Site icon Vistara News

KL Rahul: ಪತ್ನಿಯ ರ‍್ಯಾಂಪ್ ವಾಕ್‌ ಕಂಡು ರೊಮ್ಯಾಂಟಿಕ್​ ಕಮೆಂಟ್‌ ಮಾಡಿದ ಕೆ.ಎಲ್​ ರಾಹುಲ್​

kl rahul and athiya shetty

ಬೆಂಗಳೂರು: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ, ಕನ್ನಡಿಗ ಕೆ.ಎಲ್​ ರಾಹುಲ್(KL Rahul)​ ಅವರು ತಮ್ಮ ಪತ್ನಿ, ಬಾಲಿವುಡ್​ ನಟಿ ಅಥಿಯಾ ಶೆಟ್ಟಿ(Athiya Shetty) ಅವರ ರ‍್ಯಾಂಪ್ ವಾಕ್‌(ramp walk) ಕಂಡು ಫಿದಾ ಆಗಿದ್ದಾರೆ. ಜತೆಗೆ ಪತ್ನಿಯ ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂಡಿಯಾ ಕಲ್ಚರ್ ವೀಕ್ 2023 ಫ್ಯಾಷನ್‌ ಶೋನಲ್ಲಿ ಪಾಲ್ಗೊಂಡು ಅಥಿಯಾ ಶೆಟ್ಟಿ ರ‍್ಯಾಂಪ್ ವಾಕ್‌ ಮಾಡಿದ್ದಾರೆ. ಡಿಸೈನರ್ ಅನಾಮಿಕಾ ಖನ್ನಾ ಅವರ ಸಿದ್ದಪಡಿಸಿದ್ದ ಡ್ರೆಸ್​ನಲ್ಲಿ ಅಥಿಯಾ ಕಂಗೊಳ್ಳಿಸಿದ್ದಾರೆ. ಪತ್ನಿ ರ‍್ಯಾಂಪ್ ವಾಕ್‌ ಮಾಡುತ್ತಿರುವ ವಿಡಿಯೊವನ್ನು ಇನ್​ಸ್ಟಾಗ್ರಾಮ್​ನಲ್ಲಿ ಸ್ಟೋರಿ ಹಾಕಿದ ರಾಹುಲ್ “ನನ್ನ ಬೆರಗುಗೊಳಿಸುವ ಪತ್ನಿ” ಎಂದು ಬರೆದು ಹಾರ್ಟ್ ಎಮೋಜಿ ಹಾಕಿದ್ದಾರೆ. ಬೆಂಗಳೂರಿನ ಎನ್​ಸಿಎಯಲ್ಲಿ ಕ್ರಿಕೆಟ್​ ತರಬೇತಿ ಶಿಬಿರದಲ್ಲಿರುವ ಕಾರಣ ರಾಹುಲ್​ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಪತ್ನಿಯ ಫೋಟೊ ಹಾಕಿ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಅಥಿಯಾ ತಂದೆ ಬಾಲಿವುಡ್​ ನಟ ಸುನೀಲ್​ ಶೆಟ್ಟಿ ಅವರು ‘ದೇಸಿ ಗರ್ಲ್​’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೇ 1ರಂದು ನಡೆದ ಆರ್​ಸಿಬಿ ವಿರುದ್ಧದ ಐಪಿಎಲ್​ ಪಂದ್ಯದ ವೇಳೆ ರಾಹುಲ್ ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿ ಮೈದಾನದಲ್ಲೇ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಆಟಗಾರರ ಸಹಾಯದಿಂದ ಮೈದಾನದಿಂದ ಹೊರಕ್ಕೆ ಕೊಂಡೊಯ್ಯಲಾಗಿತ್ತು. ಗಾಯದ ಪ್ರಮಾಣ ಗಂಭಿರವಾದ ಪರಿಣಾಮ ಅವರಿಗೆ ಲಂಡನ್​ನಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಹೀಗಾಗಿ ಅವರು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಿಂದ ಹೊರಗುಳಿದಿದ್ದರು. ಸದ್ಯ ಚೇತರಿಸಿಕೊಂಡಿರುವ ಅವರು ಏಷ್ಯಾಕಪ್​ನಲ್ಲಿ ತಂಡ ಸೇರುವ ಸಾಧ್ಯತೆ ಇದೆ.

ಇದನ್ನೂ ಓದಿ KL Rahul : ರೂಮರ್ ಹಬ್ಬಿಸುವವರಿಗೆ ಬ್ಯಾಟ್​ ಹಿಡಿದು ಬಿಸಿ ಮುಟ್ಟಿಸಿದ ಕೆ. ಎಲ್​ ರಾಹುಲ್​!

ಕೆ.ಎಲ್​. ರಾಹುಲ್(Athiya Shetty KL Rahul wedding)​ ಮತ್ತು ಬಾಲಿವುಡ್‌ ತಾರೆ ಅಥಿಯಾ ಶೆಟ್ಟಿ(Athiya kl rahul marriage) ಜನವರಿ 23ರಂದು ಖಾಸಗಿ ಸಮಾರಂಭದಲ್ಲಿ ಸಪ್ತಪದಿ ತುಳಿದಿದ್ದರು. ಖಂಡಾಲಾದಲ್ಲಿರುವ ಸುನೀಲ್ ಶೆಟ್ಟಿ ಅವರ ಐಷಾರಾಮಿ ಬಂಗಲೆಯಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು.

Exit mobile version