ಕೋಲ್ಕತ್ತಾ: ಪ್ಲೇ ಆಫ್ ರೇಸ್ನಲ್ಲಿ ಉಳಿದುಕೊಳ್ಳಬೇಕಾದರೆ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್(KKR vs PBKS) ತಂಡ ಕೆಕೆಆರ್ ತಂಡದ ಸವಾಲು ಎದುರಿಸಲಿದೆ. ಇತ್ತಂಡಗಳ ಈ ಮುಖಾಮುಖಿ ಶುಕ್ರವಾರ ಐತಿಹಾಸಿಕ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಸಾಗಲಿದೆ.
ಈಗಾಗಲೇ ಆಡಿದ 8 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನು ಗೆದ್ದು 4 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ಪಂಜಾಬ್ಗೆ ಪ್ಲೇ ಆಫ್ ರೇಸ್ ಪ್ರವೇಶಿಸಬೇಕಾದರೆ ಇದು ಮಸ್ಟ್ ವಿನ್ ಗೇಮ್. ಸೋತರೆ ಟೂರ್ನಿಯಿಂದ ಹೊರಬೀಳುವುದು ಖಚಿತ. ಕೆಕೆಆರ್ 7 ಪಂದ್ಯಗಳಲ್ಲಿ 5 ಪಂದ್ಯ ಗೆದ್ದು 10 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಪಂದ್ಯ ಸೋತರೂ ಕೂಡ ಯಾವುದೇ ಹಿನ್ನಡೆಯಾಗದು. ಗೆದ್ದರೆ 12 ಅಂಕ ಗಳಿಸಿ ಪ್ಲೇ ಆಫ್ ಸನಿಹಕ್ಕೆ ಬಂದು ನಿಲ್ಲಲಿದೆ.
Now this is what we call 𝙋𝙤𝙨𝙩𝙘𝙖𝙧𝙙 𝙈𝙖𝙩𝙚𝙧𝙞𝙖𝙡 🤌 pic.twitter.com/szaCxArIMX
— KolkataKnightRiders (@KKRiders) April 25, 2024
ಪಂಜಾಬ್ ತಂಡದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಸ್ಟಾರ್ ಆಟಗಾರರ ಪಡೆಯೇ ಇದ್ದರೂ ಅದೃಷ್ಟ ಮಾತ್ರ ಕೈ ಹಿಡಿಯುತ್ತಿಲ್ಲ. ಗೆಲ್ಲುವ ಹಂತದವರೆಗೆ ಬಂದರೂ ಕೂಡ ಗೆಲುವು ಒಲಿಯುತ್ತಿಲ್ಲ. ಈ ಬಾರಿ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಪಂಜಾಬ್ ತಂಡದ್ದು ಇದೇ ಕಥೆ. ಹೀಗಾಗಿ ಪಂಜಾಬ್ಗೆ ಈ ಪಂದ್ಯದಲ್ಲಿ ಅದೃಷ್ಟ ಕೈ ಹಿಡಿದರೆ ಮಾತ್ರ ಗೆಲುವು ಸಾಧ್ಯ ಎನ್ನಲಡ್ಡಿಯಿಲ್ಲ.
ಸ್ಟಾರ್ಕ್ ಬಗ್ಗೆ ಚಿಂತೆ
ಕೆಕೆಆರ್ ತಂಡಕ್ಕೆ ಇರುವ ದೊಡ್ಡ ಚಿಂತೆಯೆಂದರೆ 24 ಕೋಟಿ ಒಡೆಯ ಮಿಚೆಲ್ ಸ್ಟಾರ್ ಅವರು ಈ ಮೊತ್ತಕ್ಕೆ ತಕ್ಕ ಪ್ರದರ್ಶನ ನೀಡುತ್ತಿಲ್ಲ. ಪ್ರತಿ ಪಂದ್ಯದಲ್ಲಿಯೂ ದುಬಾರಿಯಾಗುತ್ತಿದ್ದಾರೆ. ಅನಾನುಭವಿ ಬ್ಯಾಟರ್ಗಳು ಕೂಡ ಇವರ ಎಸೆತಗಳಿಗೆ ಸಿಕ್ಸರ್, ಬೌಂಡರಿ ಬಾರಿಸುತ್ತಿದ್ದಾರೆ. ಇದಕ್ಕೆ ಉತ್ತಮ ನಿದರ್ಶನವೆಂದರೆ, ಕಳೆದ ಆರ್ಸಿಬಿ ವಿರುದ್ಧದ ಪಂದ್ಯ. ಸ್ಪಿನ್ ಬೌಲರ್ ಕರ್ಣ್ ಶರ್ಮ ಅವರು ಸತತವಾಗಿ ಸಿಕ್ಸರ್ ಮತ್ತು ಬೌಂಡರಿ ಚಚ್ಚಿದ್ದರು. ಸ್ಟಾಕ್ ಬೌಲಿಂಗ್ ಲಯಕ್ಕೆ ಮರಳಿದರೆ ತಂಡಕ್ಕೆ ಯಾವುದೇ ಚಿಂತೆಯಿಲ್ಲ.
#KnightWrap 24.04.2024 👉 Our Knights with Punjab de munde! 💜♥️ pic.twitter.com/F9cl5iCPvu
— KolkataKnightRiders (@KKRiders) April 24, 2024
ಕೆಕೆಆರ್ ಬ್ಯಾಟಿಂಗ್ ಬಲಿಷ್ಠ
ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಕೊರತೆಯಿಲ್ಲ. ಫಿಲ್ ಸಾಲ್ಟ್, ಸುನೀಲ್ ನರೈನ್, ರಿಂಕು ಸಿಂಗ್, ಆ್ಯಂಡ್ರೆ ರೆಸಲ್, ನಾಯಕ ಶ್ರೇಯಸ್ ಅಯ್ಯರ್ ಮತ್ತು ಆಂಗ್ಕ್ರಿಶ್ ರಘುವಂಶಿ ಉತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಯಾವುದೇ ಹಂತದಲ್ಲಿಯೂ ಸಿಡಿದು ನಿಂತು ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮರ್ಥ್ಯ ಇವರಲ್ಲಿದೆ. ಗಾಯದಿಂದ ಚೇತರಿಕೆ ಕಂಡು ತಂಡ ಸೇರಿರುವ ನಿತೇಶ್ ರಾಣಾ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಈ ಬಾರಿಯ ಟೂರ್ನಿಯಲ್ಲಿ ಮೊದಲ ಪಂದ್ಯ ಆಡುವ ನಿರೀಕ್ಷೆಯಲ್ಲಿದ್ದಾರೆ.
ಪಂಜಾಬ್: ಸ್ಯಾಮ್ ಕರನ್ (ನಾಯಕ), ಪ್ರಭ್‌ಸಿಮ್ರಾನ್ ಸಿಂಗ್, ರಿಲೀ ರೋಸೊವ್, ಲಿಯಾಮ್ ಲಿವಿಂಗ್‌ಸ್ಟೋನ್, ಶಶಾಂಕ್ ಸಿಂಗ್, ಜಿತೇಶ್ ಶರ್ಮಾ (ವಿಕೆ), ಅಶುತೋಷ್ ಶರ್ಮಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ಅರ್ಶ್‌ದೀಪ್ ಸಿಂಗ್.
ಕೆಕೆಆರ್: ಫಿಲಿಪ್ ಸಾಲ್ಟ್, ಸುನಿಲ್ ನರೈನ್, ಆಂಗ್ಕ್ರಿಶ್ ರಘುವಂಶಿ, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ.