ಮುಂಬಯಿ : ಪ್ರದರ್ಶನ ವೈಫಲ್ಯ ಎದುರಿಸುತ್ತಿರುವ ಕನ್ನಡಿಗ ಕೆ. ಎಲ್ ರಾಹುಲ್ ಅವರು ಭಾರತ ಟಿ20 ತಂಡದಿಂದ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂಬುದಾಗಿ ವರದಿಯಾಗಿದೆ. ಕಾಯಂ ನಾಯಕ ರೋಹಿತ್ ಶರ್ಮ ಅವರು ಗಾಯದ ಸಮಸ್ಯೆಯಿಂದ ಮುಕ್ತಿ ಪಡೆಯದ ಕಾರಣ ಸದ್ಯಕ್ಕೆ ಅವರು ಮುಂದಿನ ಸರಣಿ
ಕೆ ಎಲ್ ರಾಹುಲ್ ಅವರು ಏಷ್ಯಾ ಕಪ್ ಬಳಿಕ 16 ಇನಿಂಗ್ಸ್ಗಳಲ್ಲಿ ಆಡಿದ್ದಾರೆ. ಅದರಲ್ಲಿ ಆರು ಅರ್ಧ ಶತಕಗಳನ್ನು ಮಾತ್ರ ಬಾರಿಸಲು ಶಕ್ತರಾಗಿದ್ದಾರೆ. ಉಳಿದ 10 ಇನಿಂಗ್ಸ್ಗಳಲ್ಲಿ ಅವರು ಒಂದಂಕಿ ಮೊತ್ತಕ್ಕೆ ಔಟಾಗಿದ್ದಾರೆ. ಅದರಲ್ಲೂ ಐದು ಪ್ರಮುಖ ಟೂರ್ನಿಗಳಲ್ಲಿ ಅವರು ಒಂದಂಕಿ ಮೊತ್ತ ಗಳಿಸಿ ಪೆವಿಲಿಯನ್ ಹಾದಿ ಹಿಡಿದ್ದಾರೆ. ಟಿ20 ವಿಶ್ವ ಕಪ್ನ ಪ್ರಮುಖ ಪಂದ್ಯಗಳಲ್ಲಿ ಪ್ರಭಾವಶಾಲಿ ಪ್ರದರ್ಶನ ನೀಡಲು ವಿಫಲಗೊಂಡಿದ್ದರು. ಹೀಗಾಗಿ ಅವರನ್ನು ತಂಡದಿಂದ ಕೈ ಬಿಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು.
ರಾಹುಲ್ ಅವರ ಅಲಭ್ಯತೆಯಲ್ಲಿ ಯುವ ಬ್ಯಾಟರ್ ಶುಬ್ಮನ್ ಗಿಲ್ ಇನಿಂಗ್ಸ್ ಆರಂಭಿಸುವ ಅವಕಾಶ ಪಡೆಯಲಿದ್ದಾರೆ. ಅದೇ ರೀತಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಪೃಥ್ವಿ ಶಾ ಅವರೂ ಅವಕಾಶ ಪಡೆಯಬಲ್ಲರು ಎನ್ನಲಾಗಿದೆ.
ಭಾರತ ತಂಡಕ್ಕೆ ಶ್ರೀಲಂಕಾ ವಿರುದ್ಧ ಮುಂದಿನ ಸರಣಿಯಾಗಿದ್ದು, ಜನವರಿ 3ರಿಂದ ಆರಂಭವಾಗಲಿದೆ. ಜನವರಿ 10ರಿಂದ ಏಕ ದಿನ ಪಂದ್ಯಗಳ ಸರಣಿ ನಡೆಯಲಿದೆ.
ಇದನ್ನೂ ಓದಿ | KL Rahul | ಅವರೊಬ್ಬ ಆಲ್‌ರೌಂಡರ್; ಕೆ ಎಲ್ ರಾಹುಲ್ ಮೌಲ್ಯಯುತ ಆಟಗಾರ ಎಂದ ಮಾಜಿ ನಾಯಕ