Site icon Vistara News

ದಿಗ್ಗಜ ಆಟಗಾರನ ಕ್ಯಾಚ್​ ದಾಖಲೆ ಮೇಲೆ ಕಣ್ಣಿಟ್ಟ ಕಿಂಗ್​ ಕೊಹ್ಲಿ; ಜಸ್ಟ್​ 2 ಕ್ಯಾಚ್​ ಅವಶ್ಯ

virat kohli catch

ಪುಣೆ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ಅವರು ಇಂದು ನಡೆಯುವ ಬಾಂಗ್ಲಾದೇಶ(IND vs BAN) ವಿರುದ್ಧದ ಪಂದ್ಯದಲ್ಲಿ ಜಸ್ಟ್​ 2 ಕ್ಯಾಚ್​ ಹಿಡಿದರೆ, ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ಕ್ಯಾಚ್(Most catches in World Cup)​ ಪಡೆದ ಸಾಧಕರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯಲಿದ್ದಾರೆ.

ವಿರಾಟ್​ ಕೊಹ್ಲಿ ಅವರು ಸದ್ಯ 17 ಕ್ಯಾಚ್​ ಹಿಡಿದು ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೊಮ್ಮೆ ಅವರು ಬಾಂಗ್ಲಾ ವಿರುದ್ಧ 2 ಕ್ಯಾಚ್​ ಪಡೆದರೆ ಮೂರನೇ ಸ್ಥಾನದಲ್ಲಿರುವ ಲಂಕಾದ ಮಾಜಿ ದಿಗ್ಗಜ ಆಟಗಾರ ಸನತ್​ ಜಯಸೂರ್ಯ(Sanath Jayasuriya) ಅವರ ದಾಖಲೆ ಪತನಗೊಳ್ಳಲಿದೆ. ಅವರು 18 ಕ್ಯಾಚ್​ ಹಿಡಿದ್ದಾರೆ.

ಪಾಟಿಂಗ್​ಗೆ ಮೊದಲ ಸ್ಥಾನ

ವಿಶ್ವಕಪ್​ ಇತಿಹಾಸದಲ್ಲಿ ಅತ್ಯಧಿಕ ಕ್ಯಾಚ್​ ಪಡೆದ ಆಟಗಾರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ನಾಯಕ ರಿಕಿ ಪಾಂಟಿಂಗ್(ricky ponting) ಅವರು ಮೊದಲ ಸ್ಥಾನ ಪಡೆದಿದ್ದಾರೆ. ಪಾಂಟಿಂಗ್​ 2 ಬಾರಿ ನಾಯಕನಾಗಿ ಮತ್ತು ಒಂದು ಬಾರಿ ಆಟಗಾರನಾಗಿ ವಿಶ್ವಕಪ್​ ಗೆದ್ದ ಸಾಧನೆ ಮಾಡಿದ್ದಾರೆ. 1996-2011ರ ತನಕದ ವಿಶ್ವಕಪ್ ಪಯಣದಲ್ಲಿ 46 ಪಂದ್ಯಗಳನ್ನು ಆಡಿ 28 ಕ್ಯಾಚ್​ ಪಡೆದಿದ್ದಾರೆ.

ಪ್ರಸ್ತುತ ಇಂಗ್ಲೆಂಡ್​ ತಂಡದ ಪರ ಆಡುತ್ತಿರುವ ಜೋ ರೂಟ್​ ಅವರು ಅತ್ಯಧಿಕ ಕ್ಯಾಚ್​ ಪಡೆದ ಆಟಗಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 2015-2019ರ ಸಾಲಿನಲ್ಲಿ 17 ಪಂದ್ಯಗಳನ್ನು ಆಡಿ 24 ಕ್ಯಾಚ್​ ಪಡೆದಿದ್ದಾರೆ. ಈ ಬಾರಿಯ ಟೂರ್ನಿ ಆರಂಭಕ್ಕೂ ಮುನ್ನ ಅವರ ಕ್ಯಾಚ್​ಗಳ ಸಂಖ್ಯೆ 20ರಲ್ಲಿತ್ತು. ಆದರೆ ಈಗಾಗಲೇ 4 ಕ್ಯಾಚ್​ ಪಡೆದು ಮುನ್ನುಗ್ಗುತ್ತಿದ್ದಾರೆ. ಇನ್ನು 5 ಕ್ಯಾಚ್​ ಪಡೆದರೆ ರಿಕಿ ಪಾಂಟಿಂಗ್ ಸರ್ವಕಾಲಿಕ ದಾಖಲೆ ಪತನಗೊಳ್ಳಲಿದೆ. ಸದ್ಯ ಕೊಹ್ಲಿ ಮತ್ತು ರೂಟ್​ ಅವರಲ್ಲಿ ಕ್ಯಾಚ್​ ದಾಖಲೆಯ ಪೈಪೋಟಿ ಏರ್ಪಟ್ಟಿದೆ.

ಇದನ್ನೂ ಓದಿ IND vs BAN: ಕೊಹ್ಲಿಯನ್ನು ಕೆಣಕಿದರೆ ಸೋಲು ಖಚಿತ; ಮುಷ್ಫಿಕರ್‌ ರಹೀಂ

ಬ್ಯಾಟಿಂಗ್ ಶೈಲಿ ಬದಲಿಸುವರೇ ಕೊಹ್ಲಿ?

ರನ್​ ಮೆಷಿನ್ ಖ್ಯಾತಿಯ ವಿರಾಟ್ ಕೊಹ್ಲಿ (Virat Kohli) ಅವರು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ಶೈಲಿಯನ್ನು ಬದಲಾಯಿಸುವ ಇಚ್ಛೆ ಹೊಂದಿದ್ದಾರೆ ಎಂಬ ಸುಳಿವೊಂದು ಲಭಿಸಿದೆ. ಈ ಪಂದ್ಯದಲ್ಲಿ ಅವರು ಸ್ಫೋಟಕ ಬ್ಯಾಟಿಂಗ್​ ಮೂಲಕ ಸಿಕ್ಸರ್​ಗಳನ್ನು ಬಾರಿಸುವ ಇರಾದೆಯಲ್ಲಿದ್ದಂತೆ ತೋರುತ್ತಿದೆ. ಇದಕ್ಕೆ ಕಾರಣ, ಅವರು ಎಂದಿನಂತೆ ನೆಟ್ಸ್​ನಲ್ಲಿ ಅಭ್ಯಾಸ ನಡೆಸುವ ಬದಲು ಈ ಬಾರಿ ಪವರ್ ಹಿಟ್​ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅಬ್ಬರದ ಸಿಕ್ಸರ್​ಗಳನ್ನು ಬಾರಿಸುವ ಕಲೆಯನ್ನು ಅಭ್ಯಾಸ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಸಾಂಪ್ರದಾಯಿಕ ಕ್ರಿಕೆಟ್ ಪ್ರಕಾರಕ್ಕೆ ಒತ್ತು ನೀಡಿ ಸಾಂಪ್ರದಾಯಿಕ ಶಾಟ್​​ಗಳನ್ನೇ ಹೆಚ್ಚು ಆಡುತ್ತಾರೆ. ಅದ್ಭುತ ಕವರ್ ಡ್ರೈವ್ ಆಗಿರಲಿ ಅಥವಾ ಅದ್ಭುತವಾದ ಸ್ಟ್ರೈಟ್​ ಡ್ರೈವ್ ಆಗಿರಲಿ, ಕೊಹ್ಲಿ ತಮ್ಮ ಶಾಟ್​ಗಳನ್ನು ನೆಲದ ಮೇಲೆ ಹೊಡೆಯಲು ಆದ್ಯತೆ ನೀಡುತ್ತಾರೆ. ಆದಾಗ್ಯೂ, ಭಾರತದ ತರಬೇತಿ ಅಧಿವೇಶನದಲ್ಲಿ ವಿಭಿನ್ನ ಪ್ರದರ್ಶನವನ್ನು ನೀಡಿದ್ದಾರೆ. ಅವರು ನಿಜವಾಗಿಯೂ ಬ್ಯಾಟಿಂಗ್​ ಶೈಲಿಯನ್ನು ಬದಲಾಯಿಸಿದ್ದಾರೇ? ಎಂಬುದು ಇಂದಿನ ಪಂದ್ಯದಲ್ಲಿ ತಿಳಿದುಬರಲಿದೆ.

Exit mobile version