Site icon Vistara News

Ranji Trophy : ರಣಜಿ ಟ್ರೋಫಿಯಲ್ಲಿ ಕಳೆಗುಂದಿದ ಕರ್ನಾಟಕ ತಂಡ

Karnaaka Cricket Team

ಬೆಂಗಳೂರು: ರಣಜಿ ಟ್ರೋಫಿಯಲ್ಲಿ (Ranji Trophy) ಕಳೆದ ಮೂರು ವರ್ಷಗಳಿಂದ ಕರ್ನಾಟಕ ತಂಡ ಹಿನ್ನಡೆ ಅನುಭವಿಸುತ್ತಿದೆ. ಮಾಜಿ ನಾಯಕ ವಿನಯ್ ಕುಮಾರ್ ನಿರ್ಗಮನದ ನಂತರ ತಂಡವು ಪ್ರಶಸ್ತಿ ಹಾದಿಯಲ್ಲಿ ಎಡವುತ್ತಿದೆ. ರಣಜಿ ಟ್ರೋಫಿ 2024ರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿದರ್ಭ ವಿರುದ್ಧ ಕರ್ನಾಟಕ 127 ರನ್​​ಗಳ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದಿದೆ. ಈ ಮೂಲಕ ಮತ್ತೊಂದು ಬಾರಿ ಪ್ರಶಸ್ತಿ ಕನಸು ಕಮರಿದೆ. ಅಂದ ಹಾಗೆ 2014-15ರ ಆವೃತ್ತಿಯಲ್ಲಿ ಭಾರತ ಕೊನೆಯ ಬಾರಿಗೆ ರಣಜಿ ಟ್ರೋಫಿ ಗೆದ್ದಿತ್ತು.

2019ರಲ್ಲಿ ವಿನಯ್ ಕುಮಾರ್ ಬದಲಿಗೆ ಮನೀಶ್ ಪಾಂಡೆ ಕರ್ನಾಟಕ ತಂಡದ ನಾಯಕರಾಗಿ ನೇಮಕಗೊಂಡಿದ್ದರು. ಆ ಋತುವಿನಲ್ಲಿ, ಪಾಂಡೆ ನೇತೃತ್ವದ ತಂಡವು ಸೆಮಿಫೈನಲ್​ನಲ್ಲಿ ಸೌರಾಷ್ಟ್ರ ವಿರುದ್ಧ ಐದು ವಿಕೆಟ್​ಗಳಿಂದ ಸೋತಿತು. 2ನೇ ಇನ್ನಿಂಗ್ಸ್ ನಲ್ಲಿ ಚೇತೇಶ್ವರ್​ ಪೂಜಾರ ಮತ್ತು ಜಾಕ್ಸನ್ ಅವರ ಶತಕಗಳನ್ನು ಬಾರಿಸಿ ಕರ್ನಾಟಕದ ವಿಜಯ ಕಸಿದರು.

2020ರಲ್ಲಿ ಕರ್ನಾಟಕ ಮತ್ತೊಮ್ಮೆ ಸೆಮಿಫೈನಲ್​​ನಲ್ಲಿ ಬಂಗಾಳ ವಿರುದ್ಧ ಸೋತಿತು. ಕರುಣ್ ನಾಯರ್, ಕೆ.ಎಲ್. ರಾಹುಲ್, ದೇವದತ್​​​ ಪಡಿಕ್ಕಲ್, ಮನಿಷ್​ ಪಾಂಡೆ ಸೇರಿದಂತೆ ಇನ್ನೂ ಅನೇಕರು ತಂಡದಲ್ಲಿದ್ದರೂ ಕರ್ನಾಟಕ ಸೆಮಿಫೈನಲ್ ತಲುಪಲು ವಿಫಲವಾಯಿತು. ಈಡನ್ ಗಾರ್ಡನ್ಸ್ ನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಬಂಗಾಳ 174 ರನ್ ಗಳಿಂದ ಗೆದ್ದಿತ್ತು.

ಇದನ್ನೂ ಓದಿ : Virat kohli : ವಿರಾಟ್​​ ಕೊಹ್ಲಿ ಈ ಬಾರಿ ಐಪಿಎಲ್​ನಲ್ಲಿಯೂ ಆಡುವುದಿಲ್ಲ…

2021-22ರ ಋತುವಿನಲ್ಲಿ ಕರ್ನಾಟಕ ಪರ ಅತಿ ಹೆಚ್ಚು ರನ್ ಗಳಿಸಿದ ಕೆ.ವಿ.ಸಿದ್ಧಾರ್ಥ್ ಅವರನ್ನು ಮುಂದಿನ ಋತುವಿನಲ್ಲಿ ಕೈಬಿಡಲಾಯಿತು. ಅವರು ಗೋವಾಕ್ಕೆ ಹೋದರು. ರೋಹನ್ ಕದಮ್ ಕೂಡ ಹಾಗೆಯೇ ಮಾಡಿದರು.

ಕರ್ನಾಟಕಕ್ಕೆ ಸೆಮಿಫೈನಲ್ ಕೇವಲ ಕನಸು

2022ರಲ್ಲಿ ಕ್ವಾರ್ಟರ್ ಫೈನಲ್​ನಲ್ಲಿ ಉತ್ತರ ಪ್ರದೇಶ ವಿರುದ್ಧ ಸೋತಿತ್ತು. ಮನೀಶ್ ಪಾಂಡೆ ನೇತೃತ್ವದ ಕನ್ನಡಿಗರ ಬಳಗಕ್ಕೆ ಇಲ್ಲೂ ನಿರಾಸೆ. ಉತ್ತರ ಪ್ರದೇಶ ತಂಡ 5 ವಿಕೆಟ್​ಗಳ ಜಯದೊಂದಿಗೆ ಸೆಮಿಫೈಲ್​​ಗೆ ಪ್ರವೇಶಿಸಿತು. 2023-24ರ ಋತುವಿನಲ್ಲಿ ಕರ್ನಾಟಕ ತಂಡ ಕೆಲವು ಹಿನ್ನಡೆಗಳನ್ನು ಎದುರಿಸಿತು. ಅನುಭವಿ ಆಟಗಾರರಾದ ಕರುಣ್ ನಾಯರ್ ಮತ್ತು ಶ್ರೇಯಸ್ ಗೋಪಾಲ್ ತಂಡದಿಂದ ಬೇರ್ಪಟ್ಟರು. ಈ ಬಾರಿಯೂ ಕರ್ನಾಟಕ ತಂಡಕ್ಕೆ ನಿರಾಸೆ ಎದುರಾಗಿದೆ.

Exit mobile version