Site icon Vistara News

KL Rahul: ಐಪಿಎಲ್​ಗೆ ಕೆ.ಎಲ್​ ರಾಹುಲ್ ಫಿಟ್; ನಾಯಕನಾಗಿ ಕಣಕ್ಕೆ

KL Rahul Fit

ಬೆಂಗಳೂರು: ಮಾರ್ಚ್​ 22ರಿಂದ ಆರಂಭಗೊಳ್ಳಲಿರುವ 17ನೇ ಆವೃತ್ತಿಯ ಐಪಿಎಲ್(IPL 2024)​ ಟೂರ್ನಿಗಾಗಿ ಎಲ್ಲ ಫ್ರಾಂಚೈಸಿಗಳ ಆಟಗಾರರು ಬ್ಯಾಟಿಂಗ್​ ಮತ್ತು ಬೌಲಿಂಗ್​ ಅಭ್ಯಾಸ ಆರಂಭಿಸಿದ್ದಾರೆ. ಗಾಯಗೊಂಡು ಚೇತರಿಕೆ ಕಂಡಿರುವ ಕೆಲವು ಆಟಗಾರರು ಇನ್ನಷ್ಟೇ ಫಿಟ್​ನೆಸ್​ ಕ್ಲೀಯರೆನ್ಸ್​ ಪಡೆಯಬೇಕಿದೆ. ಇದೀಗ ಕೆ.ಎಲ್​ ರಾಹುಲ್(KL Rahul) ಫಿಟ್​ ಆಗಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ.

ಲಕ್ನೋ ಸೂಪರ್ ಜೈಂಟ್ಸ್‌(LSG) ತಂಡದ ನಾಯಕ ಕೆ.ಎಲ್ ರಾಹುಲ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ಪುನರಾಗಮ ಮಾಡುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ರಾಹುಲ್ ಗಾಯಗೊಂಡು ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿದ್ದರು. ಬಳಿಕ ಎನ್​ಸಿಎ ಸೇರಿದ್ದರು.

2023 ರ ವಿಶ್ವಕಪ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮತ್ತು ಕೀಪಿಂಗ್​ ನಡೆಸಿದ್ದ ರಾಹುಲ್​ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದರು. ಆದರೆ 2024ರ ಆರಂಭದಲ್ಲಿಯೇ ಗಾಯಕ್ಕೀಡಾಗಿ ಹಲವು ಪಂದ್ಯಗಳನ್ನು ತಪ್ಪಿಸಿಕೊಂಡರು. ಇತ್ತೀಚೆಗೆ, ನಿಕೋಲಸ್ ಪೂರನ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್‌ನ ಉಪನಾಯಕನಾಗಿ ನೇಮಕ ಮಾಡಲಾಗಿತ್ತು. ಹೀಗಾಗಿ ರಾಹುಲ್​ ಐಪಿಎಲ್​ ಆಡುವುದು ಅನುಮಾನ ಎನ್ನಲಾಗಿತ್ತು. ಇದೀಗ ಲಭ್ಯವಾದ ಮಾಹಿತಿ ಪ್ರಕಾರ ಅವರು ಫಿಟ್​ ಆಗಿದ್ದು ಸಂಪೂರ್ಣವಾಗಿ ಐಪಿಎಲ್​ ಆಡಲಿದ್ದಾರೆ ಎನ್ನಲಾಗಿದೆ.

ವಿಶ್ವಕಪ್​ನಲ್ಲಿ ಅವಕಾಶ?


ಮುಂಬರುವ ಟಿ20 ವಿಶ್ವಕಪ್‌ಗೆ ಪ್ರತಿ ತಂಡವು ತಯಾರಿ ನಡೆಸುತ್ತಿದೆ. ರಿಷಭ್​ ಪಂತ್ ಅವರ ಫಿಟ್‌ನೆಸ್ ಬಗ್ಗೆ ಭಾರತಕ್ಕೆ ಖಚಿತೆ ಇಲ್ಲ. ಬ್ಯಾಟಿಂಗ್​ ನಡೆಸಲು ಫಿಟ್​ ಆಗಿದ್ದರೂ ಕೂಡ ಕೀಪಿಂಗ್​ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಲಭಿಸಿಲ್ಲ. ಅಲ್ಲದೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಕೂಡ ಪಂತ್​ ಕೀಪಿಂಗ್​ ನಡೆಸಲು ಫಿಟ್​ ಆಗಿದ್ದರೆ ಮಾತ್ರ ವಿಶ್ವಕಪ್ ಆಡಲಿದ್ದಾರೆ ಎಂದು ಹೇಳಿದ್ದಾರೆ. ಒಂದೊಮ್ಮೆ ಪಂತ್​ ಕೀಪಿಂಗ್​ ನಡೆಸಲು ಸಾಧ್ಯವಾಗದಿದ್ದರೆ ಕೆ.ಎಲ್​ ರಾಹುಲ್​ ಅವರಿಗೆ ಕೀಪಿಂಗ್ ಹೊಣೆ ಸಿಗಲಿದೆ. ಈಗಾಗಲೇ ರಾಹುಲ್​ ಏಕದಿನ ವಿಶ್ವಕಪ್​ನಲ್ಲಿ ಕೀಪಿಂಗ್​ ಮಾಡಿ ಯಶಸ್ವಿಯಾಗಿದ್ದಾರೆ. ಬಿಸಿಸಿಐನ ಕೇಂದ್ರೀಯ ಗುತ್ತಿಗೆಯಿಂದ ವಜಾಗೊಂಡಿರುವ ಇಶಾನ್ ಕಿಶನ್ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದಿರಬಹುದು. ಇದು ಕೆಎಲ್ ರಾಹುಲ್‌ಗೆ ಬಲ ನೀಡುತ್ತದೆ.

ಇದನ್ನೂ ಓದಿ KL Rahul: ಜಿಮ್​ನಲ್ಲಿ ವರ್ಕೌಟ್ ಆರಂಭಿಸಿದ ಲಕ್ನೋ ನಾಯಕ ರಾಹುಲ್; ಐಪಿಎಲ್​ ಆಡುವುದು ಖಚಿತ

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​


ರಾಹುಲ್​ ಅವರು ತಮ್ಮ ಆರಂಭಿಕ ಬ್ಯಾಟಿಂಗ್​ ಕ್ರಮಾಂಕವನ್ನು ಏಷ್ಯಾ ಕಪ್​ ವೇಳೆ ಬದಲಾವಣೆ ಮಾಡಿ ಮಧ್ಯಮ ಕ್ರಮಾಂಕದಲ್ಲಿ ಆಡಲು ಆರಂಭಿಸಿದ್ದರು. ಏಕದಿನ ವಿಶ್ವಕಪ್​ನಲ್ಲಿಯೂ ಇದೇ ಸ್ಥಾನದಲ್ಲಿ ಬ್ಯಾಟಿಂಗ್​ ನಡೆಸಿದ್ದರು. ವರದಿಗಳ ಪ್ರಕಾರ, ಐಪಿಎಲ್​ನಲ್ಲಿಯೂ ರಾಹುಲ್​ ಎಲ್‌ಎಸ್‌ಜಿಯ ಬ್ಯಾಟಿಂಗ್‌ ಬಲವನ್ನು ಗಟ್ಟಿಗೊಳಿಸುವ ಸಲುವಾಗಿ ಮಧ್ಯಮ ಕ್ರಮಾಂಕದಲ್ಲಿಯೇ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ. ಲಕ್ನೋ(lucknow super giants) ತಂಡ ತನ್ನ ಮೊದಲ ಪಂದ್ಯವನ್ನು ಮಾರ್ಚ್​ 24ರಂದು ರಾಜಸ್ಥಾನ್​ ವಿರುದ್ಧ ಆಡಲಿದೆ.

Exit mobile version