Site icon Vistara News

KL Rahul: 2ನೇ ಬಾರಿ ಚಿನ್ನದ ಪದಕ ಗೆದ್ದ ಕನ್ನಡಿಗ ಕೆ.ಎಲ್​ ರಾಹುಲ್​

kl rahul

ಲಕ್ನೋ: ಈ ಬಾರಿಯ ವಿಶ್ವಕಪ್(icc world cup 2023)​ ಟೂರ್ನಿಯಲ್ಲಿ ಬಿಸಿಸಿಐ(BCCI) ವಿನೂತ ಶೈಲಿಯ ಪ್ರಯೋಗವೊಂದನ್ನು ಜಾರಿಗೆ ತಂದಿರುವುದು ಈಗಾಗಕಲೇ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅದೇನೆಂದರೆ ಪಂದ್ಯದ ವೇಳೆ ಯಾರು ಉತ್ತಮವಾಗಿ ಫೀಲ್ಡಿಂಗ್​ ನಡೆಸುತ್ತಾರೋ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತದೆ. ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಈ ಪ್ರಶಸ್ತಿ ಕನ್ನಡಿಗ ಕೆ.ಎಲ್​ ರಾಹುಲ್(KL Rahul)​ ಅವರಿಗೆ ಒಲಿದಿದೆ.

ಪಂದ್ಯದ ಮುಕ್ತಾಯದ ಬಳಿಕ ಫೀಲ್ಡಿಂಗ್​ ಕೋಚ್​ ಟಿ. ದಿಲೀಪ್ ಅವರು ತಂಡದ ಫೀಲ್ಡಿಂಗ್​ ಪ್ರದರ್ಶನದ ಬಗ್ಗೆ ವಿವರಿಸುತ್ತಾರೆ. ಯಾವೆಲ್ಲ ಆಟಗಾರರು ಉತ್ತಮ ನಿರ್ವಹಣೆ ತೋರಿದ್ದಾರೋ ಅವರಿಗೆ ಪ್ರಶಂಸೆ ವ್ಯಕ್ತಪಡಿಸಲಾಗುತ್ತದೆ. ಅತ್ಯತ್ತಮ ಫೀಲ್ಡಿಂಗ್​ ನಡೆಸಿದ ಒಬ್ಬ ಆಟಗಾರನಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತದೆ. ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಸ್ಟಂಪ್ ದಿಂದೆ ಅದ್ಭುತ ಪ್ರದರ್ಶನ ನೀಡಿದ ರಾಹುಲ್ ಹಲವು ಡೈವ್​ಗಳ ಮೂಲಕ ವೈಡ್​ ಎಸೆತವನ್ನು ಬೌಂಡರಿ ಹೋಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದರು ಇದೇ ಕಾರಣಕ್ಕೆ ಅವರಿಗೆ ಅತ್ಯತ್ತಮ ಫೀಲ್ಡರ್​ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ರಾಹುಲ್​ ಅವರು ಪದಕ ಕಚ್ಚಿ ಸಂಭ್ರಮಿಸಿದರು.

ಇದನ್ನೂ ಓದಿ Viral Video ಎಲ್​ಬಿಡಬ್ಲ್ಯೂ ವಿಚಾರದಲ್ಲಿ ಕುಲ್​ದೀಪ್​ಗೆ ಚಳಿ ಬಿಡಿಸಿದ ರೋಹಿತ್​ ಶರ್ಮ

ಲಕ್ನೋದ ಏಕಾನ ಕ್ರಿಕೆಟ್​ ಸ್ಟೇಡಿಯಂನಲ್ಲಿ ಲೈಟಿಂಗ್ ಮೂಲಕ ಕೆ.ಎಲ್ ರಾಹುಲ್ ಅವರ ಜೆರ್ಸಿ ಪ್ರದರ್ಶಿಸಿ ಈ ಪ್ರಶಸ್ತಿಯನ್ನು ಘೋಷಿಸಲಾಯಿತು. ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯದಲ್ಲಿ ಈ ಪ್ರಶಸ್ತಿ ಪಡೆದಿದ್ದ ಶ್ರೇಯಸ್ ಅಯ್ಯರ್ ಅವರು ರಾಹುಲ್ ಕೊರಳಿಗೆ ಚಿನ್ನದ ಪದಕ ಹಾಕಿದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿಯೂ ರಾಹುಲ್​ ಅವರಿಗೆ ಅತ್ಯತ್ತಮ ಫೀಲ್ಡರ್​ ಪ್ರಶಸ್ತಿ ಒಲಿದಿತ್ತು. ಒಟ್ಟಾರೆ ಅವರು 2 ಪ್ರಶಸ್ತಿಯನ್ನು ಪಡೆದಂತಾಗಿದೆ. ಮೊದಲ ಚಿನ್ನದ ಪದಕ ಗೆದ್ದ ಸಾಧನೆ ವಿರಾಟ್​ ಕೊಹ್ಲಿಯದ್ದು. ಕೊಹ್ಲಿ ಆಸೀಸ್​ ವಿರುದ್ಧ ಚೆನ್ನೈಯಲ್ಲಿ ನಡೆದಿದ್ದ ಪಂದ್ಯದಲ್ಲಿ ಉತ್ತಮ ಫೀಲ್ಡಿಂಗ್​ ನಡೆಸಿ ಈ ಪ್ರಶಸ್ತಿಯನ್ನು ಗೆದ್ದಿದ್ದರು. ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್ ಕೂಡ ಈ ಪ್ರಶಸ್ತಿ ಪಡೆದಿದ್ದಾರೆ. ಆಟಗಾರರಲ್ಲಿ ಸ್ಫೂರ್ತಿ ತುಂಬುವ ನಿಟ್ಟಿನಲ್ಲಿ ಬಿಸಿಸಿಐ ಈ ವಿನೂತನ ಕ್ರಮ ಜಾರಿಗೆ ತಂದಿದೆ.

ಇದನ್ನೂ ಓದಿ Rohit Sharma: ಸಚಿನ್​ ದಾಖಲೆ ಸರಿಗಟ್ಟಿ ಇನ್ನೂ ಹಲವು ದಾಖಲೆ ಬರೆದ ರೋಹಿತ್​ ಶರ್ಮ

ಬ್ಯಾಟಿಂಗ್​ನಲ್ಲಿ ರಾಹುಲ್​ 3 ಬೌಂಡರಿ ನೆರವಿನಿಂದ 39 ರನ್​ ಬಾರಿಸಿದರು. ನಾಯಕ ರೋಹಿತ್​ ಶರ್ಮ ಜತೆ ನಾಲ್ಕನೇ ವಿಕೆಟ್​ಗೆ 91 ರನ್​ಗಳ ಜತೆಯಾಟ ನಡೆಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರುಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಸದ್ಯ ರಾಹುಲ್​ ಕೀಪಿಂಗ್​ ಮತ್ತು ಬ್ಯಾಟಿಂಗ್​ ಎರಡರಲ್ಲೂ ಉತ್ತಮ ಫಾರ್ಮ್​ನಲ್ಲಿದ್ದಾರೆ.

ಇದನ್ನೂ ಓದಿ ICC World Cup 2023: ವಿಶ್ವಕಪ್​ನಲ್ಲಿ ಆಸೀಸ್​ ಹಿಂದಿಕ್ಕಿ ಅನಗತ್ಯ ದಾಖಲೆ ಬರೆದ ಇಂಗ್ಲೆಂಡ್​

ಸತತ ಆರನೇ ಗೆಲುವು ಕಂಡ ಭಾರತ

ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಭಾರತ ರೋಹಿತ್​ ಮತ್ತು ಸೂರ್ಯಕುಮಾರ್​ ಅವರ ಬ್ಯಾಟಿಂಗ್​ ಸಾಹಸದಿಂದ ನಿಗದಿತ 50 ಓವರ್​ಗಳಲ್ಲಿ​ 9 ವಿಕೆಟ್​ನಷ್ಟಕ್ಕೆ 229 ರನ್ ಗಳಿಸಿತು. ಸಣ್ಣ ಮೊತ್ತಕ್ಕೆ ಭಾರತವನ್ನು ಕಟ್ಟಿಹಾಕಿದ ಜೋಶ್​ನಲ್ಲಿ ಗುರಿ ಬೆನ್ನಟ್ಟಲಾರಂಭಿಸಿದ ಇಂಗ್ಲೆಂಡ್​ ಉತ್ತಮ ಆರಂಭ ಪಡೆದರೂ ಆ ಬಳಿಕ ನಾಟಕೀಯ ಕುಸಿತ ಕಂಡು 34.5 ಓವರ್​ಗಳಲ್ಲಿ 129 ರನ್​ಗೆ ಸರ್ವಪತನ ಕಂಡು ಹೀನಾಯ ಸೋಲು ಕಂಡಿತು. ಘಾತಕ ಬೌಲಿಂಗ್​ ದಾಳಿ ನಡೆಸಿ 22 ರನ್​ ವೆಚ್ಚದಲ್ಲಿ 4 ವಿಕೆಟ್​ ಕಿತ್ತ ಮೊಹಮ್ಮದ್​ ಶಮಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಜಸ್​ಪ್ರೀತ್​ ಬುಮ್ರಾ ಮೂರು ವಿಕೆಟ್​ ಪಡೆದರು. ಭಾರತ ಭರ್ತಿ 100ರನ್​ ಅಂತರದ ಗೆಲುವು ಸಾಧಿಸಿತು.

Exit mobile version