Site icon Vistara News

KGF 3 Actor Yash | ಕೆಜಿಎಫ್​ನ ರಾಕಿ ಭಾಯ್​, ಪಾಂಡ್ಯ ಬ್ರದರ್ಸ್​ ಭೇಟಿ; ಕೆಜಿಎಫ್​ 3 ಟ್ರೆಂಡಿಂಗ್​

hardik pandya

ಮುಂಬಯಿ : ಸ್ಯಾಂಡಲ್​ವುಡ್​ ನಟ ಹಾಗೂ ಬ್ಲಾಕ್​ ಬಸ್ಟರ್​ ಕೆಜಿಎಫ್​ ಸಿನಿಮಾದ ರಾಕಿ ಭಾಯ್​ ಖ್ಯಾತಿಯ ಯಶ್​ ಅವರನ್ನು ಟೀಮ್​ ಇಂಡಿಯಾದ ಕ್ರಿಕೆಟಿಗರಾದ ಕೃಣಾಲ್​ ಹಾಗೂ ಹಾರ್ದಿಕ್ ಪಾಂಡ್ಯ ಭೇಟಿಯಾಗಿದ್ದಾರೆ. ಯಶ್​ ಅವರನ್ನು ತಪ್ಪಿ ಹಿಡಿದುಕೊಂಡಿರುವ ಚಿತ್ರವನ್ನು ಹಾರ್ದಿಕ್​ ಪಾಂಡ್ಯ ಇನ್​ಸ್ಟಾಗ್ರಾಮ್​ನಲ್ಲಿ ಪ್ರಕಟಿಸಿದ್ದಾರೆ. ಇವರಿಬ್ಬರ ಭೇಟಿಯ ಹಿನ್ನೆಲೆಯಲ್ಲಿ ಕೆಜಿಎಫ್​ 3 ಸಿನಿಮಾ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್​ ಆಗಿದೆ.

ಪಾಂಡ್ಯ ಬ್ರದರ್ಸ್​ ಹಾರ್ದಿಕ್​ ಹಾಗೂ ಕೃಣಾಲ್​ ಪಾಂಡ್ಯ ಕೆಜಿಎಫ್​ ಸಿನಿಮಾದ ಅಭಿಮಾನಿಗಳಾಗಿದ್ದಾರೆ. ಹೀಗಾಗಿ ಅವರಿಗೆ ಯಶ್​​ ಅಂದರೆ ಸಿಕ್ಕಾಪಟ್ಟೆ ಇಷ್ಟ. ಸಿನಿಮಾ ಅಭಿಮಾನಿಗಳು ಕೆಜಿಎಫ್​ 3ನೇ ಭಾಗಕ್ಕಾಗಿ ಕಾಯುತ್ತಿದ್ದಾರೆ. ಅಂತೆಯೇ ಪಾಂಡ್ಯ ಬ್ರದರ್ಸ್​ ಕೂಡ ಸಿನಿಮಾ ನೋಡುವ ನಿರೀಕ್ಷೆಯಲ್ಲಿದ್ದಾರೆ.

ಕೆಜಿಎಫ್​ ಮೂಲಕ ದಕ್ಷಿಣ ಭಾರತದ ಸಿನಿಮಾಕ್ಕೆ ಎಂಟ್ರಿ ಪಡೆದಿದ್ದ ರವೀನಾ ಟಂಡನ್​ ಅವರು ಶೀಘ್ರದಲ್ಲೇ ಸಿನಿಮಾ ಬಿಡುಗಡೆಯಾಗುತ್ತದೆ ಎಂಬ ಸುಳಿವು ಕೊಟ್ಟಿದ್ದಾರೆ. ಇತ್ತೀಚೆಗೆ ಮುಂಬಯಿಯಲ್ಲಿ ನಡೆದ ಕಾರ್ಯಕ್ರಮದ ವೇಳೆ ಮಾತನಾಡಿದ ಅವರು ಶೀಘ್ರದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Hombale Films | ಕೆಜಿಎಫ್‌ಗೆ 4 ವರ್ಷಗಳ ಸಂಭ್ರಮ: ಸ್ಪೆಷಲ್‌ ಪೋಸ್ಟ್‌ ಹಂಚಿಕೊಂಡ ಹೊಂಬಾಳೆ ಫಿಲ್ಮ್ಸ್‌!

Exit mobile version