Site icon Vistara News

KL Rahul | ಮತ್ತೆ ಬ್ಯಾಟಿಂಗ್​ ವೈಫಲ್ಯ; ಸಿಕ್ಕಾಪಟ್ಟೆ ಟ್ರೋಲ್​ ಆದ ಕೆ.ಎಲ್​. ರಾಹುಲ್

kl

ಪರ್ತ್​: ಅಭ್ಯಾಸ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶಿಸಿ ವಿಶ್ವಾಸ ಮೂಡಿಸಿದ್ದ ಕನ್ನಡಿಗ ಕೆ.ಎಲ್​. ರಾಹುಲ್​ ಬಳಿಕ ಟಿ20 ವಿಶ್ವ ಕಪ್​ ಸೂಪರ್​-12 ಪಂದ್ಯದಲ್ಲಿ ಇದೇ ಪ್ರದರ್ಶನ ತೋರುವಲ್ಲಿ ಎಡವಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದಾರೆ.

ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್​ ವಿರುದ್ಧದ ಪಂದ್ಯದಲ್ಲಿ ರನ್​ ಗಳಿಸಲು ಪರದಾಟಿದ ವೇಳೆಯೇ ರಾಹುಲ್​ ಅವರನ್ನು ತಂಡದಿಂದ ಕೈ ಬಿಡಬೇಕು ಎಂಬ ಕೂಗು ಆರಂಭವಾಗಿತ್ತು. ಆದರೆ ಟೀಮ್​ ಮ್ಯಾನೇಜ್​ಮೆಂಟ್​ ರಾಹುಲ್​ ಮೇಲೆ ಭರವಸೆ ಇರಿಸಿ ದಕ್ಷಿಣ ಆಫ್ರಿಕಾ ವಿರುದ್ಧ ಮತ್ತೊಂದು ಅವಕಾಶ ನೀಡಿತ್ತು. ಜತೆಗೆ ಬ್ಯಾಟಿಂಗ್​ ಕೋಚ್​ ವಿಕ್ರಮ್​ ರಾಥೋಡ್​ ಕೂಡ ರಾಹುಲ್​ ಬೆನ್ನಿಗೆ ನಿಂತಿದ್ದರು. ಆದರೆ ರಾಹುಲ್​ ಮತ್ತೆ ಎಡವಿ 14 ಎಸೆತಗಳಿಂದ ಕೇವಲ 9 ರನ್​ ಗಳಿಸಿ ಲುಂಗಿ ಎನ್​ಗಿಡಿಗೆ ವಿಕೆಟ್​ ಒಪ್ಪಿಸಿದರು. ರಾಹುಲ್​ ವಿಕೆಟ್​ ಬೀಳುತ್ತಿದ್ದಂತೆ ಇತ್ತ ಸಾಮಾಜಿಕ ಜಾಲತಾಣದಲ್ಲಿ ಸಿಟ್ಟಿಗೆದ್ದ ಟೀಮ್​ ಇಂಡಿಯಾ ಅಭಿಮಾನಿಗಳು ಟ್ರೋಲ್​ ಮಾಡಲು ಆರಂಭಿಸಿದ್ದಾರೆ.

ರಾಹುಲ್​ ಬ್ಯಾಟಿಂಗ್​ ವೈಫಲ್ಯಕ್ಕೆ ಸತಃ ಟೀಮ್​ ಇಂಡಿಯಾ ಮಾಜಿ ಆಟಗಾರ ಸುನೀಲ್​ ಗವಾಸ್ಕರ್​ ಕೂಡ ಟ್ರೋಲ್​ ಮಾಡಿದ್ದಾರೆ. ಅದರಂತೆ ಹಿಂದಿ ಸಿನಿಮಾದ ಒಂದು ದೃಶ್ಯವನ್ನು ಹಂಚಿಕೊಳ್ಳುವ ಮೂಲಕ ರಾಹುಲ್​ ಪ್ರದರ್ಶನ ಕಂಡ ಸುನೀಲ್​ ಶೆಟ್ಟಿ ಈ ರೀತಿ ವರ್ತಿಸಬಹುದು ಎಂದು ಕಮೆಂಟ್​ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ ಬಿಸಿಸಿಐ ರಾಹುಲ್​ ಅವರನ್ನು ಜಿಂಬಾಬ್ವೆ ತಂಡಕ್ಕೆ ಮಾರಾಟ ಮಾಡಿ ಸಿಕಂದರ್​ ರಾಜಾ ಅವರನ್ನು ಭಾರತ ತಂಡಕ್ಕೆ ಸೇರಿಸಿ ಎಂದು ಟ್ವೀಟ್​ ಮಾಡಿದ್ದಾರೆ. ಇನ್ನೂ ಕೆಲವರು ರಾಹುಲ್​ಗಿಂತ ಉತ್ತಮವಾಗಿ ನನ್ನ ಗೆಳೆಯ ಬಾಟಲ್​ ಓಪನ್​ ಮಾಡುತ್ತಾನೆ ಎಂದು ಹಾಸ್ಯ ಮಾಡಿದ್ದಾನೆ. ಹೀಗೆ ಹಲವಾರು ಹಾಸ್ಯಮಯ ಟ್ವೀಟ್​ ಮೂಲಕ ರಾಹುಲ್​ ಬ್ಯಾಟಿಂಗ್​ ವೈಫಲ್ಯವನ್ನು ಅಪಹಾಸ್ಯ ಮಾಡಿದ್ದಾರೆ.

ಇದನ್ನೂ ಓದಿ | T20 World Cup | ನೆದರ್ಲೆಂಡ್ಸ್​ ವಿರುದ್ಧ 6 ವಿಕೆಟ್​ ಗೆಲುವು; ಅಂತೂ ಇಂತೂ ಖಾತೆ ತರೆದ ಪಾಕ್​

Exit mobile version