Site icon Vistara News

FIFA Ban | ಫಿಫಾ ನಿಷೇಧದ ಎಫೆಕ್ಟ್‌, ಉಜ್ಬೇಕಿಸ್ತಾನದಲ್ಲಿ ಕೇರಳದ ಫುಟ್‌ಬಾಲ್‌ ಟೀಮ್‌ಗೆ ಟ್ರಬಲ್‌

Kerala FC

ನವದೆಹಲಿ: ಭಾರತದ ಫುಟ್‌ಬಾಲ್‌ ತಂಡಗಳು ಅಂತಾರಾಷ್ಟ್ರೀಯ ತಂಡಗಳ ಜತೆ ಪಂದ್ಯ ಆಡುವಂತಿಲ್ಲ ಎಂದು ಅಂತಾರಾಷ್ಟ್ರೀಯ ಫುಟ್‌ಬಾಲ್‌ ಸಂಸ್ಥೆಗಳ ಒಕ್ಕೂಟ (FIFA)ವು ನಿಷೇಧ ಹೇರಿದ ಕಾರಣ ಗೋಕುಲಂ ಕೇರಳ ಎಫ್‌ಸಿ (Gokulam Kerala FC) ಮಹಿಳಾ ತಂಡವು ತಾಷ್ಕೆಂಟ್‌ನಲ್ಲಿ ನಡೆಯುತ್ತಿರುವ ವುಮೆನ್ಸ್‌ ಕ್ಲಬ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು (FIFA Ban) ಆಗುತ್ತಿಲ್ಲ. ಹಾಗಾಗಿ, ತಂಡವು ನೆರವಿಗೆ ಧಾವಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ.

ಉಜ್ಬೇಕಿಸ್ತಾನದಲ್ಲಿ ಆಗಸ್ಟ್‌ ೨೩ರಿಂದ ೨೬ರವರೆಗೆ ನಡೆಯುವ ವುಮೆನ್ಸ್‌ ಕ್ಲಬ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಗೋಕುಲಂ ಕೇರಳ ಎಫ್‌ಸಿ ತಂಡವು ತಾಷ್ಕೆಂಟ್‌ಗೆ ತೆರಳಿದೆ. ಆದರೆ, ಅಖಿಲ ಭಾರತ ಫುಟ್‌ಬಾಲ್‌ ಒಕ್ಕೂಟದ (AIFF) ಮೇಲೆ ಫಿಫಾ ನಿಷೇಧ ಹೇರಿದ್ದರಿಂದ ತಂಡವು ತಾಷ್ಕೆಂಟ್‌ನಲ್ಲಿ ಆಟವಾಡದೆ ಉಳಿಯುವಂತಾಗಿದೆ.

“ಗೋಕುಲಂ ಕೇರಳ ಎಫ್‌ಸಿ ತಂಡದ ೨೩ ಆಟಗಾರ್ತಿಯರು ತಾಷ್ಕೆಂಟ್‌ನಲ್ಲಿ ಆಟವಾಡದೆ ಉಳಿಯುವಂತಾಗಿದೆ. ಕೇಂದ್ರ ಸರಕಾರವೂ ಕೂಡಲೇ ಮಧ್ಯಸ್ಥಿಕೆ ವಹಿಸಿ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು” ಎಂದು ತಂಡವು ಟ್ವಿಟರ್‌ನಲ್ಲಿ ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ. ಇಂಡಿಯನ್‌ ವುಮೆನ್ಸ್‌ ಲೀಗ್‌ನಲ್ಲಿ ೨೦೧೯ರಿಂದಲೂ ಚಾಂಪಿಯನ್‌ ಎನಿಸಿರುವ ಗೋಕುಲಂ ಕೇರಳ ಎಫ್‌ಸಿ ಮಹಿಳಾ ತಂಡವು ಕಳೆದ ವರ್ಷವೂ ಚಾಂಪಿಯನ್‌ ಆಗಿ ವುಮೆನ್ಸ್‌ ಕ್ಲಬ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಅರ್ಹತೆ ಪಡೆದಿದೆ.

ಇದನ್ನೂ ಓದಿ | ವಿಸ್ತಾರ Explainer | FIFA ban: ಪ್ರಫುಲ್‌ ಪಟೇಲ್‌ ಕಳ್ಳಾಟಕ್ಕೆ ಫಿಫಾದ ಕಾಲ್ಚೆಂಡಾದ ಭಾರತೀಯ ಫುಟ್ಬಾಲ್‌

Exit mobile version