ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಸೂಪರ್ 4 ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಿದ್ದ ನಡುವೆ ವಿಕೆಟ್ ಕೀಪರ್- ಬ್ಯಾಟರ್ ಕೆಎಲ್ ರಾಹುಲ್ ಮಂಗಳವಾರ ಜೋರಾಗಿ ಮಿಂಚಿದರು. ಭಾರತ ತಂಡದ ಗೆಲುವಿನ ರೂವಾರಿಗಳಲ್ಲಿ ಒಬ್ಬರಾಗಿದ್ದರು. ದೀರ್ಘಕಾಲದ ಗಾಯದ ನಂತರ ತಂಡಕ್ಕೆ ಮರಳಿದ್ದ ರಾಹುಲ್ ಶತಕವನ್ನು ಬಾರಿಸಿದರು. ಅಜೇಯ 111 ರನ್ ಬಾರಿಸಿದ ಅವರು ವಿರಾಟ್ ಕೊಹ್ಲಿಯ ಜತೆಗೆ ದಾಖಲೆಯ 233 ರನ್ಗಳನ್ನು ಬಾರಿಸಿದರು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರಲ್ಲಿ ಗಂಭೀರ ಗಾಯದಿಂದ ಬಳಲಿದ್ದ 31 ವರ್ಷದ ರಾಹುಲ್ ಸುಮಾರು ನಾಲ್ಕು ತಿಂಗಳ ಕಾಲ ತಂಡದಿಂದ ಹೊರಗುಳಿದಿದ್ದರು. ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಏಷ್ಯಾ ಕಪ್ನ ಗುಂಪು ಹಂತಕ್ಕೆ ಮರಳುವುದಕ್ಕೂ ಆಗಲಿಲ್ಲ. ಗಾಯದಿಂದ ಚೇತರಿಸಿಕೊಂಡ ನಂತರ ಮೊದಲ ಪಂದ್ಯವನ್ನು ಆಡಿದ ರಾಹುಲ್, ಮಾಜಿ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಸೇರಿಕೊಂಡು ಟೀಮ್ ಇಂಡಿಯಾವನ್ನು ಗೆಲುವಿನೆಡೆಗೆ ಮುನ್ನಡೆಸಿದ್ದರು.
ಏಷ್ಯಾಕಪ್ನಲ್ಲಿ ಇತಿಹಾಸ ಬರೆದ ರಾಹುಲ್
ಭಾರತದ ಮಾಜಿ ಉಪನಾಯಕ ಏಷ್ಯಾ ಕಪ್ನಲ್ಲಿ ಪಾಕಿಸ್ತಾನ ವಿರುದ್ಧ 100 ಎಸೆತಗಳಲ್ಲಿ ಶತಕ ಬಾರಿಸಿ ಇತಿಹಾಸವನ್ನು ಬರೆದಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 6ನೇ ಶತಕ ಬಾರಿಸಿರುವ ರಾಹುಲ್, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಅವರ ಸಾಲಿಗೆ ಸೇರಿದ್ದಾರೆ. ರೋಹಿತ್, ಕೊಹ್ಲಿ, ಸೆಹ್ವಾಗ್, ಧವನ್ ಮತ್ತು ರಾಹುಲ್ ಮಾತ್ರ ಏಷ್ಯಾ ಕಪ್ನ 50 ಓವರ್ಗಳ ಆವೃತ್ತಿಯಲ್ಲಿ ಪಾಕಿಸ್ತಾನ ವಿರುದ್ಧ ಶತಕ ಗಳಿಸಿದ್ದಾರೆ. ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಏಷ್ಯಾಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಅತಿ ಹೆಚ್ಚು ಏಕದಿನ ಶತಕಗಳನ್ನು (2) ಗಳಿಸಿದ್ದಾರೆ.
ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 2 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿದ್ದು, ರಾಹುಲ್ ಮತ್ತು ಕೊಹ್ಲಿ ಶತಕಗಳ ನೆರವಿನಿಂದ ಭಾರತ 2 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿತು. ಭಾರತದ ನಂ.3 ಮತ್ತು ನಂ.4 ಬ್ಯಾಟರ್ಗಳೂ ಏಕದಿನ ಪಂದ್ಯದಲ್ಲಿ ಶತಕ ಬಾರಿಸುತ್ತಿರುವುದು ಇದು ಮೂರನೇ ಬಾರಿ. ರಾಹುಲ್ ಮತ್ತು ಕೊಹ್ಲಿ ಏಷ್ಯಾಕಪ್ನ ಏಕದಿನ ಆವೃತ್ತಿಯಲ್ಲಿ ಅತ್ಯಧಿಕ ಜೊತೆಯಾಟವನ್ನು ದಾಖಲಿಸಿದ್ದಾರೆ. ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಜೋಡಿ ಅಜೇಯ 233 ರನ್ ಗಳಿಇತು.