Site icon Vistara News

KL Rahul: ದ್ವಿತೀಯ ಟೆಸ್ಟ್​ ಪಂದ್ಯದ ಬಳಿಕ ಕೆ.ಎಲ್​ ರಾಹುಲ್ ಭವಿಷ್ಯ ನಿರ್ಧಾರ; ಸುನೀಲ್​ ಗವಾಸ್ಕರ್​​

IND VS AUS

#image_title

ನವದೆಹಲಿ: ಆಸ್ಟ್ರೇಲಿಯಾ(IND VS AUS) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿ ಟೀಕೆಗೆ ಗುರಿಯಾಗಿದ್ದ ಕೆ.ಎಲ್​ ರಾಹುಲ್(KL Rahul)​ ​ಅವರಿಗೆ ದ್ವಿತೀಯ ಪಂದ್ಯದಲ್ಲಿಯೂ ಅವಕಾಶ ಸಿಗಲಿದೆ ಎಂದು ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಸುನೀಲ್(sunil gavaskar)​ ಗವಾಸ್ಕರ್​ ಹೇಳಿದ್ದಾರೆ.

ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಇನಿಂಗ್ಸ್ ಮತ್ತು 132 ರನ್​ಗಳ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಸುನೀಲ್ ಗವಾಸ್ಕರ್, ರಾಹುಲ್​ ಮೊದಲ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಲಿಲ್ಲ ಎಂಬ ಕಾರಣಕ್ಕೆ ಅವರನ್ನು ದ್ವಿತೀಯ ಪಂದ್ಯದಿಂದ ಕೈಬಿಡಬೇಕು ಎನ್ನುವುದು ಸರಿಯಲ್ಲ. ಆದರೆ ಒಂದೊಮ್ಮೆ ರಾಹುಲ್​ ಅವರು ದ್ವಿತೀಯ ಟೆಸ್ಟ್​ ಪಂದ್ಯದಲ್ಲಿಯೂ ವೈಫಲ್ಯ ಕಂಡರೆ ಆಗ ಗಂಭೀರವಾಗಿ ಯೋಚನೆ ಮಾಡಬೇಕಿದೆ ಎಂದು ಹೇಳಿದರು.​

“ಶುಭಮನ್​ ಗಿಲ್ ಅವರಂತಹ ಆಟಗಾರರು ಕಾದು ನಿಂತಿರುವಾಗ ಭಾರತ ತಂಡಕ್ಕೂ ಕೆಲ ಸಂದರ್ಭದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬಹಳ ಕಷ್ಟವಾಗಲಿದೆ. ಅಕ್ಷರ್ ಪಟೇಲ್ ಅವರು ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡು ಉತ್ತಮ ಪ್ರದರ್ಶನ ತೋರುತ್ತಿರುವುದು ಸಂತಸ ತಂದಿದೆ. ಇದು ಭಾರತದ ಬೆಂಚ್ ಸ್ಟ್ರೆಂತ್ ಬಲಿಷ್ಠವಾಗಿರುವುದನ್ನು ತೋರಿಸುತ್ತದೆ” ಎಂದು ಸುನಿಲ್ ಗವಾಸ್ಕರ್ ಹೇಳಿದರು.

ಇದನ್ನೂ ಓದಿ KL Rahul : ನಿಮ್ಮಷ್ಟು ಅವಕಾಶ ಇನ್ಯಾರಿಗೂ ಸಿಗದು ಎಂದು ಕೆ. ಎಲ್​ ರಾಹುಲ್​ ತರಾಟೆಗೆ ತೆಗೆದುಕೊಂಡ ವೆಂಕಟೇಶ್​ ಪ್ರಸಾದ್​​

ದೆಹಲಿಯಲ್ಲಿ ನಡೆಯುವ ಈ ಟೆಸ್ಟ್​ ಪಂದ್ಯ ರಾಹುಲ್​ಗೆ ಮಹತ್ವದ ಪಂದ್ಯವಾಗಿದೆ. ತಂಡದಲ್ಲಿ ಅವರು ಮುಂದುವರಿಯ ಬೇಕಿದ್ದರೆ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಬೇಕಿದೆ. ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್​ ಪಂದ್ಯ ಫೆ.17ರಿಂದ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆರಂಭವಾಗಲಿದೆ.

Exit mobile version