Site icon Vistara News

Keshav Maharaj:‌ ಪಾಕ್‌ ವಿರುದ್ಧ ಗೆದ್ದು ಜೈ ಶ್ರೀ ಹನುಮಾನ್‌ ಎಂದ ಕೇಶವ್‌ ಮಹಾರಾಜ್!

Keshav Maharaj

Keshav Maharaj's ʼJai Shree Hanumanʼ Post After Win Against Pakistan

ನವದೆಹಲಿ: ಪಾಕಿಸ್ತಾನ ತಂಡವನ್ನು ಸೋಲಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡವು ಸೆಮಿಫೈನಲ್‌ ಟಿಕೆಟ್‌ಅನ್ನು ಖಚಿತಪಡಿಸಿಕೊಂಡಿದೆ. ಅಷ್ಟೇ ಅಲ್ಲ, ಪಾಕ್‌ ತಂಡವನ್ನು ವಿಶ್ವಕಪ್‌ ಟೂರ್ನಿಯಿಂದಲೇ (ICC World Cup 2023) ಬಹುತೇಕ ಹೊರಗಟ್ಟಿದೆ. ಅದರಲ್ಲೂ, ಭಾರತ ಮೂಲದ ಕೇಶವ್‌ ಮಹಾರಾಜ್‌ (Keshav Maharaj) ಅವರು ಕೊನೆಯ ಕ್ಷಣದಲ್ಲಿ ಬೌಂಡರಿ ಬಾರಿಸುವ ಮೂಲಕ ದಕ್ಷಿಣ ಆಫ್ರಿಕಾ (South Africa) ತಂಡವನ್ನು ಪಾರು ಮಾಡಿದ್ದು, ಅವರ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲೂ, ಕೇಶವ್‌ ಮಹಾರಾಜ್‌ ಅವರ ಆಟವನ್ನು ಭಾರತೀಯರೇ ಮೆಚ್ಚಿದ್ದಾರೆ. ಇದರ ಬೆನ್ನಲ್ಲೇ, ಕೇಶವ್‌ ಮಹಾರಾಜ್‌ ಅವರು “ಜೈ ಶ್ರೀ ಹನುಮಾನ್‌” (Jai Shree Hanuman) ಎಂದು ಪೋಸ್ಟ್‌ ಹಾಕಿರುವುದು ಭಾರತೀಯರ ಮನಗೆದ್ದಿದೆ.

ಪಂದ್ಯ ಗೆದ್ದ ಬಳಿಕ ಕೇಶವ್‌ ಮಹಾರಾಜ್‌ ಅವರು ಫೋಟೊ ಸಮೇತ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. “ನಾನು ದೇವರಲ್ಲಿ ನಂಬಿಕೆ ಇಟ್ಟಿದ್ದೇನೆ. ನಮ್ಮೆಲ್ಲ ತಂಡಕ್ಕೂ ಇದು ವಿಶೇಷ ಫಲಿತಾಂಶ. ಅದರಲ್ಲೂ ಟಬ್ರೈಜ್‌ ಶಮ್ಸಿ ಹಾಗೂ ಏಡೆನ್ ಮಾರ್ಕ್ರಮ್​ ಅವರ ಆಟವು ಅದ್ಭುತವಾಗಿತ್ತು. ಜೈ ಶ್ರೀ ಹನುಮಾನ್”‌ ಎಂದು ಕೇಶವ್‌ ಮಹಾರಾಜ್‌ ಪೋಸ್ಟ್‌ ಮಾಡಿದ್ದಾರೆ. ಅವರು ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದರೂ ದೇವರ ಮೇಲೆ ನಂಬಿಕೆ ಇಟ್ಟಿರುವುದು ಹಾಗೂ ಜೈ ಶ್ರೀ ಹನುಮಾನ್‌ ಎಂದು ಪೋಸ್ಟ್‌ ಹಾಕಿರುವುದಕ್ಕೆ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೇಶವ್‌ ಮಹಾರಾಜ್‌ ಪೋಸ್ಟ್

ಚೆನ್ನೈನ ಎಂ ಎ ಚಿದಂಬರಂ ಕ್ರಿಕೆಟ್​ ಸ್ಟೇಡಿಯಂ​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಪಾಕಿಸ್ತಾನ ತಂಡ ಮೊದಲು ಬ್ಯಾಟ್​ ಮಾಡಿ 46. 4 ಓವರ್​ಗಳಲ್ಲಿ 270 ರನ್​ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ತಂಡ 47.2 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 271 ರನ್ ಬಾರಿಸಿ ಗೆಲುವು ಸಾಧಿಸಿತು. ಕೊನೆಯಲ್ಲಿ ಕೇಶವ್‌ ಮಹಾರಾಜ್‌ ಅವರು ಬೌಂಡರಿ ಬಾರಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲುವು ತಂದಿತ್ತರು.‌

ಕೇಶವ್‌ ಮಹಾರಾಜ್‌ ಗೆಲುವಿನ ‘ಬೌಂಡರಿ’

ಇದನ್ನೂ ಓದಿ: ICC World Cup 2023 : ದ. ಆಫ್ರಿಕಾದ ʼಮಹಾರಾಜʼನಿಗೆ ತಲೆ ಬಾಗಿದ ಪಾಕಿಸ್ತಾನಕ್ಕೆ ಮತ್ತೊಂದು ಸೋಲು

ಒಂದು ಹಂತದಲ್ಲಿ 4 ವಿಕೆಟ್‌ ಕಳೆದುಕೊಂಡು 206 ರನ್‌ ಗಳಿಸಿ ಸುಸ್ಥಿತಿಯಲ್ಲಿದ್ದ ದಕ್ಷಿಣ ಆಫ್ರಿಕಾ ತಂಡವು 260 ರನ್‌ ಗಳಿಸುವಷ್ಟರಲ್ಲಿ 9 ವಿಕೆಟ್‌ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಕೇಶವ್‌ ಮಹಾರಾಜ್‌ ಅವರು ತಾಳ್ಮೆಯಿಂದ ಆಟವಾಡಿದರು. ಪಾಕಿಸ್ತಾನ ಗೆದ್ದೇ ಬಿಟ್ಟಿತು ಎನ್ನುವ ಸಂದರ್ಭದಲ್ಲಿ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಇದರಿಂದ ಗೆಲ್ಲಲೇಬೇಕಾದ ಪಂದ್ಯವನ್ನು ಸೋತ ಪಾಕಿಸ್ತಾನವು ಟೂರ್ನಿಯಿಂದ ಒಂದು ಕಾಲು ಹೊರಗಿಟ್ಟಿತು.

Exit mobile version