Site icon Vistara News

KL Rahul | ಕೆ.ಎಲ್​. ರಾಹುಲ್​ ಸತತ ಬ್ಯಾಟಿಂಗ್​ ವೈಫಲ್ಯಕ್ಕೆ ಕಾರಣ ತಿಳಿಸಿದ ವಾಸಿಂ ಜಾಫರ್​

kl

ಮುಂಬಯಿ: ಟೀಮ್​ ಇಂಡಿಯಾ ಆರಂಭಿಕ ಆಟಗಾರ ಕೆ.ಎಲ್​. ರಾಹುಲ್(KL Rahul)​ ಅವರ ಸತತ ಬ್ಯಾಟಿಂಗ್​ ವೈಫಲ್ಯಕ್ಕೆ ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ ವಾಸಿಂ ಜಾಫರ್ ಕಾರಣ​ ತಿಳಿದ್ದಾರೆ. ಭಾರತ ಆಡಿದ ಟಿ20 ವಿಶ್ವ ಕಪ್​ನ ಸೂಪರ್​-12ರ ಎರಡು ಪಂದ್ಯದಲ್ಲಿಯೂ ರಾಹುಲ್​ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದ್ದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿಯೂ ಭಾರಿ ಚರ್ಚೆಗಳು ಆರಂಭವಾಗಿದೆ.

ಇದೇ ವಿಚಾರವಾಗಿ ಮಾತನಾಡಿದ ವಾಸಿಂ ಜಾಫರ್​, “ಕೆ.ಎಲ್. ರಾಹುಲ್ ಅವರ ಅಂಕಿಅಂಶಗಳನ್ನು ಸೂಚಿಸುವುದಕ್ಕಿಂತ ಉತ್ತಮ ಆಟಗಾರ ಎಂದು ನಾನು ಭಾವಿಸುತ್ತೇನೆ. ನಮ್ಮ ಹಿಂದಿನ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಅವರು ಉತ್ತಮ ಫಾರ್ಮ್‌ನಲ್ಲಿದ್ದರು ಮತ್ತು ನಂತರ ಅವರು ಗಾಯಗೊಂಡರು. ಚೇತರಿಕೆ ಬಳಿಕ ಅವರು ತಂಡಕ್ಕೆ ಹಿಂತಿರುಗಬೇಕಾಯಿತು. ಆದ್ದರಿಂದ ಸ್ವಲ್ಪಮಟ್ಟಿಗೆ ಅದೇ ಲಯವನ್ನು ಕಾಯ್ದುಕೊಳ್ಳುವುದು ಕಷ್ಟ”. ಎಂದು ರಾಹುಲ್​ ಪರ ವಾಸಿಂ ಬ್ಯಾಟ್​ ಬೀಸಿದ್ದಾರೆ.

“ಕೆ.ಎಲ್ ರಾಹುಲ್ ಈಗಾಗಲೇ ಒಂದೆರಡು ಬಾರಿ ಗಾಯಗೊಂಡಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ಅವರ ಬ್ಯಾಟಿಂಗ್ ಮಂಕಾಗಿರುವುದಕ್ಕೆ ಬಹುಶಃ ಇದೂ ಒಂದು ಕಾರಣವಾಗಿರಬಹುದು. ಆದರೆ ನನ್ನ ಪ್ರಕಾರ ನಿಸ್ಸಂಶಯವಾಗಿ ಸಂಖ್ಯೆಗಳು ಇವೆ ಮತ್ತು ಅವರು ಆ ಸಂಖ್ಯೆಯನ್ನು ಸುಧಾರಿಸಲು ಬಯಸುತ್ತಾರೆ. ಅವರು ಎಲ್ಲ ಮಾದರಿಯ ಕ್ರಿಕೆಟ್​ನಲ್ಲಿಯೂ ತಮ್ಮ ಸಾಮರ್ಥ್ಯ ಏನೆಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಆದ್ದರಿಂದ ಕೇವಲ ಎರಡು ಪಂದ್ಯಗಳ ಪ್ರದರ್ಶನದ ಮೇಲೆ ಒಬ್ಬ ಆಟಗಾರನ ಸಾಮರ್ಥ್ಯವನ್ನು ನಿರ್ಧರಿಸುವುದು ಸರಿಯಲ್ಲ” ಎಂದು ಜಾಫರ್​ ಹೇಳಿದ್ದಾರೆ.

ಇದನ್ನೂ ಓದಿ | T20 World Cup | ಪಾಕ್​ಗೆ​ ಎದುರಾದ ಸ್ಥಿತಿ ಭಾರತ ತಂಡಕ್ಕೂ ಎದುರಾಗಲಿದೆ ಅಖ್ತರ್​ ಹೀಗೆ ಹೇಳಿದ್ದು ಯಾಕೆ?

Exit mobile version