Site icon Vistara News

Ashes 2023 : ಖವಾಜ, ವಾರ್ನರ್​ಗೆ ಅವಮಾನ; ಎಂಸಿಸಿಯ ಮೂವರು ಸದಸ್ಯರು ಅಮಾನತು

Ashesh 2023

ಬೆಂಗಳೂರು: ಆ್ಯಷಸ್ ಸರಣಿಯ ಎರಡನೇ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾ ತಂಡದ ಆಟಗಾರರಾದ ಉಸ್ಮಾನ್​ ಖ್ವಾಜಾ ಹಾಗೂ ಡೇವಿಡ್​ ವಾರ್ನರ್ ಅವರನ್ನು ನಿಂದಿಸಿದ ಮೆರಿಲ್​ಬೋನ್​ ಕ್ರಿಕೆಟ್​ ಕ್ಲಬ್​ ಸದಸ್ಯರನ್ನು ಅಮಾನತು ಮಾಡಲಾಗಿದೆ. ಜಾನಿ ಬೈರ್​ಸ್ಟೋವ್​ ಅವರ ವಿವಾದಾತ್ಮಕ ಔಟ್​ ತೀರ್ಪು ಹಿನ್ನೆಲೆಯಲ್ಲಿ ಕೋಪಗೊಂಡ ಸದಸ್ಯರು ಅವರು ಡ್ರೆಸ್ ರೂಮ್​ಗೆ ತೆರಳುತ್ತಿದ್ದ ಆಸ್ಟ್ರೇಲಿಯಾ ತಂಡದ ಆಟಗಾರರನ್ನು ನಿಂದಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ತಕ್ಷಣ ಕ್ರಮ ಕೈಗೊಂಡ ಕ್ಲಬ್ ಅವರನ್ನು ಅಮಾನತು ಮಾಡಿದೆ.

ಲಾರ್ಡ್ಸ್​​ ಕ್ರಿಕೆಟ್​ ಸ್ಟೇಡಿಯಮ್​​ನ ಲಾಂಗ್ ರೂಮ್ ಮೂಲಕ ಆಸ್ಟ್ರೇಲಿಯಾ ತಂಡದ ಆಟಗಾರರು ನಡೆದುಕೊಂಡು ಹೋಗುತ್ತಿದ್ದ ವೇಳ ಉಸ್ಮಾನ್ ಖವಾಜಾ ಅವರನ್ನು ಎಸಿಸಿ ಸದಸ್ಯರೊಬ್ಬರು ನಿಂದಿಸಿದ್ದರು. ತಕ್ಷಣ ಅವರು ಪ್ರತ್ಯುತ್ತರ ಕೊಡಲು ಮುಂದಕ್ಕೆ ಹೋಗಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ಖ್ವಾಜಾ ಮತ್ತು ಸದಸ್ಯರ ವಾಗ್ವಾದಕ್ಕೆ ಬ್ರೇಕ್​ ಹಾಕಿದ್ದರು. ಬಳಿಕ ವಾರ್ನರ್ ಜತೆಯೂ ಅವರು ಜಗಳವಾಡಿದ್ದಾರೆ. ಆಸ್ಟ್ರೇಲಿಯಾದ ಆಟಗಾರರು ಮೆಟ್ಟಿಲುಗಳನ್ನು ಹತ್ತುತ್ತಿದ್ದಂತೆ ಸದಸ್ಯರು ಜೋರಾಗಿ ಛೀಮಾರಿ ಹಾಕಿದ್ದರು. ಘಟನೆ ಮುಗಿದ ತಕ್ಷಣ ಎಚ್ಚೆತ್ತುಕೊಂಡ ಕ್ಲಬ್​ ಮೂವರು ಸದಸ್ಯರನ್ನು ಅಮಾನತು ಮಾಡಿದ್ದಾರೆ.

ಈ ಘಟನೆಯ ಬಗ್ಗೆ ತನಿಖೆ ನಡೆಸಬೇಕೆಂದು ಕ್ರಿಕೆಟ್ ಆಸ್ಟ್ರೇಲಿಯಾ ಒತ್ತಾಯಿಸಿದ ನಂತರ, ಎಂಸಿಸಿ ಘರ್ಷಣೆಯ ಭಾಗವಾಗಿದ್ದ ಮೂವರು ಸದಸ್ಯರನ್ನು ಅಮಾನತುಗೊಳಿಸಿದೆ. ತನಿಖೆ ನಡೆಯುವವರೆಗೂ ಅವರನ್ನು ಮತ್ತೆ ಸದಸ್ಯತ್ವ ನೀಡುವುದಿಲ್ಲ ಎಂದು ಹೇಳಿದ್ದಾರೆ.

ವಿಶ್ವ ಕ್ರಿಕೆಟ್​​ನಲ್ಲಿ ಲಾರ್ಡ್ಸ್​​ ಮೈದಾನದ ಲಾಂಗ್ ರೂಮ್ ವಿಶಿಷ್ಟ ಜಾಗ. ಪೆವಿಲಿಯನ್ ಮೂಲಕ ಹಾದುಹೋಗುವ ಆಟಗಾರರ ಅಲ್ಲಿ ಪ್ರಶಂಸೆ ಸಿಗುತ್ತವೆ. ಆದರೆ, ಎರಡನೇ ಪಂದ್ಯದ ವೇಳೆ ಗಲಾಟೆ ನಡೆದಿದ್ದವು. ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್​ ಉಸ್ಮಾನ್ ಖವಾಜಾ ಮೆರಿಲ್​ಬೋನ್​ ಕ್ರಿಕೆಟ್ ಕ್ಲಬ್ (ಎಂಸಿಸಿ) ಆಟಗಾರರು ಬೆಳಗ್ಗೆ ಸೆಷನ್ ನಂತರ ಪೆವಿಲಿಯನ್​ಗೆ ನಡೆದುಕೊಂಡು ಹೋಗುವಾಗ ನಿಂದನಾತ್ಮಕ ಭಾಷೆ ಬಳಸಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ : Ashes 2023: ಆ್ಯಶಸ್​​ ಟೆಸ್ಟ್​ ಸರಣಿಯಿಂದ ಹೊರಬಿದ್ದ ನಥಾನ್​ ಲಿಯೋನ್​

ಈ ಪಂದ್ಯವೇ ವಿಶೇಷವಾಗಿತ್ತು ಆದರೆ ಮೆರಿಲ್​ಬೋನ್​ ಕ್ಲಬ್​ನ ಸದಸ್ಯರ ಬಾಯಿಯಿಂದ ಹೊರಬಂದಿರುವ ಮಾತುಗಳು ನಿರಾಶಾದಾಯಕ. ಈ ವಿಚಾರವನ್ನು ಆಯೋಜಕರ ಗಮನಕ್ಕೆ ತಂದಿದ್ದೇನೆ ಎಂದು ಉಸ್ಮಾನ್​ ಖವಾಜಾ ನ್ಯೂಸ್​ 9ಗೆ ತಿಳಿಸಿದ್ದರು.

ಸದಸ್ಯರಲ್ಲಿ ಕೆಲವರು ನಮ್ಮ ಮೇಲೆ ದೊಡ್ಡ ಆರೋಪಗಳನ್ನು ಹೊರಿಸುತ್ತಿದ್ದರು. ನಾನು ನಿರಾಕರಿಸಿದರೂ ಮಾತು ಮುಂದುವರಿಸುತ್ತಲೇ ಇದ್ದರು. ನಾನು ಪ್ರತಿರೋಧ ಒಡ್ಡಿದರೂ ಅವರು ಉತ್ತರ ಕೊಡಲಿಲ್ಲ. ಅವರ ಮಾತುಗಳು ಅಗೌರವದಿಂದ ಕೂಡಿತ್ತು. ನಾನು ಸದಸ್ಯರಿಂದ ಸಾಕಷ್ಟು ಉತ್ತಮವಾದದ್ದನ್ನು ನಿರೀಕ್ಷಿಸುತ್ತೇನೆ ಎಂದು ಅವರು ಹೇಳಿದ್ದಾರೆ.

Exit mobile version