ. ವೆಂಕಟೇಶ್, ವಿದ್ಯಾಧರ ಪಾಟೀಲ, ವಿ. ಕೌಶಿಕ್, ವಿದ್ವತ್ ಕಾವೇರಪ್ಪ.
ಇದನ್ನೂ ಓದಿ | IND VS BAN | ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ; ಭಾರತಕ್ಕೆ ಬೌಲಿಂಗ್ ಆಹ್ವಾನ