ಪ್ಯಾರಿಸ್: ಜೀವನದಲ್ಲಿ ಅಸಾಧ್ಯವಾದುದನ್ನು ಸಾಧಿಸುವ ಛಲ ಮತ್ತು ಆತ್ಮವಿಶ್ವಾಸವಿದ್ದರೆ ಸಾಧನೆ ಹಾದಿ ಸುಲಭ ಎಂಬ ಮಾತಿನಂತೆ ಕೇರಳದ ಸೈಕ್ಲಿಸ್ಟ್(Kerala Cyclist Reaches Paris) ಒಬ್ಬರು ಕಲ್ಲಿಕೋಟೆಯಿಂದ ಬರೋಬ್ಬರಿ 22 ಸಾವಿರ ಕಿಲೋಮೀಟರ್ ಸೈಕಲ್ ತುಳಿದು ಪ್ಯಾರಿಸ್ ತಲುಪಿ(Paris Olympics) ಎಲ್ಲರ ಗಮನ ಸೆಳೆಯುಂತೆ ಮಾಡಿದ್ದಾರೆ.
ಹೌದು, ಪ್ಯಾರಿಸ್ ಒಲಿಂಪಿಕ್ಸ್ ನೋಡಲು ಮತ್ತು ತಮ್ಮ ನೆಚ್ಚಿನ ಕ್ರೀಡಾಪಟು ನೀರಜ್ ಚೋಪ್ರಾ(Neeraj Chopra) ಅವರಿಗೆ ಬೆಂಬಲ ಸೂಚಿಸುವ ಸಲುವಾಗಿ ಈ ಸೈಕ್ಲೀಸ್ 2 ವರ್ಷಗಳ ಕಾಲ ಸೈಕಲ್ ಮೂಲಕ ಪ್ರಯಾಣಿಸಿ ಕೊನೆಗೂ ತಮ್ಮ ಗುರಿ ಮುಟ್ಟಿದ್ದಾರೆ. ಈ ಸಾಧಕನ ಹೆಸರು ಫಯಿಸ್ ಅಶ್ರಫ್ ಅಲಿ(Fayis Asraf Ali).
ಕೇರಳದ ಸೈಕ್ಲಿಸ್ಟ್ ಆಗಿರುವ ಫಯಿಸ್ ಅಶ್ರಫ್ ಅಲಿ, 2022ರ ಆಗಸ್ಟ್ 15ರಂದು ಕಲ್ಲಿಕೋಟೆಯಿಂದ ತಮ್ಮ ಸೈಕಲ್ ಪ್ರಯಾಣವನ್ನು ಆರಂಭಿಸಿ 30 ದೇಶಗಳನ್ನು ಸುತ್ತಿ ಇದೀಗ ಫ್ರಾನ್ಸ್ ತಲುಪಿದ್ದಾರೆ. ಕಳೆದ ವರ್ಷ ಆಗಸ್ಟ್ನಲ್ಲಿ ಅವರು ಬುಡಾಪೆಸ್ಟ್ ತಲುಪಿದ್ದರು. ಈ ವೇಳೆ ಅವರು ತಮ್ಮ ನೆಚ್ಚಿನ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ನಡೆಯುತ್ತಿತ್ತು.
ಜರ್ನಿ ಆರಂಭಿಸಿದ್ದು ಹೇಗೆ?
ಫಯಿಸ್ ಅಶ್ರಫ್ ಕೇರಳದಿಂದ ಸೈಕಲ್ ಜರ್ನಿ ಆರಂಭಿಸಿದಾಗ ಬಳಿಸಿದ್ದು 13 ಸಾವಿರ ರೂ. ಮೌಲ್ಯದ ಸೈಕಲ್. ಈ ಸೈಕಲ್ನಲ್ಲಿ ಸಿಂಗಾಪುರ ತಲುಪಿದರು. ಬಳಿಕ 1 ಲಕ್ಷ ರೂ. ಮೌಲ್ಯದ ಸೈಕಲ್ ಖರೀದಿಸಿದ್ದರು. ಅಂತಿಮವಾಗಿ ಪ್ಯಾರಿಸ್ಗೆ ಪ್ರಯಾಣಿಸಲು ಅಶ್ರಫ್ ಅಲಿ 2.5 ಲಕ್ಷ ರೂ. ಮೌಲ್ಯದ ಅತ್ಯಾಧುನಿಕ ಸೈಕಲ್ ಖರೀದಿಸಿದ್ದರು. ಪ್ರತಿದಿನ ಸರಾಸರಿ 150 ಕಿಲೋಮೀಟರ್ ಪ್ರಯಾಣಿಸುತ್ತಿದ್ದರು. ಸೈಕಲ್ ಜರ್ನಿಯಲ್ಲಿ ಅವರ ಜತೆಗಿದದ್ದು ಕೇವಲ 4 ಜತೆ ಬಟ್ಟೆ, ಒಂದು ಟೆಂಟ್, ಮಲಗುವ ಬ್ಯಾಗ್ ಮತ್ತು ಸುಮಾರು 50 ಕೆಜಿ ಭಾರದ ವಸ್ತುಗಳು. ಅವರು ಶುಕ್ರವಾರ ಪ್ಯಾರಿಸ್ ತಲುಪಿದ ಫೋಟೊವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನೀರಜ್ ಅವರು ಚಿನ್ನ ಗೆಲ್ಲುವುದನ್ನು ನೋಡಲು ಕಾತರವಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ Paris Olympics: ಮನು ಭಾಕರ್-ಸರಬ್ಜೊತ್ ಸಿಂಗ್ ಕಂಚಿನ ನಿರೀಕ್ಷೆ; ಭಾರತದ ಇಂದಿನ ಸ್ಪರ್ಧೆಗಳ ವಿವರ ಹೀಗಿದೆ
23 ವರ್ಷದ ನೀರಜ್ ಚೋಪ್ರಾ ಇದುವರೆಗಿನ ಶ್ರೇಷ್ಠ ನಿರ್ವಹಣೆ 89.94 ಮೀ. ದೂರ ಎಸೆದಿರುವುದು. ಈ ಎಸೆತವನ್ನು 2022ರ ಸ್ಟಾಕ್ಹೋಮ್ ಡೈಮಂಡ್ ಲೀಗ್ನಲ್ಲಿ ಎಸೆದಿದ್ದರು. ಈ ಬಾರಿಯ ಒಲಿಂಪಿಕ್ಸ್ನಲ್ಲಿ 90 ಮೀ. ದೂರ ಎಸೆಯುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.
ಕಾಶಿನಾಥ್ ನಾಯ್ಕ್ ಅವರು ನೀರಜ್ ಪ್ಯಾರಿಸ್ನಲ್ಲಿ ನಡೆಯುವ ಒಲಿಂಪಿಕ್ಸ್ನಲ್ಲಿಯೂ(neeraj chopra paris olympics) ಚಿನ್ನದ ಪದಕ ಗೆಲ್ಲಲಿದ್ದಾರೆ ಎಂದು ಆತ್ಮವಿಶ್ವಾಸದಿಂದ ಈ ಮಾತನ್ನು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಕಾಶಿನಾಥ್, “ನಾನು 2015 ರಿಂದ ನೀರಜ್ ಜತೆ ಕೆಲಸ ಮಾಡುತ್ತಿದ್ದೇನೆ. ಅವರ ಛಲವನ್ನು ಮೆಚ್ಚಲೇ ಬೇಕು. ಸಾಧಿಸುವ ಛಲವೇ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಅತ್ಯಂತ ಶಿಸ್ತಿನ ಕ್ರೀಡಾಪಟು ಕೂಡ ಆಗಿದ್ದಾರೆ. 90 ಮೀ. ದೂರ ಜಾವೆಲಿನ್ ಎಸೆಯುವದು ಪ್ರಮುಖ ಗುರಿ ಎಂದು ನೀರಜ್ ಈಗಾಗಲೇ ಹೇಳಿದ್ದಾರೆ. ಹೇಳಿದಂತೆ ಅವರು ಈ ದೂರವನ್ನು ಕ್ರಮಿಸುವ ವಿಶ್ವಾಸ ನನ್ನಲ್ಲಿದೆ” ಎಂದು ಹೇಳಿದ್ದಾರೆ.