Site icon Vistara News

Team India : ಕೇದರ್​ ಜಾಧವ್​​ ತಂದೆ ಕಣ್ಮರೆ, ಹುಡುಕಾಟ ಆರಂಭಿಸಿದ ಪುಣೆ ಪೊಲೀಸರು

kedar-jadhavs-father-is-missing-pune-police-have-started-a-search

#image_title

ಪುಣೆ: ಅಂತಾರಾಷ್ಟ್ರೀಯ ಕ್ರಿಕೆಟಿಗ (Team India) ಕೇದಾರ್ ಜಾಧವ್ ಅವರ ತಂದೆ ಮಹಾದೇವ್​ ಜಾಧವ್​ ಸೋಮವಾರ ಬೆಳಗ್ಗೆ ಮನೆಯಿಂದ ನಾಪತ್ತೆಯಾಗಿದ್ದಾರೆ. 75 ವರ್ವದ ಅವರು ಪುಣೆಯ ಕೊಥ್ರುಡ್​ ಪ್ರದೇಶದಲ್ಲಿರುವ ಮನೆಯಿಂದ ಹೊರಟು ಹೋದವರು ವಾಪಸ್​ ಬರಲಿಲ್ಲ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮನೆಯಿಂದ ಹೇಳದೇ ಹೊರಟಿರುವ ಅವರು ವಾಪಸ್​ ಬಂದಿಲ್ಲ ಎಂದು ಹೇಳಲಾಗಿದೆ.

ಅಲಂಕಾರ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕೇದಾರ್​ ಅವರ ತಂದೆಯ ಭಾವಚಿತ್ರವನ್ನು ಸುತ್ತಮುತ್ತಲಿನ ಪ್ರದೇಶಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅದೇ ರೀತಿ ಹುಡುಕಾಟ ಆರಂಭಿಸಿದ್ದಾರೆ. ಮಹಾದೇವ್​ ಜಾಧವ್​ ಅವರು ಮನೆಯಿಂದ ಹೊರಡುವಾಗ ಫೋನ್ ಕೂಡ ತೆಗೆದುಕೊಂಡು ಹೋಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳು ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಕ್ರಿಕೆಟಿಗರ ತಂದೆ ಗುರುತಿನ ವ್ಯಕ್ತಿಗಳು ಕಂಡರೆ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

ಕೇದಾರ್ ಜಾಧವ್ ಮಾರ್ಚ್​ 26ರಂದು ತಮ್ಮ 38ನೇ ಜನುಮದಿನವನ್ನು ಆಚರಿಸಿಕೊಂಡಿದ್ದರು. ಕೇದಾರ್ ಜಾಧವ್ ಅವರು ಭಾರತ ಪರ 73 ಏಕದಿನ ಮತ್ತು ಒಂಬತ್ತು ಟಿ20 ಪಂದ್ಯಗಳನ್ನು ಆಡಿದ್ದಾರೆ. 50 ಓವರ್‌ಗಳ ಆಟದಲ್ಲಿ 1389 ರನ್‌ಗಳು ಎರಡು ಶತಕ ಮತ್ತು ಆರು ಅರ್ಧಶತಕಗಳನ್ನು ಬಾರಿಸಿದ್ದಾರೆ. ಅವರು ಅರೆಕಾಲಿಕ ಬೌಲರ್ ಆಗಿ 27 ವಿಕೆಟ್​ಗಳನ್ನು ತಮ್ಮದಾಗಿಸಿಕೊಂಡಿದ್ದರು.

2020 ರಲ್ಲಿ ಜಾಧವ್ ಕೊನೆಯ ಬಾರಿ ಭಾರತ ತಂಡದಲ್ಲಿ ಆಡಿದ್ದರು. ಅವರು ಇತ್ತೀಚೆಗೆ ಮಹಾರಾಷ್ಟ್ರ ತಂಡದ ಪರವಾಗಿ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಆಡಿದ್ದರು. ಮುಂಬಯಿ ವಿರುದ್ಧ ಶತಕ ಗಳಿಸಿದ್ದರು.

Exit mobile version