ದುಬೈ : ಭಾರತ ತಂಡದ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಏಷ್ಯಾ ಕಪ್‌ಗಾಗಿ ದುಬೈನಲ್ಲಿ ಸತತವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಫಾರ್ಮ್ ಕಳೆದುಕೊಂಡಿರುವ ಅವರಿಗೆ ಈ ಟೂರ್ನಿಯಲ್ಲಿ ಮತ್ತೆ ತಮ್ಮ ಬ್ಯಾಟಿಂಗ್ ವೈಭವವನ್ನು ಮರುಕಳಿಸುವ ಇರಾದೆಯಿದೆ. ಅಂತೆಯೇ ಅವರು ಸೋಶಿಯಲ್ ಮೀಡಿಯಾದಲ್ಲೂ ಬ್ಯುಸಿಯಾಗಿದ್ದಾರೆ. ಗುರುವಾರ ಅವರು ಮಾಜಿ ನಾಯಕ ಧೋನಿಯೊಂದಿಗಿನ ಜತೆಯಾಟವನ್ನು ಸ್ಮರಿಸಿ ವಿಶೇಷ ಪೋಸ್ಟ್ ಒಂದನ್ನು ಮಾಡಿದ್ದ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ.
೨೦೧೬ ಟಿ೨೦ ವಿಶ್ವ ಕಪ್ ವೇಳೆ ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಹಾಗೂ ಧೋನಿ ಅಮೋಘ ಜತೆಯಾಟವಾಗಿದ್ದರು. ಆ ಪಂದ್ಯದಲ್ಲಿ ಕೊಹ್ಲಿ ೫೧ ಎಸೆತಗಳಲ್ಲಿ ೮೨ ರನ್ ಸಿಡಿಸಿದ್ದರು. ಪಂದ್ಯದಲ್ಲಿ ಭಾರತ ೬ ವಿಕೆಟ್‌ಗಳಿಂದ ಜಯ ಸಾಧಿಸಿತ್ತು. ಆ ಚಿತ್ರವನ್ನು ವಿರಾಟ್ ಕೊಹ್ಲಿ ಶೇರ್ ಮಾಡಿಕೊಂಡಿದ್ದು, ೭+೧೮ ಎಂದು ಬರೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿಯ ಜರ್ಸಿ ನಂಬರ್ ೧೮ ಹಾಗೂ ಧೋನಿಯ ಜರ್ಸಿ ಸಂಖ್ಯೆ ೭. ಇವರಿಬ್ಬರ ಸಂಖ್ಯೆಯನ್ನು ಸೇರಿಸಿದರೆ ಒಟ್ಟು ೨೫ ಆಗುತ್ತದೆ. ಗುರುವಾರ ಆಗಸ್ಟ್ ೨೫. ಹೀಗಾಗಿ ವಿರಾಟ್ ಅದೇ ದಿನ ಪೋಸ್ಟ್ ಮಾಡಿದ್ದಾರೆ.
ಮುಂದುವರಿದ ವಿರಾಟ್ “ನಾಯಕನೊಬ್ಬನ ನಂಬಿಕಸ್ತ ಉಪನಾಯಕನಾಗಿ ಇದ್ದಿದ್ದು ನನ್ನ ವೃತ್ತಿ ಜೀವನದ ಅತ್ಯಂತ ಸಂತೋಷದಾಯಕ ದಿನಗಳಾಗಿವೆ. ನಮ್ಮಿಬ್ಬರ ಜತೆಯಾಟ ನನಗೆ ಎಂದೆಂದಿಗೂ ವಿಶೇಷ. ೭+೧೮ ಎಂದು ಬರೆದುಕೊಂಡಿದ್ದಾರೆ.
ಏಷ್ಯಾ ಕಪ್ ಆಗಸ್ಟ್ 27ರಂದು ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡ ಮುಖಾಮುಖಿಯಾಗಲಿದೆ. ಆ. 28 ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಆಗಸ್ಟ್ 31 ರಂದು ಭಾರತಕ್ಕೆ ಹಾಂಗ್ಕಾಂಗ್ ಎದುರಾಳಿ.
ಇದನ್ನೂ ಓದಿ | Asia Cup | ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ-ಬಾಬರ್ ಆಜಂ ಭೇಟಿ ಆಗಿದ್ದೇಕೆ?