ನಾಗ್ಪುರ: ಭಾರತ ಹಾಗೂ ಆಸ್ಟ್ತೇಲಿಯಾ ತಂಡಗಳ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಟೂರ್ನಿಗೆ ಇನ್ನೊಂದೇ ದಿನ ಬಾಕಿ ಉಳಿದಿದೆ. ಯಾರೆಲ್ಲ ಆಡುವ 11ರ ಬಳಗದಲ್ಲಿ ಇರಬೇಕು ಎಂಬ ಚರ್ಚೆಯೂ ನಡೆಯುತ್ತಿದೆ. ಪ್ರಮುಖವಾಗಿ ಕೆ. ಎಲ್ ರಾಹುಲ್ ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಹೆಚ್ಚು ಚರ್ಚೆಗಳು ನಡೆಯುತ್ತಿವೆ. ಕೆ. ಎಲ್ ರಾಹುಲ್ ಭಾರತ ತಂಡದ ಆರಂಭಿಕ ಬ್ಯಾಟರ್ ಹಾಗೂ ಉಪನಾಯಕನ ಹೊಣೆಗಾರಿಕೆ ಹೊಂದಿರುವ ಹೊರತಾಗಿಯೂ ಅವರನ್ನು ಕೈ ಬಿಟ್ಟು ಉತ್ತಮ ಫಾರ್ಮ್ನಲ್ಲಿರುವ ಶುಬ್ಮನ್ ಗಿಲ್ಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಕಳೆದ ಎರಡು ತಿಂಗಳಲ್ಲಿ ಶುಬ್ಮನ್ ಗಿಲ್ ಫಾರ್ಮ್ ನೋಡಿದರೆ ಅವರಿಗೆ ಅವಕಾಶ ನೀಡದೆ ವಿಧಿಯಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಸ್ವತಃ ಕೆ ಎಲ್ ರಾಹುಲ್ ತಮ್ಮ ಬ್ಯಾಟಿಂಗ್ ಕ್ರಮಾಂಕದ ಮಂಗಳವಾರ (ಮಂಗಳವಾರ) ಸುಳಿವು ಕೊಟ್ಟಿದ್ದಾರೆ.
ಭಾರತ ತಂಡದ ಪರ 45 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೆ. ಎಲ್ ರಾಹುಲ್ ಅವರು 35.90 ಸ್ಟ್ರೈಕ್ ರೇಟ್ ಪ್ರಕಾರ 2513 ರನ್ ಬಾರಿಸಿದ್ದಾರೆ. 42 ಪಂದ್ಯಗಳಲ್ಲಿಯೂ ಅವರು ಆರಂಭಿಕರಾಗಿಯೇ ಬ್ಯಾಟ್ ಮಾಡಿದ್ದರು. ಆದರೆ ಈ ಬಾರಿ ಅವರಿಗೆ ರೋಹಿತ್ ಜತೆ ಇನಿಂಗ್ಸ್ ಆರಂಭಿಸುವ ಅವಕಾಶ ಸಿಗುವುದು ಡೌಟ್. ಹೀಗಾಗಿ ಪಂದ್ಯದ ಹಿನ್ನೆಲೆಯಲ್ಲಿ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಾವುದೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ರೆಡಿ ಎಂದು ಹೇಳುವ ಮೂಲಕ ಆಡುವ ಬಳಗದಲ್ಲಿ ಇರುವ ಸೂಚನೆ ಕೊಟ್ಟಿದ್ದಾರೆ.
ಒಂದು ವೇಳೆ ತಂಡ ನಾನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದನ್ನು ಬಯಸಿದರೆ ನಾನು ಅದಕ್ಕೆ ಸಿದ್ಧನಿದ್ದೇನೆ ಎಂದು ರಾಹುಲ್ ಹೇಳಿದ್ದಾರೆ.
ಇದನ್ನೂ ಓದಿ: Shubman Gill | ಭಾರತ ತಂಡದ ಬ್ಯಾಟರ್ ಶುಬ್ಮನ್ ಗಿಲ್ ಗೆಳತಿ ಯಾರು?
ಭಾರತದ ಪಿಚ್ ಪರಿಸ್ಥಿತಿಯನ್ನು ನೋಡಿದರೆ ಮೂರು ಸ್ಪಿನ್ನರ್ಗಳನ್ನು ಆಡಿಸುವುದು ಅತ್ಯಗತ್ಯ. ಆದರೆ, ಮೊದಲ ದಿನದಂದಲೇ ಪಿಚ್ ಹೇಗಿರುತ್ತದೆ ಎಂದು ಅಂದಾಜು ಮಾಡುವುದು ಅಸಾಧ್ಯ. ಹೀಗಾಗಿ ಅಗತ್ಯಕ್ಕೆ ತಕ್ಕ ಹಾಗೆ ತಂಡವನ್ನು ರೂಪಿಸಬೇಕಾಗುತ್ತದೆ ಎಂದು ರಾಹುಲ್ ಹೇಳಿದ್ದಾರೆ.