Site icon Vistara News

ಸೆಂಚುರಿ ಬಾರಿಸಿ ಸೆಂಚುರಿಯನ್​​ನಲ್ಲಿ ದಾಖಲೆ ಬರೆದ ಕನ್ನಡಿಗ ಕೆಎಲ್​ ರಾಹುಲ್​

KL Rahul played a number of delightful shots on the second morning; a ramp over the slips standing out

ಜೊಹಾನ್ಸ್​ಬರ್ಗ್​: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ, ಕನ್ನಡಿಗ ಕೆಎಲ್​ ರಾಹುಲ್(KL Rahul)​​ ದಕ್ಷಿಣ ಆಫ್ರಿಕಾ ವಿರುದ್ಧ ಸಾಗುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ(South Africa vs India, 1st Test) ಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ಬರೆದಿದ್ದಾರೆ.

ಸೆಂಚುರಿಯನ್​ ಮೈದಾನದಲ್ಲಿ ಸತತ 2 ಶತಕ ಬಾರಿಸಿದ ಮೊದಲ ವಿದೇಶಿ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಿದ್ದಾರೆ. ರಾಹುಲ್ ಹೊರತುಪಡಿಸಿ ಸೆಂಚುರಿಯನ್​ನಲ್ಲಿ ಉಳಿದ ಯಾವುದೇ ವಿದೇಶಿ ಬ್ಯಾಟರ್‌ ಟೆಸ್ಟ್‌ನಲ್ಲಿ ಒಂದಕ್ಕಿಂತ ಹೆಚ್ಚು ಶತಕ ಬಾರಿಸಿಲ್ಲ. 2021ರಲ್ಲಿ ರಾಹುಲ್​ ಇಲ್ಲಿ ಆರಂಭಿಕನಾಗಿ ಕಣಕ್ಕಿಳಿದು 123 ರನ್​ ಬಾರಿಸಿದ್ದರು.

ಈ ಬಾರಿಯ ಮೊದಲ ಇನಿಂಗ್ಸ್​ನಲ್ಲಿ ಒಟ್ಟು 14 ಬೌಂಡರಿ ಮತ್ತು 4 ಸೊಗಸಾದ ಸಿಕ್ಸರ್​ ನೆರವಿನಿಂದ 101 ರನ್​ ಗಳಿಸಿ ಬರ್ಗರ್​ಗೆ ವಿಕೆಟ್​ ಒಪ್ಪಿಸಿದರು. 70 ರನ್​ ಗಳಿಸಿದ್ದ ರಾಹುಲ್​ ದ್ವಿತೀಯ ದಿನದಾಟದಲ್ಲಿ 31 ರನ್​ ಬಾರಿಸಿ ಶತಕ ಪೂರ್ತಿಗೊಳಿಸಿದರು. ದ್ವಿತೀಯ ದಿನದಾಟದಲ್ಲಿ 2 ಸಿಕ್ಸರ್​ ಮತ್ತು 4 ಬೌಂಡರಿ ಬಾರಿಸಿದರು. ಅದರಲ್ಲೂ ಸಿಕ್ಸರ್​ ಮೂಲಕವೇ ಶತಕ ಪೂರ್ತಿಗೊಳಿಸಿದರು. ಇದು ಅವರ 8ನೇ ಟೆಸ್ಟ್​ ಶತಕವಾಗಿದೆ. ದ್ವಿತೀಯ ಇನಿಂಗ್ಸ್​ನಲ್ಲಿಯೂ ರಾಹುಲ್​ ಬ್ಯಾಟಿಂಗ್​ ಮೇಲೆ ತಂಡ ಪೂರ್ಣ ನಂಬಿಕೆ ಇಟ್ಟಿದೆ.

ವಿಕೆಟ್​ ಕೀಪರ್​ ಆಗಿಯೂ ದಾಖಲೆ

ರಾಹುಲ್​ ಅವರು ಈ ಶತಕದೊಂದಿಗೆ ದಕ್ಷಿಣ ಆಫ್ರಿಕಾದಲ್ಲಿ ಶತಕ ಸಿಡಿಸಿದ ಭಾರತದ ಎರಡನೇ ವಿಕೆಟ್‌ ಕೀಪರ್‌ ಎಂಬ ದಾಖಲೆ ಬರೆದಿದ್ದಾರೆ. ಇದಕ್ಕೂ ಮುನ್ನ ರಿಷಭ್‌ ಪಂತ್‌ ಅವರು ಈ ಸಾಧನೆ ಮಾಡಿದ್ದರು. ಸದ್ಯ ಚೇತರಿಕೆಯ ಹಾದಿಯಲ್ಲಿರುವ ಪಂತ್​ ಅವರು ಮುಂದಿನ ವರ್ಷ ಐಪಿಎಲ್​ ಆಡುವ ಮೂಲಕ ಮತ್ತೆ ಕ್ರಿಕೆಟ್​ ಕಮ್​ಬ್ಯಾಕ್​ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ಸಚಿನ್​ ದಾಖಲೆ ಸರಿಗಟ್ಟಿದ ರಾಹುಲ್

ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ್ದ ಸಚಿನ್ ತೆಂಡುಲ್ಕರ್ ಹಾಗೂ ಅಜಿಂಕ್ಯ ರಹಾನೆ ಅವರ ದಾಖಲೆಯನ್ನು ರಾಹುಲ್​ ಈ ಶತಕದ ಮೂಲಕ ಸರಿಗಟ್ಟಿದ್ದಾರೆ. ಸಚಿನ್​ ಮತ್ತು ರಹಾನೆ ತಲಾ ಎರಡು ಬಾಕ್ಸಿಂಗ್ ಡೇ ಟೆಸ್ಟ್​ ಶತಕ ಬಾರಿಸಿದ್ದರು. ಇದೀಗ ರಾಹುಲ್​ ಕೂಡ 2 ಶತಕ ಬಾರಿಸಿ ಜಂಟಿ ದಾಖಲೆ ಹೊಂದಿದ್ದಾರೆ. ಒಂದೊಮ್ಮೆ ದ್ವಿತೀಯ ಇನಿಂಗ್ಸ್​ನಲ್ಲಿ ರಾಹುಲ್​ ಶತಕ ಬಾರಿಸಿದರೆ ಸಚಿನ್​ ಮತ್ತು ರಹಾನೆ ದಾಖಲೆ ಪತನಗೊಳ್ಳಲಿದೆ.

ಇದನ್ನೂ ಓದಿ ಶತಕ ಬಾರಿಸಿ ತಂಡವನ್ನು ಕಾಪಾಡಿದ ರಾಹುಲ್​ಗೆ ಕ್ರಿಕೆಟ್​ ದೇವರು ಸಚಿನ್​ ಮೆಚ್ಚುಗೆ

Exit mobile version