Site icon Vistara News

Kevin Pietersen: ಮೋದಿ ‘ಐಕಾನಿಕ್​ ಲೀಡರ್’; ಕೆವಿನ್​​ ಪೀಟರ್ಸನ್​​

Kevin Pietersen: Modi 'iconic leader'; Kevin Peterson

Kevin Pietersen: Modi 'iconic leader'; Kevin Peterson

ಲಂಡನ್​: ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರನ್ನು ಇಂಗ್ಲೆಂಡ್ ಕ್ರಿಕೆಟ್‌​ ತಂಡದ ಮಾಜಿ ನಾಯಕ ಕೆವಿನ್​​ ಪೀಟರ್ಸನ್(Kevin Pietersen)​​ ಹಾಡಿ ಹೊಗಳಿದ್ದಾರೆ. ಮೋದಿ ಅವರನ್ನು ‘ಐಕಾನಿಕ್​ ಲೀಡರ್’​ ಎಂದು ಬಣ್ಣಿಸಿದ್ದಾರೆ.

ಮೋದಿ ಅವರು ಭಾನುವಾರ(ಎಪ್ರಿಲ್​ 9) ಹುಲಿಗಳ ಸಂರಕ್ಷಣೆ ಕುರಿತ ಯೋಜನೆಯ (Project Tiger) ಸುವರ್ಣ ಸಂಭ್ರಮ (50 ವರ್ಷ) ಹಿನ್ನೆಲೆಯಲ್ಲಿ ಬಂಡಿಪುರ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿದ್ದರು. ಬಂಡಿಪುರ ಅಭಯಾರಣ್ಯದಲ್ಲಿ ಎರಡು ಗಂಟೆ ಕಾಲ ಹುಲಿ ಸಫಾರಿಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಮಧುಮಲೈ ಟೈಗರ್‌ ರಿಸರ್ವ್‌ ವ್ಯಾಪ್ತಿಗೆ ಸೇರಿದ ತೆಪ್ಪಕಾಡು ಶಿಬಿರದಲ್ಲಿ ಆನೆಗಳಿಗೆ ಕಬ್ಬು ತಿನ್ನಿಸಿದರು. ಈ ಬಗ್ಗೆ ಟ್ವೀಟ್​​ ಮಾಡಿರುವ ಕೆವಿನ್​ ಪೀಟರ್ಸನ್ ಅವರು ಮೋದಿ ಅವರನ್ನು ವಿಶ್ವನಾಯಕ ಎಂದು ಹೊಗಳಿದ್ದಾರೆ.

ಇದನ್ನೂ ಓದಿ Narendra Modi: ದಿ ಎಲಿಫೆಂಟ್‌ ವಿಸ್ಪರರ್ಸ್‌ ಖ್ಯಾತಿಯ ಬೊಮ್ಮ-ಬೆಳ್ಳಿ ದಂಪತಿ ಜತೆ ಮೋದಿ ಮಾತು, ಆನೆ ಸಂರಕ್ಷಣೆಗೆ ಮೆಚ್ಚುಗೆ

​”ವಿಶ್ವನಾಯಕ ಮೋದಿ ಅವರ ಕಾಡು ಪ್ರಾಣಿಗಳ ಕಾಳಜಿ ನಿಜಕ್ಕೂ ಎಲ್ಲರಿಗೂ ಮಾದರಿ. ಕಾಡು ಪ್ರಾಣಿಗಳ ವಾಸ ಸ್ಥಾನದಲ್ಲಿ ಸಮಯ ಕಳೆಯುವುದರಲ್ಲಿ ಅವರು ಉತ್ಸುಕರಾಗಿದ್ದಾರೆ. ಇವರು ತಮ್ಮ ಜನ್ಮದಿನದಂದು ಭಾರತಕ್ಕೆ ಚಿರತೆಗಳನ್ನು ತಂದು ಕಾಡಿಗೆ ಬಿಟ್ಟಿದ್ದನ್ನು ನಾವು ನೆನಪಿಸಿಕೊಳ್ಳಬೇಕು. ನಿಜವಾಗಿಯೂ ಮೋದಿ ಓರ್ವ ಹೀರೋ” ಎಂದು ಪೀಟರ್ಸನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆವಿನ್​​ ಪೀಟರ್ಸನ್​​ ಕೂಡ ತಮ್ಮ ಸೋರೈ (Save Our Rhinos in Africa and India) ಎಂಬ ಸಂಸ್ಥೆಯ ಮೂಲಕ ಘೇಂಡಾಮೃಗಗಳ ರಕ್ಷಣೆಯ ಕಾರ್ಯ ಮಾಡುತ್ತಿದ್ದಾರೆ.

ಕೆಳ ತಿಂಗಳುಗಳ ಹಿಂದೆ ಭಾರತ ಪ್ರವಾಸ ಮಾಡಿದ್ದ ಪೀಟರ್ಸನ್‌ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ “ನಿಮ್ಮನ್ನು ಭೇಟಿಯಾಗಿರುವುದು ನನ್ನ ಜೀವನದ ಸ್ಮರಣೀಯ ನೆನಪುಗಳಲ್ಲಿ ಒಂದಾಗಲಿದೆ. ನಿಮ್ಮ ಈ ನಗು ಮತ್ತು ನೀವು ಅತಿಥಿಗಳನ್ನು ಸ್ವಾಗತಿಸುವ ರೀತಿ ನನಗೆ ತುಂಬಾ ಇಷ್ಟ” ಎಂದು ಹೇಳಿದ್ದರು.

ಇದನ್ನೂ ಓದಿ IPL 2023 : ಬಡತನದ ಬೇಗೆಯಲ್ಲಿ ಅರಳಿದ ಪ್ರತಿಭೆ ಕೋಲ್ಕೊತಾ ತಂಡದ ರಿಂಕು ಸಿಂಗ್​

ಬಂಡಿಪುರ ಅಭಯಾರಣ್ಯದಲ್ಲಿ ತೆರೆದ ಜೀಪ್​​ನಲ್ಲಿ ವನ್ಯಜೀವಿ ಸಫಾರಿ ನಡೆಸಿದ ಮೋದಿ ಅವರು ವನ್ಯ ಜೀವಿಗಳನ್ನು ಕಣ್ತುಂಬಿಕೊಂಡಿದ್ದರು. ಸಫಾರಿ ದಿರಿಸು ಧರಿಸಿ, ಟೋಪಿ, ಗೋಗಲ್ಸ್ ಜತೆಗೆ ಕ್ಯಾಮರಾ ಹಿಡಿದು, ವನ್ಯಜೀವಿಗಳು, ಪ್ರಕೃತಿ ಸೌಂದರ್ಯವನ್ನು ಅನುಭವಿಸಿದ್ದರು. ಈ ಫೋಟೊಗಳು ಸಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

Exit mobile version