Site icon Vistara News

Kenneth Powell | ​ಕನ್ನಡಿಗ, ಅಥ್ಲೆಟಿಕ್‌​ ದಿಗ್ಗಜ ಕೆನೆತ್​ ಪೋವೆಲ್​ ಇನ್ನಿಲ್ಲ

Kenneth Powell

ಬೆಂಗಳೂರು: 1970ರ ‘ಏಷ್ಯನ್‌ ಗೇಮ್ಸ್‌’ ಕಂಚಿನ ಪದಕ ವಿಜೇತ, ಒಲಿಂಪಿಯನ್‌ ಕರ್ನಾಟಕದ ದಿಗ್ಗಜ ಅಥ್ಲಿಟ್‌ ಕೆನೆತ್‌ ಪೋವೆಲ್‌(Kenneth Powell) ಅವರು ಭಾನುವಾರ ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ಅವರ ನಿಧನಕ್ಕೆ ಭಾರತೀಯ ಅಥ್ಲೆಟಿಕ್‌ ಫೆಡರೇಷನ್‌ ಸಂತಾಪ ಸೂಚಿಸಿದೆ.

82 ವರ್ಷ ವಯಸ್ಸಿನ ಕೆನೆತ್‌ ಪೋವೆಲ್‌ ಅವರು, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಹಳೆ ಮೈಸೂರು ಭಾಗದ ಪ್ರಪ್ರಥಮ ಕ್ರೀಡಾಪಟು ಜತೆಗೆ ಕರ್ನಾಟಕಕ್ಕೆ ಅರ್ಜುನ ಪ್ರಶಸ್ತಿಯನ್ನು ತಂದುಕೊಟ್ಟ ಮೊದಲಿಗರೂ ಆಗಿದ್ದಾರೆ. 1960ರ ದಶದಕದಲ್ಲಿ ಕೆನೆತ್‌ ಪೋವೆಲ್‌ ಅವರು ಭಾರತ ಪ್ರಮುಖ ಓಟಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. 1970ರ ಏಷ್ಯನ್ ಗೇಮ್ಸ್‌ನ 4×100ಮೀ. ರಿಲೆಯಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದರು.

ಕೋಲಾರದ ಕೆಜಿಎಫ್‌ನಲ್ಲಿ ಜನಿಸಿದ ಕೆನೆತ್‌ ಅವರು 1970ರ ವರೆಗೆ ಕ್ರೀಡಾ ರಂಗದಲ್ಲಿ ಸಕ್ರಿಯರಾಗಿ ರನ್ನಿಂಗ್​ ಟ್ರ್ಯಾಕ್​ನಲ್ಲಿ ಮಿಂಚುವ ಮೂಲಕ ಹಲವು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದರು.

ಇದನ್ನೂ ಓದಿ | Fifa World Cup | ಅರ್ಜೆಂಟೀನಾ ಮತ್ತು ನೆದರ್ಲೆಂಡ್ಸ್​ ಪಂದ್ಯದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ ಪತ್ರಕರ್ತ ಗ್ರಾಂಟ್ ವಾಲ್

Exit mobile version