ಮುಂಬಯಿ: ಟೀಮ್ ಇಂಡಿಯಾ ಆಟಗಾರ ಕೆ.ಎಲ್. ರಾಹುಲ್(KL Rahul) ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮದುವೆ ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ಮೊಬೈಲ್ ಫೋನ್ ಬಳಕೆ ನಿಷೇಧಿಸಲಾಗಿದೆ ಎಂದು ವರದಿಯಾಗಿದೆ.
ಖಂಡಾಲದಲ್ಲಿರುವ ಸುನೀಲ್ ಶೆಟ್ಟಿ ಅವರ ಫಾರ್ಮ್‌ಹೌಸ್‌ನಲ್ಲಿ ಈ ಜೋಡಿಗಳ ವಿವಾಹ ಸಮಾರಂಭ ನಡೆಯಲಿದೆ ಎಂದು ಸುದ್ದಿಯಾಗಿದೆ. ವಿವಾಹ ಪೂರ್ವ ಕಾರ್ಯಕ್ರಮಗಳು ಜನವರಿ 22 ಭಾನುವಾರದಿಂದಲೇ ಆರಂಭವಾಗಿದ್ದು ಹಳದಿ ಕಾರ್ಯಕ್ರಮ ನಡೆದಿದೆ ಎಂದು ವರದಿಯಾಗಿದೆ. ಇದಕ್ಕೆ ಪೂರಕವೆಂಬಂತೆ ಅಥಿಯಾ ಶೆಟ್ಟಿಗೆ ಹಳದಿ ಹಚ್ಚಿರುವ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿವಾಹ ಸಮಾರಂಭದಲ್ಲಿ ಕೇವಲ 100 ಅತಿಥಿಗಳು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದ್ದು, ಇತರ ಕೆಲವು ಸೆಲೆಬ್ರಿಟಿಗಳಂತೆ ಅಥಿಯಾ ಮತ್ತು ಕೆಎಲ್ ರಾಹುಲ್ ಮದುವೆಗೆ ಬರುವ ಅತಿಥಿಗಳಿಗೆ ಫೋನ್ ಬಳಸದಂತೆ ವಿನಂತಿಸಿದ್ದಾರೆ ಎಂದು ತಿಳಿದುಬಂದಿದೆ. ಮದುವೆ ಸಮಾರಂಭದಲ್ಲಿ ಜಾಕಿ ಶ್ರಾಫ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಎಂ.ಎಸ್. ಧೋನಿ, ವಿರಾಟ್ ಕೊಹ್ಲಿ ಸೇರಿ ಟೀಮ್ ಇಂಡಿಯಾದ ಕೆಲ ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದಿದೆ. ಆದರೆ ಈ ಬಗ್ಗೆ ರಾಹುಲ್ ಹಾಗೂ ಅಥಿಯಾ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಇದನ್ನೂ ಓದಿ | KL Rahul | ಭಾರೀ ಎಡ್ಡೆ ಗೊಬ್ಬಿಯ: ಸೂರ್ಯಕುಮಾರ್ ಆಟಕ್ಕೆ ತುಳುವಿನಲ್ಲೇ ಕೆ.ಎಲ್ ರಾಹುಲ್ ಶ್ಲಾಘನೆ!