ಬೆಂಗಳೂರು : ಕನ್ನಡ ಚಲಚಿತ್ರ ಕ್ಷೇತ್ರದ ದಿಗ್ಗಜರು (Sandalwood) ಪಾಲ್ಗೊಳ್ಳುವ ಕ್ರಿಕೆಟ್ ಟೂರ್ನಿ ಕೆಸಿಸಿ ಕಪ್ (KCC Cup 2023) ಫೆಬ್ರವರಿ 11 ಹಾಗೂ 12ರಂದು ನಡೆಯಲಿದೆ. ಎರಡು ವರ್ಷಗಳ ಯಶಸ್ಸಿನ ಹಿನ್ನೆಲೆಯಲ್ಲಿ ಮೂರನೇ ಆವೃತ್ತಿಯನ್ನು ಯಶಸ್ವಿಯಾಗಿ ಆಯೋಜಿಸಲು ಸಂಘಟಕರು ಮುಂದಾಗಿದ್ದಾರೆ. ನಟ ಕಿಚ್ಚ ಸುದೀಪ್ (Kiccha Sudeep) ಅವರು ಟೂರ್ನಿಯ ವಿಶೇಷತೆಗಳ ಕುರಿತು ಮಾಹಿತಿ ನೀಡಿದ್ದಾರೆ. ಈ ಬಾರಿ ಮೈಸೂರಿನಲ್ಲಿ ಟೂರ್ನಿ ನಡೆಯಲಿದೆ.
ಸ್ಯಾಂಡಲ್ವುಡ್ ತಾರೆಯರು ಹಾಗೂ ಸಿನಿಮಾ ಕ್ಷೇತ್ರದ ಎಲ್ಲ ವಿಭಾಗದಲ್ಲಿರುವವರು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಒಟ್ಟು ಆರು ತಂಡಗಳ ನಡುವೆ ಪಂದ್ಯ ನಡೆಯಲಿದೆ. ಸುದೀಪ್, ಉಪೇಂದ್ರ, ಗಣೇಶ್, ಡಾಲಿ ಧನಂಜಯ ಹಾಗೂ ಶಿವರಾಜ್ ಕುಮಾರ್ ಅವರು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಟೂರ್ನಿಯ ವೇಳೆ ಕಳೆದೆರಡು ಆವೃತ್ತಿಗಳಲ್ಲಿ ಭಾಗಿಯಾಗಿದ್ದ ಪುನೀತ್ ರಾಜ್ಕುಮಾರ್ ಅವರನ್ನೂ ಸ್ಮರಿಸಲಾಗುತ್ತದೆ.
ಇದನ್ನೂ ಓದಿ : Vikrant Rona | ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ನಾಮಕರಣ
ಹೊಂಬಾಳೆ ಫಿಲ್ಸ್ಮ್ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ, ನಿರ್ಮಾಪಕ ಕೆ. ಪಿ ಶ್ರೀಕಾಂತ್, ನಂದಕಿಶೋರ್, ದಿನಕರ್ ತೂಗುದೀಪ ಮತ್ತಿತರರು ಟೂರ್ನಿ ಆಯೋಜನೆಯಲ್ಲಿ ಪ್ರಧಾನ ಪಾತ್ರ ವಹಿಸಲಿದ್ದಾರೆ.
ಕನ್ನಡ ಸಿನಿಮಾ ಕ್ಷೇತ್ರದ ಎಲ್ಲರನ್ನೂ ಒಂದೆಡೆಗೆ ತರುವ ಪ್ರಯತ್ನವೇ ಕೆಸಿಸಿ ಕಪ್. ಇಲ್ಲಿ ಕೇವಲ ನಟರು ಹಾಗೂ ತಾಂತ್ರಿಕ ವಿಭಾಗದವರು ಮಾತ್ರ ಭಾಗಿಯಾಗುತ್ತಿಲ್ಲ. ಸಿನಿಮಾ ಕ್ಷೇತ್ರದ ಎಲ್ಲರೂ ಇರುತ್ತಾರೆ ಎಂದು ನಟ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.