Site icon Vistara News

KL Rahul | ಟಿ20 ವಿಶ್ವ ಕಪ್‌ ಬಳಿಕ ಕೆ.ಎಲ್‌. ರಾಹುಲ್‌ ಮದುವೆ ?

rahul

ಮುಂಬಯಿ: ಐಸಿಸಿ ಟಿ20 ವಿಶ್ವ ಕಪ್ ಬಳಿಕ ಟೀಮ್ ಇಂಡಿಯಾದ ಉಪನಾಯಕ ಕೆ.ಎಲ್. ರಾಹುಲ್ ಅವರು ಬಾಲಿವುಡ್ ನಟಿ‌ ಅಥಿಯಾ ಶೆಟ್ಟಿ ಅವರನ್ನು ಮದುವೆ ಆಗಲಿದ್ದಾರೆ ಎಂದು ವರದಿಯಾಗಿದೆ. ಇದೇ ಕಾರಣಕ್ಕೆ ರಾಹುಲ್‌ ಮುಂಬರುವ ನ್ಯೂಜಿಲೆಂಡ್‌ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ತಿಳಿದು ಬಂದಿದೆ.

ಕೆ.ಎಲ್. ರಾಹುಲ್ ಮತ್ತು ಅಥಿಯಾ ಬಹಳ ಕಾಲದಿಂದ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ರಾಹುಲ್ ಬಿಡುವಿಲ್ಲದ ಪ್ರವಾಸದಿಂದ ಮದುವೆಯ ದಿನಾಂಕವನ್ನು ನಿಗದಿಪಡಿಸಲು ಸಾಧ್ಯವಾಗಿರಲಿಲ್ಲ. ಇದೀಗ ಟಿ 20 ವಿಶ್ವ ಕಪ್ ಬಳಿಕ ರಾಹುಲ್ ತಮ್ಮ ದೀರ್ಘಕಾಲದ ಗೆಳತಿಯನ್ನು ಮದುವೆಯಾಗಲಿದ್ದಾರೆ ಮತ್ತು ಮದುವೆ ಮಹಾರಾಷ್ಟ್ರದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸುಳಿವು ನೀಡಿದ ಬಿಸಿಸಿಐ ಅಧಿಕಾರಿ

ಕೆ.ಎಲ್‌. ರಾಹುಲ್ ಯಾವುದೇ ಗಾಯದ ಕಾರಣದಿಂದ ನ್ಯೂಜಿಲೆಂಡ್‌ ವಿರುದ್ಧದ ಸರಣಿಗೆ ವಿಶ್ರಾಂತಿ ಪಡೆದಿಲ್ಲ. ಅವರಿಗೆ ಕೆಲವು ಕೌಟುಂಬಿಕ ಬದ್ಧತೆಗಳಿವೆ. ಅವರು ಮದುವೆಯಾಗುತ್ತಿದ್ದಾರೆಯೇ ಅಥವಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆಯೇ ಎಂಬುದು ನನಗೆ ತಿಳಿದಿಲ್ಲ. ಆದರೆ, ಅವರಿಗೆ ಕೆಲವು ವೈಯಕ್ತಿಕ ಬದ್ಧತೆ ಇದೆ ಎಂದು ಹೇಳಬಲ್ಲೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದೀಗ ಬಿಸಿಸಿಐ ಅಧಿಕಾರಿಯ ಈ ಹೇಳಿಕೆ ರಾಹುಲ್‌ ಮದುವೆಯ ಸುಳಿವಿನಂತಿದೆ. ಆದರೆ ರಾಹುಲ್‌ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಇದನ್ನೂ ಓದಿ | Virat Kohli | ಕಿಂಗ್​ ಕೊಹ್ಲಿಗೆ ಹುಟ್ಟುಹಬ್ಬದ ಸಂಭ್ರಮ; ಹಲವರಿಂದ ಶುಭಾಶಯ

Exit mobile version