Site icon Vistara News

Team India | ಸರಣಿ ಗೆದ್ದ ಭಾರತ ಮಹಿಳೆಯರ ತಂಡದ ಸದಸ್ಯರ ಹೋಟೆಲ್‌ ರೂಮ್‌ನಲ್ಲಿ ಹಣ ಕದ್ದ ಖದೀಮರು

team india

ಲಂಡನ್‌ : ಭಾರತ ಮಹಿಳೆಯರ ತಂಡ (Team India) ಇಂಗ್ಲೆಂಡ್‌ ಪ್ರವಾಸದಲ್ಲಿನ ಏಕ ದಿನ ಸರಣಿಯನ್ನು ೩-೦ ಅಂತರದಿಂದ ವಶಪಡಿಸಿಕೊಂಡಿತ್ತು. ಈ ಖುಷಿಯಲ್ಲಿದ್ದ ತಂಡದ ಆಟಗಾರ್ತಿಯೊಬ್ಬರಿಗೆ ತಾವು ತಂಗಿದ್ದ ಹೋಟೆಲ್ ಕೊಠಡಿಗೆ ಹೋದಾಗ ಆಘಾತವಾಗಿದೆ. ಯಾಕೆ ಗೊತ್ತೇ? ಅವರ ರೂಮ್‌ನಲ್ಲಿ ಕಳ್ಳತನವಾಗಿದೆ. ನಗ, ನಗದು ಹಾಗೂ ಡೆಬಿಟ್‌ ಕಾರ್ಡ್‌ಗಳನ್ನು ಎತ್ತಿಕೊಂಡು ಖದೀಮರು ಪಲಾಯನಗೈದಿದ್ದಾರೆ.

ಆಶ್ಚರ್ಯಕರ ಸಂಗತಿ ಏನೆಂದರೆ ಭಾರತ ತಂಡದ ಸದಸ್ಯರು ತಂಗಿದ್ದು ಸಾಮಾನ್ಯ ಹೋಟೆಲ್‌ ಏನಲ್ಲ. ಅದು ಐಷಾರಾಮಿ ಮ್ಯಾರಿಯೆಟ್‌ ಹೋಟೆಲ್‌. ಕಳ್ಳತನವಾಗಿರುವುದು ಭಾರತ ತಂಡದ ವಿಕೆಟ್‌ಕೀಪರ್‌ ಬ್ಯಾಟರ್ ತಾನಿಯಾ ಭಾಟಿಯಾ ಅವರ ಕೊಠಡಿಯಲ್ಲಿ. ವಿಷಯವನ್ನು ಅವರು ಟ್ವೀಟ್‌ ಮಾಡಿ ತಿಳಿಸಿದ್ದಾರೆ.

ಇದೊಂದು ಆಘಾತಕಾರಿ ಸಂಗತಿ. ನಾನು ತಂಗಿದ್ದ ಲಂಡನ್‌ನ ಮ್ಯಾರಿಯೆಟ್ ಹೋಟೆಲ್‌ನ ನನ್ನ ಕೊಠಡಿಯಲ್ಲಿ ಕಳ್ಳತನವಾಗಿದೆ. ನನ್ನ ಕೊಠಡಿಗೆ ನುಗ್ಗಿ ಬ್ಯಾಗ್‌, ನಗದು, ವಾಚ್‌, ಆಭರಣ ಹಾಗೂ ಕಾರ್ಡ್‌ಗಳನ್ನು ಕದ್ದೊಯ್ಯಲಾಗಿದೆ. ಮ್ಯಾರಿಯೆಟ್‌ ಹೋಟೆಲ್‌ ಇಷ್ಟೊಂದು ಅಸುರಕ್ಷಿತ ಎಂಬುದು ಗೊತ್ತಿರಲಿಲ್ಲ. ಈ ಬಗ್ಗೆ ತಕ್ಷಣದಲ್ಲೇ ತನಿಖೆ ನಡೆದು ಪರಿಹಾರ ದೊರೆಯಲಿ ಎಂದು ಬಯಸುತ್ತೇನೆ. ಇಷ್ಟೊಂದು ಅಸುರಕ್ಷಿತವಾದ ಹೋಟೆಲ್‌ನಲ್ಲಿ ಇಸಿಬಿ ನಮಗೆ ಉಳಿದಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದು ಯಾಕೆ ಎಂಬುದೇ ಗೊತ್ತಿಲ್ಲ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವರೆಂಬ ಭರವಸೆಯಿದೆ,” ಎಂಬುದಾಗಿ ತಾನಿಯಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Women’s FTP | 3 ವರ್ಷದಲ್ಲಿ ಎಷ್ಟು ಪಂದ್ಯ ಆಡಲಿದೆ ಭಾರತ ಮಹಿಳೆಯರ ಕ್ರಿಕೆಟ್‌ ತಂಡ, ಇಲ್ಲಿದೆ ಮಾಹಿತಿ

Exit mobile version