ನವ ದೆಹಲಿ : ವೆಸ್ಟ್ ಇಂಡೀಸ್‌ನ ಬಲಿಷ್ಠ ಬ್ಯಾಟ್ಸ್‌ಮನ್ ಕೀರನ್ ಪೊಲಾರ್ಡ್ (CRICKET) ವಿಶ್ವ ದಾಖಲೆಯೊಂದನ್ನು ಬರೆದಿದ್ದಾರೆ. ಅವರು ೬೦೦ ಟಿ೨೦ ಪಂದ್ಯಗಳನ್ನು ಆಡಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇದುವರೆಗೆ ಯಾರೂ ಮಾಡದ ದಾಖಲೆ ಇದಾಗಿದೆ. ಇದೀಗ ನಡೆಯುತ್ತಿರುವ ದಿ ಹಂಡ್ರಡ್ ಲೀಗ್‌ನಲ್ಲಿ ಕಣಕ್ಕೆ ಇಳಿಯುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ. ಈ ಲೀಗ್‌ನಲ್ಲಿ ಅವರು ಲಂಡನ್ ಸ್ಪಿರಿಟ್ ತಂಡದ ಪರವಾಗಿ ಆಡುತ್ತಿದ್ದಾರೆ.
ಕೀರನ್ ಪೊಲಾರ್ಡ್ ಅವರು ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆದರೆ, ಕ್ರಿಕೆಟ್ ಲೀಗ್‌ಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವರು ಐಪಿಎಲ್‌ನಲ್ಲಿ ಮುಂಬಯಿ ಇಂಡಿಯನ್ಸ್ ತಂಡದ ಪರ ೨೦೧೦ರಿಂದಲೂ ಆಡುತ್ತಿದ್ದಾಗೆ. ಹೀಗೆ ಅಂತಾರಾಷ್ಟ್ರೀಯ ಪಂದ್ಯಗಳು, ಕೆರಿಬಿಯನ್ ಪ್ರೀಮಿಯರ್ ಲೀಗ್, ಐಪಿಎಲ್ ಸೇರಿ ಒಟ್ಟಾರೆ ೬೦೦ ಟಿ೨೦ ಪಂದ್ಯಗಳನ್ನು ಆಡಿದ್ದಾರೆ.
600 ಟಿ20 ಕ್ರಿಕೆಟ್ ಪಂದ್ಯಗಳ 533 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಿರುವ ಪೊಲಾರ್ಡ್ 31 ರ ಸರಾಸರಿಯಲ್ಲಿ 11,723 ರನ್ ಗಳಿಸಿದ್ದಾರೆ. ಈ ವೇಳೆ ಒಂದು ಶತಕ ಮತ್ತು 56 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಅಷ್ಟೇ ಅಲ್ಲದೆ 780 ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಇದೇ ವೇಳೆ ಒಟ್ಟು 309 ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ಆಟಗಾರ ಡ್ವೇನ್ ಬ್ರಾವೊ ಇದ್ದಾರೆ. ಡ್ವೇನ್ ಬ್ರಾವೊ ಇದುವರೆಗೆ ಒಟ್ಟು 543 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಇಬ್ಬರು ವಿಂಡೀಸ್ ಆಟಗಾರರನ್ನು ಹೊರತುಪಡಿಸಿ ಯಾವುದೇ ಕ್ರಿಕೆಟಿಗರು 500 ಟಿ20 ಪಂದ್ಯಗಳನ್ನಾಡಿಲ್ಲ.
ಅತಿ ಹೆಚ್ಚು ಟಿ೨೦ ಪಂದ್ಯಗಳನ್ನು ಆಡಿದ ಪ್ರಮುಖ ಕ್ರಿಕೆಟಿಗರು
ಆಟಗಾರ | ದೇಶ | ಪಂದ್ಯ |
ಕೀರನ್ ಪೊಲಾರ್ಡ್ | ವೆಸ್ಟ್ ಇಂಡೀಸ್ | 600 |
ಡ್ವೇನ್ ಬ್ರಾವೊ | ವೆಸ್ಟ್ ಇಂಡೀಸ್ | 543 |
ಶೋಯಿಬ್ ಮಲಿಕ್ | ಪಾಕಿಸ್ತಾನ | 472 |
ಕ್ರಿಸ್ ಗೇಲ್ | ವೆಸ್ಟ್ ಇಂಡೀಸ್ | 463 |
ರವಿ ಬೋಪಾರಾ | ಇಂಗ್ಲೆಂಡ್ | 426 |
ರೋಹಿತ್ ಶರ್ಮ | ಭಾರತ | 391 |