Site icon Vistara News

New Year 2023 | ದುಬೈನಲ್ಲಿ ನ್ಯೂ ಇಯರ್​ ಪಾರ್ಟಿ ಮಾಡಿದ ಕೆ ಎಲ್​ ರಾಹುಲ್, ಅತಿಯಾ ಜೋಡಿ

Kl rahul

ಬೆಂಗಳೂರು: ಟೀಮ್​ ಇಂಡಿಯಾದ ಆಟಗಾರ ಕೆ. ಎಲ್ ರಾಹುಲ್ ಅವರು ಜನವರಿ 3ರಿಂದ ನಡೆಯಲಿರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಅವಕಾಶ ಪಡೆದಿಲ್ಲ. ಅವರು ಏಕ ದಿನ ಪಂದ್ಯಗಳ ಸರಣಿಯಲ್ಲಿ ಬ್ಯಾಕ್​ಅಪ್​ ವಿಕೆಟ್​ಕೀಪರ್​ ಆಗಿ ಅವಕಾಶ ಪಡೆದುಕೊಂಡಿದ್ದಾರೆ. ಈಗಾಗಿ ಅವರು ಭಾವಿ ಪತ್ನಿ ಅತಿಯಾ ಶೆಟ್ಟಿ ಜತೆ ಹೊಸ ವರ್ಷದ ಸಂಭ್ರಮಾಚರಣೆಗಾಗಿ ದುಬೈಗೆ ಹೋಗಿದ್ದಾರೆ.

ಅತಿಯಾ ಶೆಟ್ಟಿ ಹಾಗೂ ರಾಹುಲ್ ದುಬೈನಲ್ಲಿ ಪಾರ್ಟಿ ಮಾಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಂಡಿವೆ. ರಾಹುಲ್ ಅವರು ಚಿತ್ರಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಅವುಗಳಿಗೆ ಕೆ. ಎಲ್​ ರಾಹುಲ್​ ಅವರ ಅಭಿಮಾನಿಗಳು ಅಭಿನಂದನೆ ವ್ಯಕ್ತಪಡಿಸಿದ್ದಾರೆ.

ಅತಿಯಾ ಶೆಟ್ಟಿ ಹಾಗೂ ಕೆ ಎಲ್​ ರಾಹುಲ್​ ಜೋಡಿ ಈ ಬೇಸಿಗೆಯಲ್ಲಿ ವಿವಾಹವಾಗಲಿದ್ದಾರೆ ಎಂಬುದಾಗಿ ವರದಿಯಾಗಿದೆ. ಈ ಜೋಡಿ ಕಳೆದ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದು, ನಿಶ್ಚಿತಾರ್ಥವನ್ನೂ ಮಾಡಿಕೊಂಡಿದೆ. ಅವರಿಬ್ಬರ ಮದುವೆಗೆ ಕೊರೊನಾ ಸಮಸ್ಯೆ ಸೇರಿದಂತೆ ಹಲವು ಅಡಚಣೆಗಳು ಉಂಟಾಗಿವೆ. ಹೀಗಾಗಿ ಕೆಲವೇ ತಿಂಗಳಲ್ಲಿ ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಒದಿ | Athiya Shetty | ಶೂಟಿಂಗ್‌ ವೇಳೆ ಒಟ್ಟಿಗೆ ಕಾಣಿಸಿಕೊಂಡ ನಟಿ ಅಥಿಯಾ ಶೆಟ್ಟಿ- ಕ್ರಿಕೆಟಿಗ ಕೆ ಎಲ್‌ ರಾಹುಲ್‌

Exit mobile version