Site icon Vistara News

KL Rahul | ಲಂಕಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಭರ್ಜರಿ ಬ್ಯಾಟಿಂಗ್​ ಅಭ್ಯಾಸ ನಡೆಸಿದ ಕೆ.ಎಲ್​ ರಾಹುಲ್!​

KL Rahul

ಮುಂಬಯಿ: ಕಳಪೆ ಬ್ಯಾಟಿಂಗ್​ ಫಾರ್ಮ್​ನಲ್ಲಿರುವ ಟೀಮ್ ಇಂಡಿಯಾ ಆಟಗಾರ ಕೆ.ಎಲ್​ ರಾಹುಲ್(KL Rahul)​ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಭರ್ಜರಿ ಬ್ಯಾಟಿಂಗ್​ ಅಭ್ಯಾಸ ನಡೆಸಿದ್ದಾರೆ. ರಾಹುಲ್​ ಬ್ಯಾಟಿಂಗ್​ ಅಭ್ಯಾಸ ನಡೆಸುತ್ತಿರುವ ವಿಡಿಯೊವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರಾಹುಲ್​ ವರ್ಷಾರಂಭದ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ತಮ್ಮ ಬ್ಯಾಟಿಂಗ್ ಫಾರ್ಮ್​ ಕಂಡುಕೊಳ್ಳುವ ನಿರೀಕ್ಷೆಯಲ್ಲಿಯಲ್ಲಿದ್ದಾರೆ. ​ಈ ಸರಣಿಯಲ್ಲಿ ರಾಹುಲ್​ಗೆ ಫಾರ್ಮ್​ ಕಂಡುಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಇದೇ ವರ್ಷ ಭಾರತದ ಆತಿಥ್ಯದಲ್ಲಿ ನಡೆಯಲ್ಲಿರುವ ಏಕ ದಿನ ವಿಶ್ವಕಪ್​ಗೆ ಈಗಾಗಲೇ ಬಿಸಿಸಿಐ ಕಳಪೆ ಫಾರ್ಮ್​ನಲ್ಲಿರುವ ಆಟಗಾರರ ಮೇಲೆ ನಿರ್ಧಾಕ್ಷಣ್ಯವಾಗಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಖಡಕ್​ ಸೂಚನೆ ನೀಡಿದೆ.

ವರ್ಷದ ಆರಂಭದಲ್ಲಿಯೇ ಉಪನಾಯಕತ್ವ ಪಟ್ಟವನ್ನು ಕಳೆದುಕೊಂಡಿರುವ ರಾಹುಲ್ ವಿಶ್ವ ಕಪ್ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ ಈ ಸರಣಿಯಲ್ಲಿ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಅದ್ಭುತ ಪ್ರದರ್ಶನ ತೋರಬೇಕಾಗಿದೆ. ಒಂದೊಮ್ಮೆ ರಾಹುಲ್​ ಈ ಸರಣಿಯಲ್ಲೂ ಕಳಪೆ ಪ್ರದರ್ಶನ ತೋರಿದರೆ ಅವರಿಗೆ ಟೀಮ್​ ಇಂಡಿಯಾದ ಬಾಗಿಲು ಮುಚ್ಚುವುದರಲ್ಲಿ ಅನುಮಾನವೇ ಇಲ್ಲ ಎನ್ನಲಡ್ಡಿಯಿಲ್ಲ.

ಮದುವೆ ತಯಾರಿಯಲ್ಲಿ ರಾಹುಲ್​!

ರಾಹುಲ್​ ಇದೇ ತಿಂಗಳು ಬಹುಕಾಲದ ಗೆಳತಿ ಅಥಿಯಾ ಶೆಟ್ಟಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಈಗಾಗಲೇ ಎಲ್ಲಡೆ ಹರಿದಾಡಲಾರಂಭಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ವಿವಾಹ ಸಮಾರಂಭ ಇದೇ ತಿಂಗಳ 21 ಮತ್ತು 23ರ ನಡುವೆ ನಡೆಯಲಿದೆ. ಹೀಗಾಗಿ ರಾಹುಲ್ ಮದುವೆ ತಯಾರಿಗಾಗಿ​ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ಬ್ರೇಕ್ ಪಡೆದಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಇದೀಗ ಮದುವೆಯ ಎಲ್ಲ ತಯಾರಿಯನ್ನು ಮುಗಿಸಿ ಮತ್ತೆ ಮೈದಾನಕ್ಕೆ ಮರಳಲು ಸಜ್ಜಾಗಿದ್ದಾರೆ. ಲಂಕಾ ವಿರುದ್ಧದ ಏಕದಿನ ಮುಗಿದ ಬಳಿಕ ರಾಹುಲ್​ ಮದುವೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ | KL Rahul | ಮೈಸೂರು ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ಟೀಮ್​ ಇಂಡಿಯಾ ಕ್ರಿಕೆಟಿಗ ಕೆ.ಎಲ್​. ರಾಹುಲ್​

Exit mobile version