ಚೆನ್ನೈ : ಮೈಸೂರು ಮೂಲದ ಕಿಕ್ ಬಾಕ್ಸರ್ ಒಬ್ಬರು ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯ ವೇಳೆ ರಿಂಗ್‌ನಲ್ಲೇ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದು ತಿಂಗಳಾಗುವಷ್ಟರಲ್ಲಿ ಅಂಥದ್ದೇ ಒಂದು ದುರಂತ ಚೆನ್ನೈನಲ್ಲಿ ನಡೆದಿದೆ. ಅರುಣಾಚಲ ಮೂಲದ ಕಿಕ್ ಬಾಕ್ಸರ್ ಒಬ್ಬರು ಆಘಾತದಿಂದ ಮೃತಪಟ್ಟ ಘಟನೆ ವಾಕೊ Kick Boxing ಚಾಂಪಿಯನ್‌ಷಿಪ್‌ನಲ್ಲಿ ನಡೆದಿದೆ.
ಯೋರಾ ಟಾಡೆ ಮೃತಪಟ್ಟ ಕಿಕ್ ಬಾಕ್ಸರ್. ಸ್ಪರ್ಧೆಯ ನಡುವೆ ಪ್ರಜ್ಞಾಹೀನರಾಗಿದ್ದ ಬಿದ್ದಿದ್ದ ಅವರನ್ನು ಚೆನ್ನೈಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಮೆದುಳಿನ ಗಾಯವಾಗಿದ್ದ ಕಾರಣ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆದರೂ ಅವರು ಬದುಕಿ ಉಳಿಯಲಿಲ್ಲ. ಈ ಘಟನೆ ಆಗಸ್ಟ್ ೨೧ರಂದು ನಡೆದಿದೆ .
ಅಥ್ಲೀಟ್‌ನ ನಿಧನಕ್ಕೆ ಅರುಣಾಚಲ ಪ್ರದೇಶ ಸಿಎಂ ಹಾಗೂ ಕ್ರೀಡಾ ಸಚಿವರು ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ಘಟನೆ ಬಗ್ಗೆ ತನಿಖೆಗೆ ತಮಿಳುನಾಡು ಸರಕಾರದ ಜತೆ ಸಹಕಾರ ನೀಡುವುದಾಗಿ ಹೇಳಿದ್ದಾರೆ.
ತಿಂಗಳ ಹಿಂದೆ ಬೆಂಗಳೂರಿನ ಕೆ. ಅರ್ ಪುರದಲ್ಲಿ ನಡೆದಿದ್ದ ಕಿಕ್‌ಬಾಕ್ಸಿಂಗ್ ಸ್ಪರ್ಧೆಯಲ್ಲಿ ಮೈಸೂರು ಮೂಲದ ನಿವಾಸಿ ನಿಖಿಲ್ ಅವರು ರಿಂಗ್‌ನಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದರು. ಈ ಹಿಂದೆಯೂ ಅಂಥ ಘಟನೆಗಳು ನಡೆದಿದ್ದವು. ಇದೀಗ ಈ ಕ್ರೀಡೆಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ.
ಇದನ್ನೂ ಓದಿ | Kickboxing Death | ಬೆಂಗಳೂರಿನಲ್ಲಿ ಒಂದೇ ಏಟಿಗೆ ರಿಂಗ್‌ನಲ್ಲೇ ಬಾಕ್ಸರ್ ಸಾವು