Site icon Vistara News

Athiya Shetty KL Rahul wedding: ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೆ.ಎಲ್. ರಾಹುಲ್- ಅಥಿಯಾ ಶೆಟ್ಟಿ!

Athiya Shetty KL Rahul wedding

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ಕೆ.ಎಲ್​. ರಾಹುಲ್​(Athiya kl rahul marriage) ಮತ್ತು ಬಾಲಿವುಡ್​ ನಟಿ ಅಥಿಯಾ ಶೆಟ್ಟಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ ಎಂದು ತಿಳಿದು ಬಂದಿದೆ. ಜನವರಿ 23ರ ಸೋಮವಾರದಂದು ಖಂಡಾಲಾದಲ್ಲಿರುವ ನಟ ಸುನೀಲ್ ಶೆಟ್ಟಿ (Sunil Shetty) ಅವರ ಫಾರ್ಮ್​ ಹೌಸ್​ನಲ್ಲಿ ಈ ಇಬ್ಬರ ಮದುವೆ ಅದ್ಧೂರಿಯಾಗಿ ನಡೆದಿದೆ ಎಂದು ತಿಳಿದು ಬಂದಿದೆ. ಇದಕ್ಕೆ ಪೂರಕವಾಗಿ ಸುನೀಲ್​ ಶೆಟ್ಟಿ(sunil shetty) ಮತ್ತು ಅವರ ಮಗ ಅಹಾನ್‌ ಶೆಟ್ಟಿ ಪಾಪರಾಜಿಗಳಿಗೆ ಸಿಹಿ ಹಂಚಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸಂಜೆ 4.15 ರ ಸುಮಾರಿಗೆ ಅಥಿಯಾ ಮತ್ತು ಕೆಎಲ್ ರಾಹುಲ್(Athiya Shetty KL Rahul wedding) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ವಿಶೇಷ ಸಂದರ್ಭದಲ್ಲಿ ಉಭಯ ಕುಟುಂಬಗಳ ಅನೇಕ ಆಪ್ತರು ಉಪಸ್ಥಿತರಿದ್ದರು ಎಂದು ತಿಳಿದುಬಂದಿದೆ. ರಾಹುಲ್​ ಮತ್ತು ಅಥಿಯಾ ಶೆಟ್ಟಿಯ ಮದುವೆಯ ಫೋಟೊಗಳು ಇನ್ನಷ್ಟೇ ಪ್ರಕಟಿಸಬೇಕಿದೆ.

ನಟರಾದ ಅಜಯ್ ದೇವಗನ್, ಸಂಜಯ್​ ದತ್​ ಮತ್ತು ಕ್ರಿಕೆಟಿಗ ಇಶಾಂತ್ ಶರ್ಮಾ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದು ನವ ದಂಪತಿಗಳಿಗೆ(Athiya Shetty kl Rahul shaadi) ಶುಭ ಹಾರೈಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ | Athiya Shetty KL Rahul wedding: ಬೆಂಗಳೂರಿನಲ್ಲಿಯೂ ನಡೆಯಲಿದೆ ರಾಹುಲ್-ಅಥಿಯಾ ಜೋಡಿಯ ಆರತಕ್ಷತೆ?

Exit mobile version