ಬೆಂಗಳೂರು: ಕೆ.ಎಲ್ ರಾಹುಲ್ 2023ರ ಏಷ್ಯಾ ಕಪ್ನಿಂದ ಹೊರಗುಳಿಯಲಿದ್ದಾರೆ ಎಂಬ ವರದಿಗಳು ಪ್ರಕಟವಾದ ಮರುದಿನವೇ ಬಲಗೈ ಬ್ಯಾಟರ್ ನಗರದ ರಾಷ್ಟ್ರಿಯ ಕ್ರಿಕೆಟ್ ಅಕಾಡೆಮಿಯಲ್ಲಿರುವ ನೆಟ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಈ ವೀಡಿಯೊವನ್ನು ಪ್ರಕಟವ ಮಾಡುವ ಮೂಲಕ ಅವರು ತಮ್ಮ ಬಗ್ಗೆ ರೂಮರ್ ಹಬ್ಬಿಸುತ್ತಿದ್ದವರಿಗೆ ಬಲವಾದ ಸಂದೇಶ ಕೊಟ್ಟಿದ್ದಾರೆ. ಐಪಿಎಲ್ ಬಳಿಕ ಕ್ರಿಕೆಟ್ ಚಟುವಟಿಕೆಯಿಂದ ಹೊರಗುಳಿದಿರುವ ಸ್ಟಾರ್ ಬ್ಯಾಟರ್ ಇದೀಗ ಸಂಫೂರ್ಣವಾಗಿ ಚೇತರಿಸಿಕೊಂಡಿದ್ದು, ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಋತುವಿನಲ್ಲಿ ಸ್ನಾಯು ಸೆಳೆತಕ್ಕೆ ಒಳಗಾದ ನಂತರ ಕೆ.ಎಲ್. ರಾಹುಲ್ ಅವರ ಮೊದಲ ಬ್ಯಾಟಿಂಗ್ ಸೆಷನ್ ಇದಾಗಿದೆ. ರಾಹುಲ್ ಲಂಡನ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಅಂದಿನಿಂದ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ ) ಪುನರ್ವಸತಿ ಪಡೆಯುತ್ತಿದ್ದಾರೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್ಗೆ ಮೊದಲು ರಾಹುಲ್ ಫಿಟ್ನೆಸ್ ಮರಳಿರುವುದು ಟೀಮ್ ಇಂಡಿಯಾಕ್ಕೆ ಉತ್ತಮ ಸುದ್ದಿಯಾಗಿದೆ.
FINALLY.. THE WAIT IS OVER! 🥺
— Kunal Yadav (@kunaalyaadav) July 17, 2023
KL Rahul with his weapon. ❤️🔥 pic.twitter.com/gEA6RpeKwa
ಬುಮ್ರಾ ಫಿಟ್ನೆಸ್
ಜಸ್ಪ್ರೀತ್ ಬುಮ್ರಾ ಫಿಟ್ನೆಸ್ ಅನ್ನು ಮರಳಿ ಪಡೆದಿದ್ದಾರೆ ಮತ್ತು ಐರ್ಲೆಂಡ್ ಟಿ20 ಐ ಸರಣಿಯ ಭಾಗವಾಗಲಿದ್ದಾರೆ ಎಂದು ಕ್ರಿಕ್ಬಜ್ ಈ ಹಿಂದೆ ವರದಿ ಮಾಡಿತ್ತು. ಐರ್ಲೆಂಡ್ ಸರಣಿಗೆ ಬುಮ್ರಾ ಆಯ್ಕೆಯಾಗುವ ನಿರೀಕ್ಷೆಯಿದೆ. ಇತ್ತೀಚಿನ ದಿನಗಳಲ್ಲಿ ಭಾರತದ ಮುಂಚೂಣಿ ಬೌಲರ್ ಗಮನಾರ್ಹ ಪ್ರಗತಿಯನ್ನು ತೋರಿಸಿದ್ದಾರೆ ಎಂದು ಕ್ರಿಕ್ಬಜ್ ಹೇಳಿದ್ದಾರೆ.
ಶ್ರೇಯಸ್ ಅಯ್ಯರ್ ಮರಳುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದರೆ ಆಟಗಾರ ಮತ್ತು ಆಯ್ಕೆದಾರರು ಶೀಘ್ರದಲ್ಲೇ ಪುನರಾಗಮನದ ಭರವಸೆ ಹೊಂದಿದ್ದಾರೆ ಎಂಬುದಾಗಿಯೂ ವರದಿಯಾಗಿದೆ.
Rahul Gandhi Fan : ರಾಹುಲ್ ಬೆನ್ನುಹತ್ತಿ ಬೆಂಗಳೂರಿಗೂ ಬಂದ ಫ್ಯಾನ್; ಯಾರೀ ಬರಿಗಾಲ ಅಭಿಮಾನಿ?
ಶ್ರೇಯಸ್ ಅಯ್ಯರ್ ಲಭ್ಯವಿರುತ್ತಾರೆಯೇ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಆದರೆ ಕೆ.ಎಲ್ ರಾಹುಲ್ ಐರ್ಲೆಂಡ್ ಸರಣಿಯಲ್ಲಿ ಮಾತ್ರವಲ್ಲದೆ ಏಷ್ಯಾ ಕಪ್ 2023ರಲ್ಲಿಯೂ ಕಾಣಿಸಿಕೊಳ್ಳುವ ಅವಕಾಶವಿಲ್ಲ. ರಾಹುಲ್ ಪ್ರಸ್ತುತ ಎನ್ಸಿಎನಲ್ಲಿ ಪುನಶ್ಚೇತನ ಪಡೆಯುತ್ತಿದ್ದಾರೆ ಎಂದು ಕ್ರಿಕ್ಬಜ್ ವರದಿ ಮಾಡಿತ್ತು.
ಭಾರತ ತಂಡದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡು ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ತಂಡದ ರಚನೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂಬುದಾಗಿಯೂ ವರದಿಯಾಗಿದೆ.