Site icon Vistara News

KL Rahul Athiya Shetty: ರಾಹುಲ್-ಅಥಿಯಾ ಜೋಡಿಗೆ ಧೋನಿ-ಕೊಹ್ಲಿ ಕೊಟ್ಟ ಗಿಫ್ಟ್ ಏನು? ಆಡಿ ಕಾರು ಕೊಟ್ಟಿದ್ಯಾರು?

KL Rahul Athiya Shetty

ಮುಂಬಯಿ: ಭಾರತೀಯ ಕ್ರಿಕೆಟ್‌ ತಂಡದ ಆಟಗಾರ ಕೆ.ಎಲ್​. ರಾಹುಲ್(KL Rahul Athiya Shetty)​ ಮತ್ತು ಬಾಲಿವುಡ್‌ ತಾರೆ ಅಥಿಯಾ ಶೆಟ್ಟಿ(Athiya kl rahul marriage) ಜನವರಿ 23ರಂದು ಸಪ್ತಪದಿ ತುಳಿದಿದ್ದಾರೆ.​ ಇದೀಗ ಈ ಜೋಡಿಗೆ ವಿರಾಟ್​ ಕೊಹ್ಲಿ ಮತ್ತು ಎಂ.ಎಸ್.ಧೋನಿ ದುಬಾರಿ ಬೆಲೆಯ ಉಡುಗೊರೆ ನೀಡಿದ್ದಾರೆ ಎಂದು ವರದಿಯಾಗಿದೆ.

ಜನವರಿ 23ರ ಸೋಮವಾರದಂದು ಖಂಡಾಲಾದಲ್ಲಿರುವ ನಟ ಸುನೀಲ್ ಶೆಟ್ಟಿ(suniel Shetty) ಅವರ ಫಾರ್ಮ್​ ಹೌಸನಲ್ಲಿ ಈ ಇಬ್ಬರ ಮದುವೆ(athiya Shetty photos) ಅದ್ಧೂರಿಯಾಗಿ ನಡೆದಿದೆ. ಖಾಸಗಿ ಸಮಾರಂಭದಲ್ಲಿ ನಡೆದ ಈ ಜೋಡಿಯ ವಿವಾಹ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಸೇರಿದಂತೆ ಯಾವುದೇ ಟೀಮ್​ ಇಂಡಿಯಾ ಆಟಗಾರರು ಭಾಗಿಯಾರಲಿಲ್ಲ.

ವರದಿಗಳ ಪ್ರಕಾರ ಕೊಹ್ಲಿ ಅವರು ರಾಹುಲ್ ಮತ್ತು ಅಥಿಯಾ ಜೋಡಿಗೆ 2.17 ಕೋಟಿ ರೂ. ಮೌಲ್ಯದ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಂದೆಡೆ ಟೀಮ್​ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ರಾಹುಲ್‌ಗೆ ಕವಾಸಕಿ ನಿಂಜಾ ಬೈಕನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ. ಈ ಬೈಕ್‌ನ ಮಾರುಕಟ್ಟೆ ಬೆಲೆ ಸುಮಾರು 80 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಬಾಲಿವುಡ್​ನಿಂದಲೂ ದುಬಾರಿ ಉಡುಗೊರೆ

ಬಾಲಿವುಡ್​ ನಟ ಸಲ್ಮಾನ್​ ಖಾನ್​ ಅವರು ರಾಹುಲ್​ ಮತ್ತು ಅಥಿಯಾ ಜೋಡಿಗೆ 1.5 ಕೋಟಿ. ರೂ. ಮೌಲ್ಯದ ಆಡಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ. ಇದಲ್ಲದೆ ಸುನೀಲ್​ ಶೆಟ್ಟಿ ಅವರ ಗೆಳೆಯರಾದ ಕೆಲ ಬಾಲಿವುಡ್​ ನಟ, ನಟಿಯರೂ ಕೂಡ ದುಬಾರಿ ಬೆಲೆಯ ಉಡುಗೊರೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಂದೆಡೆ ಮಗಳು ಅಥಿಯಾ ಮತ್ತು ಅಳಿಯ ರಾಹುಲ್​ಗೆ ಸುನೀಲ್​ ಶೆಟ್ಟಿ ಮುಂಬೈಯಲ್ಲಿ 50 ಕೋಟಿ ರೂ. ಮೌಲ್ಯದ ಐಶಾರಾಮಿ ಅಪಾರ್ಟ್‌ಮೆಂಟ್‌ ಗಿಫ್ಟ್​ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ | Athiya Shetty KL Rahul Wedding: ಹಸೆಮಣೆ ಏರುವ ಮೊದಲು ರೋಹನ್ ಶ್ರೇಷ್ಠ ಕ್ಯಾಮೆರಾ ಕಣ್ಣಿಗೆ ಅಥಿಯಾ ಸೆರೆಯಾದದ್ದು ಹೀಗೆ!

Exit mobile version