ಅಯೋಧ್ಯೆ: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದ (Ram Mandir) ಲೋಕಾರ್ಪಣೆ ಸಂದರ್ಭದಲ್ಲಿ ರಾಮಮಂದಿರಕ್ಕೆ ಭೇಟಿ ಕೊಡುತ್ತೇನೆ ಎಂದಿದ್ದ ಭಾರತ ಮೂಲದ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಕೇಶವ್ ಮಹರಾಜ್(Keshav Maharaj) ಅವರು ತಮ್ಮ ಇಚ್ಛೆಯಂತೆ ರಾಮಮಂದಿರಕ್ಕೆ(Keshav Maharaj at Ram Mandir) ಭೇಟಿ ನೀಡಿ ರಾಮಲಲ್ಲಾನ ದರ್ಶನ ಮಾಡಿದ್ದಾರೆ.
ಐಪಿಎಲ್(IPL 2024) ಭಾಗವಾಗಿ ಭಾರತಕ್ಕೆ ಬಂದಿರುವ ಕೇಶವ್ ಮಹರಾಜ್ ಭಾರತಕ್ಕೆ ಬಂದೊಡೆನೆ ನೇರವಾಗಿ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ಫೋಟೊವನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ‘ಜೈ ಶ್ರೀ ರಾಮ್. ಎಲ್ಲರಿಗು ಒಳಿತು ಮಾಡಲಿ’ ಎಂದು ಬರೆದುಕೊಂಡಿದ್ದಾರೆ. ಮಹರಾಜ್ ಅವರು ಮುಂಬರುವ ಟಿ20 ವಿಶ್ವಕಪ್ ಭಾಗವಾಗಿ ಐಪಿಎಲ್ನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಶಿಬಿರಕ್ಕೆ ಸೇರಿದ್ದಾರೆ.
Keshav Maharaj at Ram Mandir, Ayodhya. 🙏 pic.twitter.com/mURqtW3ZZw
— Johns. (@CricCrazyJohns) March 21, 2024
ಆಂಜನೇಯನ ಪರಮ ಭಕ್ತನಾಗಿರುವ ಕೇಶವ್ ಮಹಾರಾಜ್ ಶ್ರೀರಾಮ ಮಂದಿರ ಲೋಕಾರ್ಪಣೆಯ ವೇಳೆ ಮಂದಿರಕ್ಕೆ ಭೇಟಿ ನೀಡುವುದು ನನ್ನ ಈ ವರ್ಷದ ಪ್ರಮುಖ ಗುರಿ ಎಂದಿದ್ದರು. ಇದೀಗ ಭೇಟಿ ನೀಡಿದ್ದಾರೆ. ಕೇಶವ ಮಹಾರಾಜ್ ಅವರು ಬ್ಯಾಟಿಂಗ್ ನಡೆಸಲು ಮೈದಾನಕ್ಕೆ ಬಂದಾಗಲೆಲ್ಲ ‘ರಾಮ್ ಸಿಯಾ ರಾಮ್’ ಹಾಡನ್ನು ಸ್ಟೇಡಿಯಂನಲ್ಲಿ ಜೋರಾಗಿ ಹಾಕಲಾಗುತ್ತದೆ. ಈ ಹಾಡನ್ನು ಕೇಳಿದರೆ ತನಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಹಿಂದೊಮ್ಮೆ ಸಂದರ್ಶನದಲ್ಲಿ ಅವರು ಹೇಳಿದ್ದರು.
ಇದನ್ನೂ ಓದಿ IPL Trophy Shlok: ಐಪಿಎಲ್ ಟ್ರೋಫಿಯಲ್ಲಿರುವ ಸಂಸ್ಕೃತ ಶ್ಲೋಕದ ಅರ್ಥವೇನು?
Keshav Maharaj wishing everyone "Pran Pratishtha of Lord Rama" in Ram Temple Ayodhya tomorrow.pic.twitter.com/oAnuhGO3ki
— Johns. (@CricCrazyJohns) January 21, 2024
ಕೇಶವ್ ಮಹಾರಾಜ್ ಮೂಲತಃ ಭಾರತೀಯರಾಗಿದ್ದು, ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದಾರೆ. ಆದರೆ ಅವರು ಭಾರತಕ್ಕೆ ಬಂದಾಗಲೆಲ್ಲಾ ಕುಟುಂಬ ಸಮೇತರಾಗಿ ಇಲ್ಲಿನ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಕಳೆದ ವರ್ಷ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯ ವೇಳೆ ಮಹರಾಜ್ ಕೇರಳದ ದೇವಸ್ಥಾನವೊಂದಕ್ಕೆ ಭಟಿ ನೀಡಿ ಪೂಜೆ ಸಲ್ಲಿಸಿದ್ದರು. ಈ ಫೋಟೊಗಳು ವೈರಲ್ ಆಗಿತ್ತು. ಇದಲ್ಲದೆ ತಮ್ಮ ಬ್ಯಾಟ್ ಮೇಲೆ ಓಂ ಎಂದು ಬರೆದುಕೊಂಡಿದ್ದಾರೆ.
Keshav Maharaj 👑 pic.twitter.com/qW18TuBYkw
— Sir BoiesX (@BoiesX45) March 21, 2024
ಮಾರ್ಚ್ 22ರಂದು ನಡೆಯುವ ಟೂರ್ನಿಯ ಉದ್ಘಾಟನ ಸಮಾರಂಭದಲ್ಲಿ(IPL 2024 opening ceremony) ಭಾರತೀಯ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ಸಂಗೀತ ನಿರ್ದೇಶಕ. ಆರು ರಾಷ್ಟ್ರ ಪ್ರಶಸ್ತಿ ವಿಜೇತ ಎ.ಆರ್ ರೆಹಮಾನ್(AR Rahman), ಸೋನು ನಿಗಮ್(Sonu Nigam), ಟೈಗರ್ ಶ್ರಾಫ್(Tiger Shroff), ಅಕ್ಷಯ್ ಕುಮಾರ್(Akshay Kumar) ಪ್ರದರ್ಶನ ನೀಡಲಿದ್ದಾರೆ. ಈ ವಿಚಾರವನ್ನು ಐಪಿಎಲ್ ಆಡಳಿತ ಮಂಡಳಿ ಬುಧವಾರ ಟ್ವೀಟರ್ ಎಕ್ಸ್ ಖಾತೆಯಲ್ಲಿ ಅಧಿಕೃತ ಪ್ರಕಟನೆಯ ಮೂಲಕ ತಿಳಿಸಿದೆ. ಈ ಕಾರ್ಯಕ್ರಮ ಚೆನ್ನೈಯಲ್ಲಿ ನಡೆಯಲಿದೆ. ಪಂದ್ಯ ಆರಂಭಕ್ಕೂ ಮುನ್ನ ಅಂದರೆ ಸಂಜೆ 6.30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಗೊಂಡಿದೆ. ಉಳಿದ ಪಂದ್ಯಗಳು ಯಾವಾಗಿನಿಂದ ಹಾಗೂ ಎಲ್ಲಿ ನಡೆಯುತ್ತದೆ ಎನ್ನುವ ಮಾಹಿತಿ ಇದುವರೆಗೆ ರಿವೀಲ್ ಆಗಿಲ್ಲ.