ಬೆಂಗಳೂರು: ಚಿತ್ರರಂಗದ ಗಣ್ಯರ ಕ್ರಿಕೆಟ್ ಪಂದ್ಯಾಟ ಸರಣಿ ಕೆಸಿಸಿ ಕಪ್ ಸೀಸನ್ 4ರ (KCC 4- Kannada Chalanachitra Cup) ಪಂದ್ಯಾವಳಿಗಳು ಡಿಸೆಂಬರ್ 23,24, 25 ರಂದು ನಡೆಯಲಿದೆ. ಇದರ ಭಾಗವಾಗಿ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಅವರು ಟೂರ್ನಿಯ ವಿಶೇಷತೆಗಳನ್ನು ಪ್ರಕಟಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಚ್ಚ, ಈ ಸಲದ ಟೂರ್ನಿಯನ್ನು ವಿಭಿನ್ನವಾದ ಕಾರ್ಯಕ್ರಮದ ಮೂಲಕ ಮಾಡಲುಎಲ್ಲ ಯೋಜನೆಗಳನ್ನು ರೂಪಿಸಿದ್ದೇವೆ. ಇತ್ತೀಗೆ ನಡೆದ ಆಟಗಾರರ ಹರಾಜಿನ ಬಳಿಕ ಎಲ್ಲ ಆರು ತಂಡಗಳು ಅತ್ಯಂತ ಬಲಿಷ್ಠವಾಗಿದೆ. ತಂಡದ ಆರು ನಾಯಕರ ಜತೆ 6 ಜನ ಮೆಂಟರ್ಸ್ ಕೂಡ ಇರಲಿದ್ದಾರೆ. ಕೆಸಿಸಿ ಎನ್ನುವುದು ನಮ್ಮವರಿಗೂ ಎರಡನೇ ಮನೆ ಇದ್ದಂತೆ ಎಂದು ಸುದೀಪ್ ಹೇಳಿದರು.
ಡಿಸೆಂಬರ್ನಲ್ಲಿಯೇ ಟೂರ್ನಿ
ಇದೇ ವೇಳೆ ಪ್ರತಿ ವರ್ಷ ಡಿಸೆಂಬರ್ನಲ್ಲಿಯೇ ಈ ಟೂರ್ನಿಯನ್ನು ನಡೆಸಲಾಗುವುದು ಎಂಬ ನಿರ್ಧಾರವನ್ನು ಪ್ರಕಟಿಸಲಾಯಿತು. 22 ರಂದು ಪ್ರಾಕ್ಟೀಸ್ ಮ್ಯಾಚ್ ನಡೆಯಲಿದ್ದು, ಇದರ ಕವರೇಜ್ಗೆ ಮಾಧ್ಯಮಕ್ಕೆ ವಿಶೇಷ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಟೂರ್ನಿಯ ಸಂಘಟಕರು ತಿಳಿಸಿದ್ದಾರೆ.
ಇದನ್ನೂ ಓದಿ KCC Cup 2023: ಡಿಸೆಂಬರ್‌ನಲ್ಲಿ KCC ಕಪ್; ಟೂರ್ನಿಗೆ ಬರ್ತಾರಾ ಸಚಿನ್, ಧೋನಿ?
ಅದ್ಧೂರಿ ಚಾಲನೆ
ಮೂರು ದಿನಗಳ ಕಾಲ ನಡೆಯುವ ಈ ಟೂರ್ನಿಗೆ 23ರ ಸಂಜೆ ಅದ್ಧೂರಿ ಚಾಲನೆ ಸಿಗಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಲ್ಲ ಪಂದ್ಯಗಳು ನಡೆಯಲಿವೆ. ಕಿಚ್ಚ ಸುದೀಪ್, ಶಿವಣ್ಣ. ಡಾಲಿ ಧನಂಜಯ್, ದುನಿಯಾ ವಿಜಯ್, ಉಪೇಂದ್ರ ಸೇರಿದಂತೆ ಹಲವು ಸ್ಟಾರ್ ನಟ, ನಟಿಯರು ಪಾಲ್ಗೊಳ್ಳಲಿದ್ದಾರೆ. ಪಂದ್ಯವಾವಳಿಗೆ ಸಪರೇಟ್ ಟಿಕೆಟ್ಸ್ ವ್ಯವಸ್ಥೆ ಕೂಡ ಮಾಡಲಾಗಿದೆ. ಮೊದಲ ಬಾರಿಗೆ ಹಲವು ಕಿರುತೆರೆ ಕಲಾವಿದರು ಕೂಡ ಕೆಸಿಸಿಯಲ್ಲಿ ಭಾಗಿಯಾಗಲಿದ್ದಾರೆ.
ಈ ಬಾರಿಯ ಕೆಸಿಸಿಯಲ್ಲಿ ಕೆಲವು ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರೂ ಭಾಗಿಗಳಾಗಲಿದ್ದಾರೆ. ಎಸ್ ಭದ್ರಿನಾಥ್, ಸುರೇಶ್ ರೈನಾ, ದಿಲ್ಶಾನ್, ಮುರಳಿ ವಿಜಯ್, ರಾಬಿನ್ ಉತ್ತಪ್ಪ. ಗಿಫ್ಸ್ ಆಡಲಿದ್ದಾರೆ. ಮೊದಲ ಬಾರಿಗೆ ಹಲವು ಕಿರುತೆರೆ ಕಲಾವಿದರು ಕೆಸಿಸಿಯಲ್ಲಿ ಭಾಗಿಯಾಗಲಿದ್ದಾರೆ. ಮೊದಲ ಬಾರಿಗೆ ಕೆಸಿಸಿಯಲ್ಲಿ ತಮಿಳಿನ ವಿಕ್ರಾಂತ್ ಹಾಗೂ ತೆಲುಗಿನ ಪ್ರಿನ್ಸ್ ಭಾಗಿಯಾಗುತ್ತಿದ್ದಾರೆ.
ಕೆಸಿಸಿಯ ಹಿಂದಿನ ಟೂರ್ನಿಗಳಲ್ಲಿ ವೀರೇಂದ್ರ ಸೆಹ್ವಾಗ್, ಲ್ಯಾನ್ಸ್ ಕ್ಲೂಸೆನರ್, ಹರ್ಷಲ್ ಗಿಬ್ಸ್ , ತಿಲಕರತ್ನೆ ದಿಲ್ಶನ್, ಆಡಮ್ ಗಿಲ್‌ಕ್ರಿಸ್ಟ್, ಓವೈಸ್ ಶಾ, ಕ್ರಿಸ್ ಗೇಲ್ ಮುಂತಾದವರು ಆಡಿದ್ದಾರೆ. ಹಿಂದಿನ ಎರಡೂ ಸೀಸನ್‌ಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿವೆ. ಕಳೆದ ಸೀಸನ್ ಅಲ್ಲಿ ‘ಡಾರ್ಲಿಂಗ್’ ಕೃಷ್ಣ ನಾಯಕತ್ವದ ‘ಗಂಗಾ ವಾರಿಯರ್ಸ್’ ತಂಡ ಚಾಂಪಿಯನ್ ಆಗಿತ್ತು.
ತಂಡಗಳು ಹಾಗೂ ನಾಯಕರ ಹೆಸರು ಹೀಗಿವೆ
1) ಒಡೆಯರ್ ಚಾರ್ಜರ್ಸ್. ಕ್ಯಾಪ್ಟನ್ ವಿಕ್ರಾಂತ್, ಸ್ಟಾರ್ ಉಪೇಂದ್ರ
2) ಕದಂಬ ಲಯನ್ಸ್: ಕ್ಯಾಪ್ಟನ್ ರಾಜೀವ್, ಸ್ಟಾರ್ ಡಾಲಿ ಧನಂಜಯ್.
3) ಗಂಗಾ ವಾರಿಯರ್ಸ್: ಕ್ಯಾಪ್ಟನ್ ಪ್ರಿನ್ಸ್. ಸ್ಟಾರ್ ಗಣೇಶ್.
4) ರಾಷ್ಟ್ರಕೂಟ ಪ್ಯಾಂತರ್ಸ್: ಕ್ಯಾಪ್ಟನ್ ಪ್ರದೀಪ್, ಸ್ಟಾರ್ ಶಿವಣ್ಣ.
5) ಹೊಯ್ಸಳ ಈಗಲ್ಸ್: ಕಿಚ್ಚ ಸುದೀಪ್ ಕ್ಯಾಪ್ಟನ್ ಆಂಡ್ ಸ್ಟಾರ್